ರಸ್ತೆ ಅಪಘಾತದಲ್ಲಿ ಸಾವು: ದೇಶದಲ್ಲೇ ಬೆಂಗಳೂರು ನಂ.3..!

2021ರಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಬೆಂಗಳೂರು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ನವದೆಹಲಿ ಮೊದಲ ಸ್ಥಾನದಲ್ಲಿದ್ದು, ಚೆನ್ನೈ 2ನೇ ಸ್ಥಾನದಲ್ಲಿದೆ. 

Bengaluru Ranks 3rd in India in the Number of People Killed in Accidents grg

ನವದೆಹಲಿ(ಡಿ.30):  2021ರಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಬೆಂಗಳೂರು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ನವದೆಹಲಿ ಮೊದಲ ಸ್ಥಾನದಲ್ಲಿದ್ದು, ಚೆನ್ನೈ 2ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿರುವ ‘ಭಾರತದಲ್ಲಿನ ರಸ್ತೆ ಅಪಘಾತ-2021’ರ ವರದಿಯ ಅನ್ವಯ ಬೆಂಗಳೂರಿನಲ್ಲಿ 3,214 ಅಪಘಾತಗಳು ಸಂಭವಿಸಿದ್ದು, 654 ಮಂದಿ ಮೃತಪಟ್ಟಿದ್ದಾರೆ. 2020ರಲ್ಲಿ 646 ಮಂದಿ ರಸ್ತೆ ಅಪಘಾತಗಳಿಂದಾಗಿ ಸಾವಿಗೀಡಾಗಿದ್ದರು. ಇನ್ನು ದೆಹಲಿಯಲ್ಲಿ ಒಟ್ಟು 4,720 ರಸ್ತೆ ಅಪಘಾತಗಳು ಸಂಭವಿಸಿದ್ದು, 1,239 ಮಂದಿ ಸಾವಿಗೀಡಾಗಿದ್ದಾರೆ. 2020ರಲ್ಲಿ 1,196 ಮಂದಿ ಸಾವಿಗೀಡಾಗಿದ್ದರು.

2ನೇ ಸ್ಥಾನದಲ್ಲಿರುವ ಚೆನ್ನೈನಲ್ಲಿ ಒಟ್ಟು 5,034 ರಸ್ತೆ ಅಪಘಾತಗಳು ಸಂಭವಿಸಿದ್ದು, 998 ಮಂದಿ ಅಸುನೀಗಿದ್ದಾರೆ. 2020ರಲ್ಲಿ 872 ಮಂದಿ ಮರಣ ಹೊಂದಿದ್ದರು. ಉಳಿದಂತೆ ಜೈಪುರ, ಕಾನ್ಪುರ, ಆಗ್ರಾ, ಅಲಹಾಬಾದ್‌, ಇಂದೋರ್‌, ರಾಯ್‌ಪುರ ಮತ್ತು ಜಬ್ಬಲ್‌ಪುರ ನಂತರದ ಸ್ಥಾನಗಳಲ್ಲಿವೆ. ಶ್ರೀನಗರ, ಅಮೃತಸರ ಮತ್ತು ಜೆಮ್‌ಷೆಡ್‌ಪುರ ನಗರಗಳು ಕೊನೆಯ 3 ಸ್ಥಾನಗಳಲ್ಲಿವೆ.

Hubballi: ಫ್ಲೈಓವರ್ ಕಾಮಗಾರಿ ವೇಳೆ ನಡೆದ ಅವಘಡ: ಯುವಕನ ಎದೆ ಸೀಳಿದ ಕಬ್ಬಿಣದ ರಾಡು

ಇನ್ನು ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟಾರೆ 34,647 ಅಫಘಾತಗಳು ಸಂಭವಿಸಿದ್ದು, 4ನೇ ಸ್ಥಾನದಲ್ಲಿದೆ. ರಸ್ತೆ ಅಪಘಾತಗಳಲ್ಲಿ ಒಟ್ಟು 10,038 ಮಂದಿ ಸಾವಿಗೀಡಾಗಿದ್ದು, ರಾಜ್ಯ 6ನೇ ಸ್ಥಾನದಲ್ಲಿದೆ. 55,682 ಅಪಘಾತಗಳು ಸಂಭವಿಸಿರುವ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶÜದಲ್ಲಿ 21,227 ಮಂದಿ ಸಾವಿಗೀಡಾಗಿದ್ದು, ಮೊದಲ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios