Asianet Suvarna News Asianet Suvarna News

ಭಾರತದಲ್ಲಿ ಸೀಟ್‌ ಬೆಲ್ಟ್‌ ಧರಿಸದೇ 16,397, ಹೆಲ್ಮೆಟ್‌ ಧರಿಸದೇ 47,000 ಸಾವು

ಕಳೆದ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಕೂಡಾ ಇದೇ ರೀತಿ ಕಾರಿನಲ್ಲಿ ಸೀಟ್‌ಬೆಲ್ಟ್‌ ಧರಿಸದ ಕಾರಣದಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದರು.

16397 Died Without Wearing Seat Belt and 47000 Dies Without Wearing Helmet in India grg
Author
First Published Dec 30, 2022, 12:41 PM IST

ನವದೆಹಲಿ(ಡಿ.30):  ಕಳೆದ ವರ್ಷ ದೇಶಾದ್ಯಂತ 4.12 ಲಕ್ಷ ರಸ್ತೆ ಅಪಘಾತ ಸಂಭವಿಸಿದ್ದು ಇದರಲ್ಲಿ 1.53 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಲ್ಮೆಟ್‌ ಧರಿಸದೇ 46593 ಮತ್ತು ಸೀಟ್‌ ಬೆಲ್ಟ್‌ ಧರಿಸದೆ 16397 ಜನರು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ. ಇದು ವಾಹನ ಪ್ರಯಾಣದ ವೇಳೆ ಕಡ್ಡಾಯ ಸಂಚಾರ ನಿಯಮಗಳನ್ನು ಪಾಲಿಸುವುದರ ಅಗತ್ಯವನ್ನು ಮತ್ತೊಮ್ಮೆ ಸಾರಿಹೇಳಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಕೂಡಾ ಇದೇ ರೀತಿ ಕಾರಿನಲ್ಲಿ ಸೀಟ್‌ಬೆಲ್ಟ್‌ ಧರಿಸದ ಕಾರಣದಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದರು.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿನ ರಸ್ತೆ ಅಪಘಾತ- 2021’ ವರದಿ ಅನ್ವಯ ಕಳೆದ ವರ್ಷ ದೇಶದಲ್ಲಿ ಒಟ್ಟು 4,12,432 ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,53,972 ಜನರು ಸಾವನ್ನಪ್ಪಿದ್ದು, 3,84,448 ಜನರು ಗಾಯಗೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಸಾವು: ದೇಶದಲ್ಲೇ ಬೆಂಗಳೂರು ನಂ.3..!

ಹೆಲ್ಮೆಟ್‌ ಶಾಕ್‌:

ಕಳೆದ ವರ್ಷ 46593 ಬೈಕ್‌ ಸವಾರರು ಹೆಲ್ಮೆಟ್‌ ಧರಿಸದ ಕಾರಣ ತೀವ್ರ ಗಾಯಗೊಂಡು ಅಪಘಾತದಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 32877 ಜನರು ಬೈಕ್‌ ಚಾಲಕರಾಗಿದ್ದರೆ, 13716 ಜನರು ಹಿಂಬದಿ ಸವಾರರು. ಹೆಲ್ಮೆಟ್‌ ಧರಿಸದ ಕಾರಣ 93763 ಜನರು ಗಾಯಗೊಂಡಿದ್ದಾರೆ.

ಸೀಟ್‌ ಬೆಲ್ಟ್‌ :

ಇನ್ನು ಕಾರಿನಲ್ಲಿ ಸೀಟ್‌ಬೆಲ್ಟ್‌ ಧರಿಸದ ಕಾರಣ ಕಳೆದ ವರ್ಷ 16397 ಜನರು ಸಾವನ್ನಪ್ಪಿ, 39,231 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುವುದು ಮತ್ತು ಸೀಟ್‌ ಬೆಲ್ಟ್‌ ಧರಿಸದೆ ವಾಹನ ಚಲಾಯಿಸುವುದು ವಾಹನ ಅಪಘಾತಕ್ಕೆ ಕಾರಣವಾಗುವುದಿಲ್ಲವಾದರೂ, ಇಂಥ ಸುರಕ್ಷತಾ ಕ್ರಮಗಳ ಪಾಲನೆಯಿಂದ ಅಪಘಾತದ ವೇಳೆ ದೇಹಕ್ಕೆ ದೊಡ್ಡಮಟ್ಟದ ಹಾನಿಯಾಗುವುದು ತಪ್ಪಿ, ಜೀವ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.

Follow Us:
Download App:
  • android
  • ios