ಮಾವೋಯಿಸ್ಟ್ ಜೊತೆ ಎನ್‌ಕೌಂಟರ್: 5 ಯೋಧರು ಸಾವು, 18 ಜನ ಭದ್ರತಾ ಸಿಬ್ಬಂದಿ ನಾಪತ್ತೆ

ಮಾವೋಯಿಸ್ಟ್ ಜೊತೆ ಎನ್‌ಕೌಂಟರ್ | 18 ಜನ ಸಿಬ್ಬಂದಿ ನಾಪತ್ತೆ

18 security personnel missing after encounter with Maoists in Chhattisgarh dpl

ಛತ್ತೀಸ್‌ಗಡ್(ಎ.04): ಬಸ್ತಾರ್ ಪ್ರದೇಶದ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯಲ್ಲಿರುವ ಛತ್ತೀಸ್‌ಗಡದ ಟೆರ್ರಾಮ್ ಕಾಡುಗಳಲ್ಲಿ ಮಾವೋಯಿಸ್ಟ್‌ ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಶನಿವಾರ ಗುಂಡಿನ ಚಕಮಕಿಯ ನಂತರ 18 ಭದ್ರತಾ ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮಾವೋವಾದಿಗಳೊಂದಿಗಿನ ಮುಖಾಮುಖಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಘತೀಸ್‌ಗಡ್ ಪೊಲೀಸರು ಶನಿವಾರ ತಿಳಿಸಿದ್ದಾರೆ. ಎನ್ಕೌಂಟರ್ ಸ್ಥಳದಿಂದ ಶಂಕಿತ ಮಾವೋವಾದಿಯ ಮೃತದೇಹವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಅಪರೂಪದ ಕಾಯಿಲೆಯ ಹೊಸ ರಾಷ್ಟ್ರೀಯ ನೀತಿಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ!

ಕೆಲವು ಭದ್ರತಾ ಸಿಬ್ಬಂದಿ ಕಾಣೆಯಾಗಿದ್ದಾರೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶನಿವಾರ ಪ್ರಾಣ ಕಳೆದುಕೊಂಡ ಐದು ಜನರಲ್ಲಿ, ಇಬ್ಬರು ಮತ್ತು ಮೂವರ ಮೃತದೇಹ ಸಿಕ್ಕಿದೆ ಎಂದು ತ್ತತ್ತೀಸ್‌ಗಡದ ಪೊಲೀಸ್ ಮಹಾನಿರ್ದೇಶಕ ಡಿ.ಎಂ. ಅವಸ್ತಿ ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್‌ನ ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್ (ಕೋಬ್ರಾ) ಯ 18 ಭದ್ರತಾ ಸಿಬ್ಬಂದಿ ಕಾಡಿನಲ್ಲಿ ಇನ್ನೂ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ಕೆಲವು ಗಂಟೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.

Latest Videos
Follow Us:
Download App:
  • android
  • ios