Asianet Suvarna News Asianet Suvarna News

ನಿಜವಾಯ್ತು 19 ವರ್ಷದ ಹಿಂದೆ ಗ್ಯಾಂಗ್‌ಸ್ಟಾರ್ ಅತೀಕ್ ಹೇಳಿದ್ದ ಮಾತು

ಪೊಲೀಸರ ಸುಪರ್ದಿಯಲ್ಲಿರುವಾಗಲೇ ಮಾಧ್ಯಮಗಳ ಕ್ಯಾಮರಾ ಮುಂದೆಯೇ ಹತ್ಯೆಯಾದ ಉತ್ತರಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ 19 ವರ್ಷಗಳ ಹಿಂದೆ ನೀಡಿದ ಹೇಳಿಕೆ ನಿಜವಾಗಿದೆ.  

19 year ago Gangster Atiq thought about his death becomes true he used to told death might happen like this akb
Author
First Published Apr 16, 2023, 6:30 PM IST | Last Updated Apr 16, 2023, 6:32 PM IST

ಲಕ್ನೋ: ಪೊಲೀಸರ ಸುಪರ್ದಿಯಲ್ಲಿರುವಾಗಲೇ ಮಾಧ್ಯಮಗಳ ಕ್ಯಾಮರಾ ಮುಂದೆಯೇ ಹತ್ಯೆಯಾದ ಉತ್ತರಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ 19 ವರ್ಷಗಳ ಹಿಂದೆ ನೀಡಿದ ಹೇಳಿಕೆ ನಿಜವಾಗಿದೆ.  ನಾನು ಒಂದೋ ಪೊಲೀಸರಿಂದ ಎನ್‌ಕೌಂಟರ್‌ನಲ್ಲಿ ಸಾಯಬಹುದು ಅಥವಾ ಯಾರಾದರೂ ರೌಡಿಗಳು ನನ್ನನ್ನು ಕೊಲೆ ಮಾಡಬಹುದು ಎಂದು 19 ವರ್ಷಗಳ ಹಿಂದೆ ಇದೇ ಅತೀಕ್ ಅಹ್ಮದ್ ಹೇಳಿದ್ದ.  2004ರಲ್ಲಿ ಉತ್ತರಪ್ರದೇಶದ ಫುಲ್‌ಪುರಿ  ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದಿದ್ದ ಅತೀಕ್ ಚುನಾವಣಾ ಪ್ರಚಾರದ ವೇಳೆ ಇದೇ ಮಾತನ್ನು ಹೇಳಿದ್ದ ಅದರಂತೆ ನಿನ್ನೆ ಅತೀಕ್‌ ನಿನ್ನೆ ಕ್ರಿಮಿನಲ್‌ಗಳ ಗುಂಡಿಗೆ ಬಲಿಯಾಗಿದ್ದಾರೆ. 

ಹಲವು ಕುಖ್ಯಾತಿಗಳನ್ನು ಗಳಿಸಿದ್ದರೂ ಅತೀಕ್ ಸ್ಥಳೀಯ ಪತ್ರಕರ್ತರೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೊದಲು ಆತ ಅಲಹಾಬಾದ್ ನಗರದ (ಪಶ್ಚಿಮ)  ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿ ಶಾಸಕನಾಗಿದ್ದ. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಆತ ತನ್ನ ಸಾವು ಹೀಗೆ ಸಂಭವಿಸಬಹುದು ಎಂದು ಹೇಳಿದ್ದ.  ಅಪರಾಧಿಗಳಾದ ನಮಗೆ ನಮ್ಮ ಹಣೆಬರಹ ಏನು ಎಂಬುದು ಗೊತ್ತಿರುತ್ತದೆ.  ಪ್ರತಿದಿನವೂ ಕಾನೂನಿನ ಅಗ್ನಿ ಪರೀಕ್ಷೆಯನ್ನು ಎದುರಿಸೇಕು. ಪ್ರತಿದಿನ ಹೋರಾಡಬೇಕು ಎಂದು ಹೇಳಿದ್ದ. 

ಪೊಲೀಸರೆದುರೇ ಗ್ಯಾಂಗ್ ಸ್ಟಾರ್ ಹತ್ಯೆ ಪ್ರಕರಣ: ಕಾನೂನು ಹದಗೆಟ್ಟಿದೆ ಎಂದ ಅಖಿಲೇಶ್ ಯಾದವ್

ಆತ ಪ್ರತಿನಿಧಿಸಿದ್ದ ಫೂಲ್ಪುರಿ ಕ್ಷೇತ್ರ ಈ ಹಿಂದೆ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರೂ ಪ್ರತಿನಿಧಿಸಿದ್ದ ಕ್ಷೇತ್ರವಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಆತ,  ನನ್ನ ಅಪರಾಧದ ಹಿನ್ನೆಲೆಯ ಕಾರಣಕ್ಕೆ ನೆಹರೂ ಅವರಂತೆ ನಾನು ಕೂಡ ನೈನಿ ಜೈಲಿಗೆ ಹೋಗಿದ್ದೆ ಎಂದು ಹೇಳಿದ್ದ. 

ಪೊಲೀಸರ ಸಮ್ಮುಖದಲ್ಲೇ ಮೀಡಿಯಾ ಕ್ಯಾಮರಾ ಮುಂದೆಯೇ ಉತ್ತರಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ನಡೆದಿತ್ತು. ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.  ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್  ಅವರನ್ನು ಪ್ರಯಾಗ್‌ರಾಜ್‌ನ ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ತಪಾಸಣೆಗೆ ಪೊಲೀಸ್ ಸರ್ಪಗಾವಲಿನಲ್ಲಿ ಕರೆತರುತ್ತಿದ್ದರು. ಪೊಲೀಸ್‌ ಜೀಪ್‌ನಿಂದ ಇಳಿದು ನಾಲ್ಕು ಹೆಜ್ಜೆ ಮುಂದಿಟ್ಟಾಗ ಇವರನ್ನು ಮಾಧ್ಯಮಗಳು ಸುತ್ತುವರೆದಿವೆ. ಎರಡು ದಿನಗಳ ಹಿಂದಷ್ಟೇ ಅತೀಕ್ ಅಹ್ಮದ್  ಪುತ್ರ ಅಸದ್ ಅಹ್ಮದ್‌ ಪೊಲೀಸ್‌ ಎನ್‌ಕೌಂಟರ್‌ಗೆ (Police encounter) ಬಲಿಯಾಗಿದ್ದ.  ಆತನ ಅಂತ್ಯಕ್ರಿಯೆ ನಿನ್ನೆ ನಡೆದಿತ್ತು. ಅಂತ್ಯಕ್ರಿಯೆಗೆ ತಮ್ಮನ್ನು (ಅತೀಕ್ ಅಹ್ಮದ್) ಕಳುಹಿಸದೇ ಇರುವ ಬಗ್ಗೆ ಮಾಧ್ಯಮಗಳು ಅವರನ್ನು ಪ್ರಶ್ನಿಸಿವೆ. ಈ ವೇಳೆ ಅವರು ಪ್ರತಿಕ್ರಿಯಿಸಿದ್ದು, ಪೊಲೀಸರು ಕರೆದೊಯ್ದಿಲ್ಲ ಹಾಗೆ ನಾವು ಹೋಗಿಲ್ಲ ಎಂದು ಹೇಳುವಷ್ಟರಲ್ಲಿ ಗುಂಡಿನ ದಾಳಿ ನಡೆದಿದ್ದು,  ಅತೀಕ್ ಹಾಗೂ ಅಶ್ರಫ್ ಇಬ್ಬರು ಸ್ಥಳದಲ್ಲೇ ಹತ್ಯೆಗೀಡಾಗಿದ್ದಾರೆ. ಇದೇ ಅತೀಕ್ ಕೊನೆ ಮಾತಾಗಿತ್ತು. 

ಫೇಕ್ ಐಡಿಕಾರ್ಡ್, ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಅತೀಕ್ ಹಿಂಬಾಲಿಸಿದ್ದ ದಾಳಿಕೋರರು!

ಉತ್ತರಪ್ರದೇಶ ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಕೊಲೆ ಆರೋಪಿಗಳು ಫೇಕ್ ಐಡಿ ಕಾರ್ಡ್ ಧರಿಸಿ ವರದಿಗಾರರಂತೆ ಪೋಸು ಕೊಟ್ಟುಕೊಂಡು ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಇವರನ್ನು (ಅತೀಕ್ ಅಹ್ಮದ್ ಹಾಗೂ ಅಶ್ರಫ್) ಹಿಂಬಾಲಿಸಿದ್ದರು ಇದೊಂದು ತುಂಬಾ ನಾಜೂಕಾಗಿ ಯೋಜನೆ ಸಿದ್ಧಪಡಿಸಿ ಮಾಡಿದ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ.  ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕರೆತರುತ್ತಿದ್ದ ವೇಳೆ ಪೊಲೀಸರ ಸುಪರ್ದಿಯಲ್ಲಿರುವಾಗಲೇ ಮೀಡಿಯಾ ಕ್ಯಾಮರಾ ಮುಂದೆಯೇ ಇವರಿಬ್ಬರು ಹತ್ಯೆಯಾಗಿದ್ದರು.

ಕೊಲೆ ಆರೋಪಿಗಳಾದ ಲವಲೇಶ್ ತಿವಾರಿ (Lovelesh Tiwari), ಸನ್ನಿ (Sunny) ಹಾಗೂ ಅರುಣ್ ಮೌರ್ಯ (Arun Maurya) ಇವರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು,  ತಾವು ಅತೀಕ್ ಅಹ್ಮದ್‌ನನ್ನು (Atiq Ahmad) ಹತ್ಯೆ ಮಾಡಿ ಅಂಡರ್‌ವರ್ಲ್ಡ್‌ನಲ್ಲಿ (underworld) ಫೇಮಸ್ ಆಗಲು ಬಯಸಿದ್ದೆವು ಎಂದು ಪೊಲೀಸರ ಮುಂದೆ ಹೇಳಿದ್ದಾರೆ.  ಪ್ರಯಾಗ್‌ರಾಜ್‌ಗೆ (Prayagraj)  ಗುರುವಾರ ಬಂದಿದ್ದ ಆರೋಪಿಗಳು ಲಾಡ್ಜೊಂದರಲ್ಲಿ ಉಳಿದಿದ್ದರು.  ಘಟನೆಗೆ ಸಂಬಂಧಿಸಿದಂತೆ ಲಾಡ್ಜ್‌ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಅತೀಕ್ ಹಾಗೂ ಸಹೋದರರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಾರೆ ಎಂಬ ವಿಚಾರ ತಿಳಿದು ಇವರು ದಾಳಿಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ರಕರ್ತರಂತೆ ಸೋಗು ಹಾಕಲು ನಿರ್ಧರಿಸಿದ ಅವರು ಶನಿವಾರ ಇಡೀ ದಿನ ಇತರ ಪತ್ರಕರ್ತರಂತೆ ಅತೀಕ್‌ ಹಾಗೂ ಅಶ್ರಫ್‌ನನ್ನು ಹಿಂಬಾಲಿಸಿದ್ದಾರೆ. 

Latest Videos
Follow Us:
Download App:
  • android
  • ios