ಪೊಲೀಸರೆದುರೇ ಗ್ಯಾಂಗ್ ಸ್ಟಾರ್ ಹತ್ಯೆ ಪ್ರಕರಣ: ಕಾನೂನು ಹದಗೆಟ್ಟಿದೆ ಎಂದ ಅಖಿಲೇಶ್ ಯಾದವ್

ಪೊಲೀಸರ ಸಮ್ಮುಖದಲ್ಲೇ ಮೀಡಿಯಾ ಕ್ಯಾಮರಾ ಮುಂದೆಯೇ ಉತ್ತರಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ನಡೆದಿತ್ತು. ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಹಲವು ನಾಯಕರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.  

Gangster Atiq Ahmed, His Brother Shot Dead, Akhilesh Yadav said law and order deteriorated in the state akb

ನವದೆಹಲಿ: ಪೊಲೀಸರ ಸಮ್ಮುಖದಲ್ಲೇ ಮೀಡಿಯಾ ಕ್ಯಾಮರಾ ಮುಂದೆಯೇ ಉತ್ತರಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ನಡೆದಿತ್ತು. ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಹಲವು ನಾಯಕರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.  ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್  ಅವರನ್ನು ಪ್ರಯಾಗ್‌ರಾಜ್‌ನ ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ತಪಾಸಣೆಗೆ ಪೊಲೀಸ್ ಸರ್ಪಗಾವಲಿನಲ್ಲಿ ಕರೆತರುತ್ತಿದ್ದರು. ಪೊಲೀಸ್‌ ಜೀಪ್‌ನಿಂದ ಇಳಿದು ನಾಲ್ಕು ಹೆಜ್ಜೆ ಮುಂದಿಟ್ಟಾಗ ಇವರನ್ನು ಮಾಧ್ಯಮಗಳು ಸುತ್ತುವರೆದಿವೆ. ಎರಡು ದಿನಗಳ ಹಿಂದಷ್ಟೇ ಅತೀಕ್ ಅಹ್ಮದ್  ಪುತ್ರ ಅಸದ್ ಅಹ್ಮದ್‌ ಪೊಲೀಸ್‌ ಎನ್‌ಕೌಂಟರ್‌ಗೆ (Police encounter) ಬಲಿಯಾಗಿದ್ದರು.  ಅವರ ಅಂತ್ಯಕ್ರಿಯೆ ನಿನ್ನೆ ನಡೆದಿತ್ತು. ಅಂತ್ಯಕ್ರಿಯೆಗೆ ತಮ್ಮನ್ನು (ಅತೀಕ್ ಅಹ್ಮದ್) ಕಳುಹಿಸದೇ ಇರುವ ಬಗ್ಗೆ ಮಾಧ್ಯಮಗಳು ಅವರನ್ನು ಪ್ರಶ್ನಿಸಿವೆ. ಈ ವೇಳೆ ಅವರು ಪ್ರತಿಕ್ರಿಯಿಸಿದ್ದು, ಪೊಲೀಸರು ಕರೆದೊಯ್ದಿಲ್ಲ ಹಾಗೆ ನಾವು ಹೋಗಿಲ್ಲ ಎಂದು ಹೇಳುವಷ್ಟರಲ್ಲಿ ಗುಂಡಿನ ದಾಳಿ ನಡೆದಿದ್ದು,  ಅತೀಕ್ ಹಾಗೂ ಅಶ್ರಫ್ ಇಬ್ಬರು ಸ್ಥಳದಲ್ಲೇ ಹತ್ಯೆಗೀಡಾಗಿದ್ದಾರೆ. 

ಪೊಲೀಸ್‌ ಸರ್ಪಗಾವಲಿನಲ್ಲೇ ಹತ್ಯೆ ನಡೆದಿರುವುದಕ್ಕೆ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು,  ಉತ್ತರಪ್ರದೇಶದಲ್ಲಿ (Uttar Pradesh)ಅಪರಾಧಗಳು ಮಿತಿ ಮೀರಿವೆ. ನೈತಿಕ ಅಪರಾಧಿಗಳ ಸಂಖ್ಯೆ ಹೆಚ್ಚಾಗಿದೆ. ಪೊಲೀಸರ ಸುಪರ್ದಿಯಲ್ಲೇ ಒಬ್ಬರು ಆರಾಮದಾಯಕವಾಗಿ ಮತ್ತೊಬ್ಬರನ್ನು ಕೊಲ್ಲಬಹುದಾದರೆ ಜನಸಾಮಾನ್ಯರ ಕತೆಯೇನು ಎಂದು ಅವರು ಪ್ರಶ್ನಿಸಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ತೋರುತ್ತದೆ ಎಂದು ಅಖಿಲೇಶ್ ಯಾದವ್ (Akhilesh Yadav) ಪ್ರತಿಕ್ರಿಯಿಸಿದ್ದಾರೆ. 

ಅತೀಕ್ ಅಹ್ಮದ್ ಹತ್ಯೆ ಕೇಸ್‌: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಎಐಎಂಐಎಂ  ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ, ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಕೈಯಲ್ಲಿ ಕೋಳವಿದ್ದಾಗಲೇ ಇಬ್ಬರನ್ನು  ಅತೀಕ್ ಹಾಗೂ ಸಹೋದರನ ಹತ್ಯೆಯಾಗಿದೆ.  ಅಲ್ಲದೇ ಜೈ ಶ್ರಿರಾಮ್ ಘೋಷಣೆಯಾಗಿದೆ.  ಯೋಗಿ ಸರ್ಕಾರದಲ್ಲಿ ಕಾನೂನು ಸುರಕ್ಷತೆ ವೈಫಲ್ಯವಾಗಿರುವುದಕ್ಕೆ ಈ ಘಟನೆ ದೊಡ್ಡ ಸಾಕ್ಷಿಯಾಗಿದೆ. ಎನ್‌ಕೌಂಟರ್ ರಾಜ್‌ನ್ನು ಸಂಭ್ರಮಿಸುತ್ತಿರುವವರು ಈ ಕೊಲೆಗೆ ಪ್ರಮುಖ ಜವಾಬ್ದಾರರಾಗಿರುತ್ತಾರೆ ಎಂದು ಓವೈಸಿ ದೂರಿದ್ದಾರೆ. 

ಘಟನೆ ಬಗ್ಗೆ ಉತ್ತರಪ್ರದೇಶ ಪೊಲೀಸರು ತನಿಖೆ ನಡೆಸಬೇಕು ಎಂದು ಜಮ್ಮು ಕಾಶ್ಮೀರದ ಉನ್ನತ ಅಧಿಕಾರಿ ಶೇಶ್‌ ಪೌಲ್ ಟ್ವಿಟ್ ಮಾಡಿದ್ದಾರೆ. ಮಾಫಿಯಾ ಡಾನ್ ಮತ್ತು ದರೋಡೆಕೋರ ಅತೀಕ್ ಅಹ್ಮದ್ (Atiq Ahmed) ಮತ್ತು ಅವನ ಸಹೋದರ ಅಶ್ರಫ್ ಪ್ರಯಾಗರಾಜ್‌ನಲ್ಲಿ ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅವರ ಅಪರಾಧ ಚಟುವಟಿಕೆಗಳು ಎಷ್ಟು ಆಳವಾಗಿ ಬೇರೂರಿದೆ, ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಮತ್ತು ಮಾಧ್ಯಮದ ಕ್ಯಾಮರಾಗಳ ಮುಂದೆ ಕ್ರೂರವಾಗಿ ಹೊಡೆದುರುಳಿಸಲಾಯಿತು ಈ ದಾಳಿಕೋರರು ಯಾರ ಕ್ರಿಮಿನಲ್ ರಹಸ್ಯಗಳನ್ನು ರಕ್ಷಿಸುತ್ತಿದ್ದರು? ಯುಪಿ ಪೊಲೀಸರಿಂದ ಗಂಭೀರ ತನಿಖೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. 

ಇಂದಿನ ಘಟನೆ ಯುಪಿ ಸರ್ಕಾರಕ್ಕೆ ಮಸಿ ಬಳಿದಿದೆ.  ಗ್ಯಾಂಗ್ ವಾರ್ ನಡೆಯುತ್ತಿದೆಯೇ? ರಾಜ್ಯದಲ್ಲಿ ಕಾನೂನು ಜಾರಿ ಇಲ್ಲವೇ ಎಂದು ಸಮಾಜವಾದಿ ಪಕ್ಷದ ವಕ್ತಾರ ಘನಶ್ಯಾಮ್ ತಿವಾರಿ ( Ghanshyam Tiwari) ಹೇಳಿದ್ದಾರೆ. 

ಮಗನ ಎನ್‌ಕೌಂಟರ್‌ ಬೆನ್ನಲ್ಲೇ ಉತ್ತರ ಪ್ರದೇಶ ಡಾನ್‌ ಶೂಟೌಟ್‌ಗೆ ಬಲಿ

ಈ ಹತ್ಯೆಗೆ ಸಂಬಂಧಿಸಿದಂತೆ ಕನಿಷ್ಠ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ದಾಳಿಕೋರರನ್ನು ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ. ಈ ಮೂವರೂ ಮಾಧ್ಯಮದವರಂತೆ ಪೋಸ್ ಕೊಟ್ಟರು ಮತ್ತು ನೆಲಕ್ಕೆ ಬಿದ್ದ ಅತೀಕ್‌ ಅಹ್ಮದ್ ಮತ್ತು ಅವರ ಸಹೋದರನ ಮೇಲೆ ಸಮೀಪದಿಂದ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಪೊಲೀಸರು ಶೀಘ್ರದಲ್ಲೇ ದಾಳಿಕೋರರನ್ನು ಹತ್ತಿಕ್ಕಿದ್ದು, ಮೂಲಗಳ ಪ್ರಕಾರ 15 ಜನರ ತಂಡ ಸ್ಥಳಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios