ಬೆಂಗಳೂರು(ಮೇ.15):  ಮುಂಬೈನಿಂದ ಬಂದು ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗದ ಮಹಿಳೆಯೊಬ್ಬರು ಅಲ್ಲಿನ ಅವ್ಯವಸ್ಥೆ ಕಂಡು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಮುಂಬೈನಿಂದ ಬಂದಿದ್ದ ಪವಿತ್ರ ಎಂಬ ಮಹಿಳೆಯನ್ನು ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಆದರೆ, ಹೋಟೆಲ್‌ನಲ್ಲಿ ಸ್ವಚ್ಚತೆ ಇಲ್ಲ. ಹಣ ಪಾವತಿ ಮಾಡಿಕೊಂಡು ಧೂಳು ತುಂಬಿರುವ ಕೊಠಡಿ ನೀಡಲಾಗಿದೆ.

ಕ್ವಾರಂಟೈನ್ ಆಗಲು ಒಪ್ಪದವರು ಮತ್ತೊಂದು ರೈಲಲ್ಲಿ ದೆಹಲಿಗೆ ವಾಪಸ್‌..! 

ಅಸ್ತಮಾ ಅಥವಾ ಕೊರೋನಾ ಸೋಂಕಿತರಿದ್ದರೇ ಆ ಧೂಳಿಗೆ ಮತ್ತಷ್ಟ ಅನಾರೋಗ್ಯಕ್ಕೆ ಗುರಿಯಾಗುತ್ತದೆ. ಇನ್ನೂ ಹೋಟೆಲ್‌ ಸಿಬ್ಬಂದಿ ಸಸ್ಯಹಾರ ಕೇಳಿದರೆ ಮಾಂಸಾಹಾರವನ್ನು ನೀಡಿದ್ದಾರೆ ಎಂದು ಆಪಾದಿಸಿದ್ದಾರೆ.

"