ಪ್ಯಾಕೇಜ್‌​-1ರಿಂದ ಬೊಕ್ಕಸಕ್ಕೆ 2500 ಕೋಟಿ ರುಪಾಯಿ ಮಾತ್ರ ಹೊರೆ

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿದ್ದು, ಈ ಪೈಕಿ ಬುಧವಾರ 6 ಲಕ್ಷ ಕೋಟಿ ಮೊತ್ತದ 15 ವಿವಿಧ ಕ್ರಮಗಳನ್ನು ಪ್ರಕಟಿಸಿದೆ. ಇದರಿಂದ 2,500 ಕೋಟಿ ರುಪಾಯಿ ಸರ್ಕಾರಕ್ಕೆ ನಷ್ಟವಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

1st package instalment of stimulus puts burden of 2500 crore rupees

ನವದೆಹಲಿ(ಮೇ.15): ಕೊರೋನಾದಿಂದ ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿದ್ದು, ಈ ಪೈಕಿ ಬುಧವಾರ 6 ಲಕ್ಷ ಕೋಟಿ ಮೊತ್ತದ 15 ವಿವಿಧ ಕ್ರಮಗಳನ್ನು ಪ್ರಕಟಿಸಿದೆ. ಆದರೆ ಮೊದಲ ದಿನದ ಪ್ಯಾಕೇಜ್‌ನಿಂದ ಕೇಂದ್ರದ ಬೊಕ್ಕಸಕ್ಕೆ ನೇರವಾಗಿ ಕೇವಲ 2500 ಕೋಟಿ ರು. ಮಾತ್ರ ಹೊರೆ ಬೀಳಲಿದೆ ಎಂದು ವಿಶ್ಲೇಷಣೆಯೊಂದು ಹೇಳಿದೆ. 

ಲೆಕ್ಕಪರಿಶೋಧಕ ಮಿಹಿರ್‌ ಮೋದಿ ಪ್ರಕಾರ, 3 ತಿಂಗಳ ಅವಧಿಗೆ ಪೂರ್ಣ ಪ್ರಮಾಣದ ಪಿಪಿಎಫ್‌ ಪಾವತಿಯ ಮೂಲಕ ಆಗುವ 2500 ಕೋಟಿ ರು. ಮಾತ್ರವೇ ಸರ್ಕಾರದ ಬೊಕ್ಕಸಕ್ಕೆ ನೇರವಾಗಿ ಆಗುವ ವೆಚ್ಚ. ಉಳಿದಂತೆ, ಖಾತರಿ ರಹಿತ ಸಾಲ, ಸಬ್‌ಆರ್ಡಿನೇಟ್‌ ಸಾಲ, ಎಂಎಸ್‌ಎಂಇಗಳಿಗೆ ಫಂಡ್‌ ಆಫ್‌ ಫಂಡ್‌ ಮೊದಲಾದವುಗಳಿಂದ ಬೊಕ್ಕಸಕ್ಕೆ ಯಾವುದೇ ಹೊರೆ ಇಲ್ಲ. 

ಕ್ವಾರಂಟೈನ್‌: 'ನಾನ್‌ವೆಜ್‌ ಕೇಳಿದ್ರೆ, ವೆಜ್‌ ಊಟ ಕೊಡ್ತಾರೆ, ಮಹಿಳೆಯ ಆಕ್ರೋಶ'

ಡಿಸ್ಕಾಂಗಳಿಗೆ ಸರ್ಕಾರ 90,000 ಕೋಟಿ ರುಪಾಯಿ ನೆರವು ಘೋಷಿಸಿದ್ದರೂ, ಅವುಗಳು ಬಡ್ಡಿ ಸಮೇತ ಸಾಲ ತೀರಿಸಬೇಕು. ಇದರಲ್ಲಿ ಸಾಲಕ್ಕೆ ಖಾತ್ರಿ ನೀಡುವುದು ರಾಜ್ಯ ಸರ್ಕಾರಗಳ ಹೊಣೆ. ಇನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿತರಿಸುವ 45,000 ಕೋಟಿ ರುಪಾಯಿ ಮೊತ್ತದ ಸಾಲಕ್ಕೆ ಸರ್ಕಾರವೇ ಭಾಗಶಃ ಖಾತರಿ ನೀಡುವುದಾಗಿ ಘೋಷಿಸಿದ್ದರೂ, ತಕ್ಷಣಕ್ಕೆ ಸರ್ಕಾರ ಹಣ ಪಾವತಿ ಮಾಡಬೇಕಾದ ಅಗತ್ಯವಿಲ್ಲ.

ಇನ್ನು 200 ಕೋಟಿ ರು.ವರೆಗಿನ ಯೋಜನೆಗಳಿಗೆ ಜಾಗತಿಕ ಟೆಂಡರ್‌ ಕರೆದಿರುವ ನಿರ್ಧಾರದಿಂದಾಗಿ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಒತ್ತು ನೀಡಲಿದೆ. ಜೊತೆಗೆ 200-1000 ಕೋಟಿ ರು. ಮೊತ್ತದ ಯೋಜನೆಗಳಿಗೂ ಸ್ಥಳೀಯರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬೇಕೆಂಬ ಷರತ್ತು ಸೇರಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಸ್ಥಳೀಯರಿಗೆ ಜಾಗತಿಕ ಉದ್ಯಮದ ಆಚರಣೆಗಳ ಲಾಭ ಸಿಗಲಿದೆ ಎಂದು ಮಿಹಿರ್‌ ಮೋದಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios