ಒಂದೇ ವರ್ಷದಲ್ಲಿ ಭಾರತಕ್ಕೆ ಬೇಕಾಗಿದ್ದ 17 ಮೋಸ್ಟ್ ವಾಂಟೆಡ್ ಉಗ್ರರ ನಿಗೂಢ ಸಾವು

ಕಳೆದ ಒಂದೇ ವರ್ಷದಲ್ಲಿ ಭಾರತದ ಮೋಸ್ಟ್ ವಾಂಟೆಡ್‌ ಭಯೋತ್ಪಾದಕರ ಪಟ್ಟಿಯಲ್ಲಿದ್ದ 17 ಉಗ್ರರು ಬೇರೆ ಬೇರೆ ದೇಶಗಳಲ್ಲಿ ಸಾವಿಗೀಡಾಗಿದ್ದಾರೆ. ವಿಶೇಷವೆಂದರೆ ಇವರೆಲ್ಲಾ ಪಾಕಿಸ್ತಾನ, ಅಫ್ಘಾನಿಸ್ತಾನ, ಕೆನಡಾ ಹಾಗೂ ಬ್ರಿಟನ್‌ನಲ್ಲಿ ನಾನಾ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬಹುತೇಕರು ನಿಗೂಢವಾಗಿ ಇಲ್ಲವೇ ಅನಾಮಿಕರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

17 terrorists who were in India's most wanted list have died in different countries with mysterious or anonymous shootings in a single year akb

ಇಸ್ಲಾಮಾಬಾದ್‌: ಕಳೆದ ಒಂದೇ ವರ್ಷದಲ್ಲಿ ಭಾರತದ ಮೋಸ್ಟ್ ವಾಂಟೆಡ್‌ ಭಯೋತ್ಪಾದಕರ ಪಟ್ಟಿಯಲ್ಲಿದ್ದ 17 ಉಗ್ರರು ಬೇರೆ ಬೇರೆ ದೇಶಗಳಲ್ಲಿ ಸಾವಿಗೀಡಾಗಿದ್ದಾರೆ. ವಿಶೇಷವೆಂದರೆ ಇವರೆಲ್ಲಾ ಪಾಕಿಸ್ತಾನ, ಅಫ್ಘಾನಿಸ್ತಾನ, ಕೆನಡಾ ಹಾಗೂ ಬ್ರಿಟನ್‌ನಲ್ಲಿ ನಾನಾ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬಹುತೇಕರು ನಿಗೂಢವಾಗಿ ಇಲ್ಲವೇ ಅನಾಮಿಕರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಭಾರತಕ್ಕೆ ಬೇಕಾದ ಲಷ್ಕರ್ ಎ ತೊಯ್ಬಾ( Lashkar-e-Toiba) ಉಗ್ರ ಕೈಸರ್ ಫಾರೂಖ್‌ನನ್ನು(Qaisar Farooq) ಭಾನುವಾರ ಪಾಕ್‌ನಲ್ಲಿ ಹತ್ಯೆಗೈದ ಬೆನ್ನಲ್ಲೇ ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಭಾರತಕ್ಕೆ ಬೇಕಾದ ಉಗ್ರರ ಹತ್ಯೆ / ಸಾವು ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಏಕೆ? ಇದರ ಹಿಂದೆ ಯಾರಿದ್ದಾರೆ ಎಂಬಿತ್ಯಾದಿ ಚರ್ಚೆಗಳು ನಡೆದಿವೆ, 2022ರ ಮಾರ್ಚ್ ನಂತರ ಈವರೆಗೆ ಈ ಹತ್ಯೆಗಳು ನಡೆದಿವೆ.

ನಿಜ್ಜರ್‌ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ!

ಒಂದೂವರೆ ವರ್ಷದಲ್ಲಿ ಹತ್ಯೆಯಾದ/ ಸಾವಿಗೀಡಾದ ಉಗ್ರರು

1.ಜಹೂರ್ ಮಿಸ್ತಿ: ಕಂದಹಾರ್ ಏರ್‌ ಇಂಡಿಯಾ ವಿಮಾನ ಅಪಹರಣಕಾರ(Air India hijacker): 2022ರ ಮಾ.1ರಂದು ಕರಾಚಿಯಲ್ಲಿ ಹತ್ಯೆ.
2. ರಿಪುದಮನ್ ಸಿಂಗ್ ಮಲ್ಕ್: 1995ರ ಏರಿಂಡಿಯಾ ಬಾಂಬ್ ದಾಳಿ (Air India bomb attack)ಆರೋಪಿ ಕೆನಡಾದಲ್ಲಿ 2022, ಜು.14ರಂದು ಹತ್ಯೆ.
3. ಮೊಹಮ್ಮದ್ ಲಾಲ್‌ : ಐಎಸ್‌ಐ ಏಜೆಂಟ್ (ISI agent), 2022 ರ ಸೆಪ್ಟೆಂಬರ್ 19 ರಂದು ನೇಪಾಳದಲ್ಲಿ ಗುಂಡಿಕ್ಕಿ ಕೊಲೆ. 
4. ಪರ್ವಿಂದರ್‌ಸಿಂಗ್ ಸಂಧು: 2021 ಪಂಜಾಬ್ ಪೊಲೀಸ್ ಮುಖ್ಯ ಕಚೇರಿ ಮೇಲಿನ ದಾಳಿ (2021 Punjab Police HQ attack)ಆರೋಪಿ, ಲಾಹೋರ್‌ನ ಆಸ್ಪತ್ರೆಯಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಸಾವು.
5. ಬಶೀರ್‌ಅಹ್ಮದ್ ರ್ಪೀ: ಕಾಶ್ಮೀರ ವಿರುದ್ಧ ಕುತಂತ್ರ ರೂಪಿಸಿದ ಕುಖ್ಯಾತ ಉಗ್ರ ಕಮಾಂಡರ್, ರಾವಲ್ಪಿಂಡಿಯಲ್ಲಿ (Rawalpindi)ಗುಂಡಿಕ್ಕಿ ಹತ್ಯೆ.
6. ಸೈಯದ್‌ ಖಾಲಿದ್ ರಜಾ: ಅಲ್ ಬದ‌ರ್‌ ಕಮಾಂಡರ್ (Al Badr commander), 2023ರ ಫೆ.26ರಂದು ಕರಾಚಿಯಲ್ಲಿ ಕೊಲೆ.
7.  ಏಜಾಜ್ ಅಹ್ಮದ್ ಅಹ೦ರ್ಗ: ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು-ಕಾಶ್ಮೀರ ಸಂಘಟನೆ ಉಗ್ರ, ಅಫ್ಘಾನಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ
8.ಸೈಯದ್ ನೂರ್ ಶಲೋರ್ಬ್‌:ಕಾಶ್ಮೀರದಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಉಗ್ರ, ಪಾಕಿಸ್ತಾನದ ಬಾರಾ ಬೈಬರ್‌ನಲ್ಲಿ ಗುಂಡಿಕ್ಕಿ ಹತ್ಯೆ
9.ಪರಮ್‌ ಜಿತ್ ಸಿಂಗ್ ಪಂಜ್ವಾ: ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥ, 2023ರ ಮೇ 6ರಂದು ಲಾಹೋರ್‌ನಲ್ಲಿ ಗುಂಡಿಕ್ಕಿ ಹತ್ಯೆ,
10 ಅವತಾರ್‌ ಸಿಂಗ್‌ ಖಂಡಾ: ಖಲಿಸ್ತಾನಿ ಉಗ್ರ 16 ಜೂನ್ 2023ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ವಿಷಪ್ರಾಶನದಿಂದ ಸಾವು.
11. ಹರ್ದೀಪ್ ಸಿಂಗ್ ನಿಜ್ಜರ್: ಖಲಿಸ್ತಾನಿ ಉಗ್ರ, 2023ರ ಜೂ.18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಹೊರಗೆ ಅಪರಿಚಿತರಿಂದ ಹತ್ಯೆ
12 ಸರ್ದಾರ್‌ಹುಸೇನ್ ಅಲೈನ್: ಪಾಕಿಸ್ತಾನಿ ಜಮಾತ್‌ ಉದ್ ದಾವಾ ಉಗ್ರ, ಸಿಂದ್ ನಲ್ಲಿ 2023ರ ಆ.1ರಂದು ಗುಂಡಿಕ್ಕಿ ಹತ್ಯೆ.
13. ರಿಯಾಜ್ ಅಹ್ಮದ್ ಅಕಾ ಆಬು ಖಾಸಿಂ: ಲಷ್ಕರ್‌ ಕಮಾಂಡರ್: 2023ರ ಜ.1ರಂದು ಪಿಒಕೆಯ ರಾವಲ್‌ ಕೋಟ್ ಮಸೀದಿಯೊಳಗೆ ಗುಂಡಿಕ್ಕಿ ಕೊಲೆ.
14. ಸುಯ್ದಿಲ್ ಸಿಂಗ್: ಖಲಿಸ್ತಾನಿ ಉಗ್ರ, 2023ರ ಸೆ.20ರಂದು ಕೆನಡಾದ ವಿನ್ನಿಪೆಗ್‌ನಲ್ಲಿ ಗುಂಡಿಕ್ಕಿ ಹತ್ಯೆ.
15. ಜಿಯಾವುರ್ ರೆಹಮಾನ್‌:  ಹಿಜ್ಬುಲ್ ಮುಜಾಹಿದೀನ್ ಉಗ್ರ ನಾಯಕ, 2023ರ ಸೆಪ್ಟೆಂಬರ್‌ನಲ್ಲಿ ಗುಂಡಿಕ್ಕಿ ಹತ್ಯೆ..
16 ಮುಫ್ತಿ ಕೈಸರ್‌ ಫಾರೂಖ್: ಎಲ್‌ಇಟಿ ಸಂಸ್ಥಾಪಕ ಸದಸ್ಯ, ಸೆ. 30 ರಂದು ಪಾಕಿಸ್ತಾನದ ಕರಾಚಿಯ ಸೊಹ್ರಾಬ್ ಗೋ‌ನಲ್ಲಿ ಗುಂಡಿಕ್ಕಿ ಹತ್ಯೆ.

ಕೆನಡಾ ಸರ್ಕಾರದಿಂದ ವಜಾ ಆದ ಪವನ್‌ ಕುಮಾರ್ ರಾಯ್ ಯಾರು?

26/11 ರೂವಾರಿ ಹಫೀಜ್ ಸಯೀದ್‌ ಆಪ್ತ ಪಾಕಲ್ಲಿ ಹತ್ಯೆ
ಕರಾಚಿ: 2008ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಉಗ್ರ ದಾಳಿ ಪ್ರಕರಣದ ಮಾಸ್ಟರ್ ಮೈ೦ಡ್ ಹಫೀಜ್ ಸಯೀದ್‌ನ ಸಹಚರರನ್ನು ಅನಾಮಿಕರು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಫೀಜ್‌ನ ಪುತ್ರ ಕಮಲಾದೀನ್‌ನನ್ನು ಅನಾಮಿಕರು ಅಪಹರಣದ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಮುಫ್ತಿ ಕಾಸಿಯ‌ ಫಾರುಖ್ (30)ನನ್ನು ಲಾಹೋರ್‌ನಲ್ಲಿ ಅನಾಮಿಕ ವ್ಯಕ್ತಿಗಳು ಹಿಂದಿನಿಂದ ಗುಂಡಿಕ್ಕಿ ಹತ್ಯೆಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಜಿ20ಯಲ್ಲಿ ಭಾರತವನ್ನು ಟೀಕಿಸಲು ಮಿತ್ರ ದೇಶಗಳಿಗೆ ಮನವಿ ಮಾಡಿದ್ದ ಕೆನಡಾ

Latest Videos
Follow Us:
Download App:
  • android
  • ios