ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 19 ಸಾವು, ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಬಾಯ್ಮುಚ್ಚಿ ಎಂದ ನಿತೀಶ್‌ ಕುಮಾರ್‌!

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 19 ಮಂದಿ ಸಾವಿಗೀಡಾಗಿದ್ದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು, ಬಿಹಾರದಲ್ಲಿ ಮದ್ಯ ನಿಷೇಧ ಎನ್ನುವುದು ಬರೀ ಬೂಟಾಟಿಕೆ ಎಂದು ಟೀಕೆ ಮಾಡಿದ್ದರು. ಇದಕ್ಕೆ ಆಕ್ರೋಶದಿಂದಲೇ ಮಾತನಾಡಿದ ನಿತೀಶ್‌ ಕುಮಾರ್,‌ ಎದುರಾಳಿಗಳಿಗೆ ಸದನದಲ್ಲಿಯೇ ಬಾಯ್ಮುಚ್ಚಿ ಎಂದು ಹೇಳಿದ್ದಾರೆ.
 

19 deaths due to alcohol in Bihar Nitish Kumar got angry on the question by BJP san

ಪಟ್ನಾ (ಡಿ.14): ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಈ ಸಾವುಗಳಿಗೆ ಸಂಬಂಧಿಸಿದಂತೆ ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ.  ಈ ಸಾವಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಹೊಣೆ ಎಂದು ಬಿಜೆಪಿಯು ಸದನದ ಒಳಗೆ ಮತ್ತು ಹೊರಗೆ ನಿತೀಶ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದೆ. ಪ್ರತಿಪಕ್ಷಗಳ ಟೀಕೆಯಂದಾಗಿ ತಾಳ್ಮೆ ಕಳೆದುಕೊಂಡ ನಿತೀಶ್ ಕುಮಾರ್, ಕೋಪದಿಂದ ಅವರು ಬಿಜೆಪಿ ಶಾಸಕರತ್ತ ಕಣ್ಣುಬಿಡುತ್ತಲೇ ಮಾತನಾಡಿದರು. ಈಗ ಎನಾಗಿದೆ. ನೀವೆಲ್ಲ ಬಾಯಿಮುಚ್ಚಿಕೊಂಡರೆ ಸರಿಯಾಗಿದೆ ಎಂದು ಸಿಟ್ಟಿನಿಂದಲೇ ಹೇಳಿದರು. ಮುಖ್ಯಮಂತ್ರಿಗಳ ಈ ವರ್ತನೆಯಿಂದ ಬಿಜೆಪಿ ಶಾಸಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸದನದಲ್ಲಿ ಭಾರೀ ಕೋಲಾಹಲ: ಸದನದಲ್ಲಿ ಬಿಜೆಪಿ ಶಾಸಕರು, ನಿತೀಶ್ ಕುಮಾರ್‌ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು. ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಗಲಾಟೆ ಮಾಡಿದರು. ಚಪ್ಪಾಳೆ ತಟ್ಟಿ ಗಲಾಟೆ ಮಾಡಿದ ಅವರು, ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು. ನಿತೀಶ್‌ ಕುಮಾರ್‌ಗೆ ಬುದ್ಧಿ ಇಲ್ಲ ಎನ್ನವ ಘೋಷಣೆಗಳನ್ನು ಕೂಗಿದರು. ಭೋಜನ ವಿರಾಮದ ಬಳಿಕವೂ ಅವರ ಗಲಾಟೆ ಮುಂದವರಿದಿತ್ತು. ಮಹಾಮೈತ್ರಿಕೂಟದ ಶಾಸಕರಿಗೆ ಬಿಜೆಪಿ ಶಾಸಕರು ಮಾತನಾಡಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಈ ಗದ್ದಲದಿಂದಾಗಿ ಸದನದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಬಿಹಾರ ವಿಧಾನಸಭೆಯಲ್ಲಿ ಇಂದು ಆಗಿದ್ದೇನು?
- ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿದ ನಿತೀಶ್ ಕುಮಾರ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿತು.

- ಸಾಮ್ರಾಟ್ ಚೌಧರಿ ಅವರು ನಕಲಿ ಮದ್ಯದಿಂದ ಜನರು ಸಾವು ಕಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯೇ ಕಾರಣ ಎಂದು ಆರೋಪಿಸಿದರು. ಅವರ ವಿರುದ್ಧ ಎಫ್‌ಐಆರ್‌ ಹಾಕಬೇಕು ಎಂದು ಹೇಳಿದರು.

Bihar: ಸಾರ್ವಜನಿಕರೆದುರೇ ಮಹಿಳೆಯ ಸ್ತನ, ಕೈ, ಕಿವಿ ಕತ್ತರಿಸಿ ವಿಕೃತಿ ಮೆರೆದ ಹಂತಕ..!

- ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹಾ ಅವರು, ನಾವು ನಿಷೇಧದ ಪರವಾಗಿದ್ದೇವೆ ಆದರೆ ನಕಲಿ ಮದ್ಯದ ಸಾವಿನ ಬಗ್ಗೆ ಸದನದಲ್ಲಿ ಚರ್ಚೆಯನ್ನು ಬಯಸುತ್ತೇವೆ ಎಂದು ಹೇಳಿದರು. ಈ ನಡುವೆ ವಿಜಯ್‌ ಸಿನ್ಹಾ ಅವರ ಮೈಕ್‌ಅನ್ನು ಬಂದ್‌ ಮಾಡಿದ ವಿಚಾರ ಕೂಡ ಗದ್ದಲಕ್ಕೆ ಕಾರಣವಾಯಿತು.

ಕೋಚಿಂಗ್ ಕ್ಲಾಸಲ್ಲಿ ಲವ್: 20ರ ಹರೆಯದ ವಿದ್ಯಾರ್ಥಿನಿ ಮದ್ವೆಯಾದ 42 ವರ್ಷದ ಶಿಕ್ಷಕ

- ಸಿಪಿಐ(ಎಂಎಲ್) ಶಾಸಕರು ವಿಧಾನಸಭೆಯ ಹೊರಗೆ ಗದ್ದಲ ನಡೆಸಿದರು. ಭತ್ತ ಖರೀದಿ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದರ ಜತೆಗೆ ಶಿಕ್ಷಕರ ಯೋಜನೆ ಬಗ್ಗೆಯೂ ಪ್ರತಿಭಟನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios