ಅಪರೂಪದ ಕಾಯಿಲೆಯ ಹೊಸ ರಾಷ್ಟ್ರೀಯ ನೀತಿಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ!
ಕೊರೋನಾ ಸೇರಿದಂತೆ ಅಪರೂಪದ ರೋಗಗಳು ವಕ್ಕರಿಸಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳು, ಚಿಕಿತ್ಸೆ, ಚಿಕಿತ್ಸಾ ವೆಚ್ಚಾ, ಔಷಧಿ, ಸಂಶೋಧನೆ ಸೇರಿದಂತೆ ಸಮಗ್ರ ರಾಷ್ಟ್ರೀಯ ನೀತಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅನುಮೋದನೆ ನೀಡಿದ್ದಾರೆ. ಹೊಸ ರಾಷ್ಟ್ರೀಯ ನೀತಿ ಕುರಿತು ಹೆಚ್ಚಿನ ವಿವರ ಇಲ್ಲಿವೆ.
ನವದೆಹಲಿ(ಎ.03): ಕಳೆದ ವರ್ಷ ದೇಶಕ್ಕೆ ವಕ್ಕರಿಸಿದ ಅಪರೂಪದ ಕೊರೋನಾ ಸೋಂಕು ಈಗಲೂ ಭಾರತಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ನಿಫಾ ವೈರಸ್ ಸೇರಿದಂತೆ ಹಲವು ಅಪರೂಪದ ಸೋಂಕು, ಕಾಯಿಲೆಗಳು ವಕ್ಕರಿಸಿದಾಗ ಚಿಕಿತ್ಸೆ, ಚಿಕಿತ್ಸಾ ವೆಚ್ಚ, ಔಷಧಿ ಸೇರಿದಂತೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಸಮಗ್ರ ರಾಷ್ಟ್ರೀಯ ನೀತಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅನುಮೋದನೆ ನೀಡಿದ್ದಾರೆ.
ಕೊರೋನಾ 2ನೇ ಅಲೆಯಿಂದ ಶೇ.77 ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ; ಸಮೀಕ್ಷೆ ಬಹಿರಂಗ!.
ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ಹಾಗೂ ನಿಯಂತ್ರಣಕ್ಕೆ ಖರ್ಚಾಗುವ ದುಬಾರಿ ವೆಚ್ಚ ಕಡಿಮೆ ಮಾಡುವ ಗುರಿ, ಔಷಧಿ ಉತ್ಪಾದನೆ, ಸೇರಿದಂತೆ ಹಲವು ನೀತಿಗಳನ್ನು ರಾಷ್ಟ್ರೀಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ನಿಧಿ ಯೋಜನೆಯಡಿ ರೇರ್ ಡಿಸೀಸ್ ರೋಗಕ್ಕೆ 20 ಲಕ್ಷ ರೂಪಾಯಿ ವರೆಗೆ ಹಣಕಾಸಿನ ನೆರವು ನೀಡಲು ಈ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮಿತಿ ಮೀರಿದ ಕೊರೋನಾ; ಆರೋಗ್ಯ ಇಲಾಖೆ ವಾರ್ನಿಂಗ್!
20 ಲಕ್ಷ ರೂಪಾಯಿ ಹಣಕಾಸಿನ ನೆರವು ಕೇವಲ ಬಿಪಿಎಲ್ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಸೌಲಭ್ಯವನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಡಿ ಬರುವ ಶೇಕಡಾ 40 ರಷ್ಟು ಫಲಾನುಭವಿಗಳಿಗೆ ವಿಸ್ತರಿಸಲು ರಾಷ್ಟ್ರೀಯ ನೀತಿ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ನಿಧಿ ಅಡಿಯಲ್ಲಿ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಹಣಕಾಸಿನ ನೆರವು ಒದಗಿಸಲಾಗಿದೆ. ಇನ್ನು ಕ್ರೌಡ್ ಫಂಡಿಂಗ್ ಮೂಲಕ ಕಾರ್ಪೋರೇಟ್ ವ್ಯಕ್ತಿಗಳಿಗೆ ಹಣಕಾಸಿನ ನರೆವು ನೀಡಲು ನೀತಿ ರೂಪಿಸಲಾಗಿದೆ. ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಔಷಧ ಉತ್ಪಾದನೆಗೂ ಪ್ರೋತ್ಸಾಹ ನೀಡುವ ನೀತಿ ಇದಾಗಿದೆ.