ರಾಜಸ್ಥಾನ ರಾಜಕೀಯದಲ್ಲಿ, ಯೂನಸ್ ಖಾನ್ ಅವರನ್ನು ಮಾಜಿ ಸಿಎಂ ವಸುಂಧರಾ ರಾಜೆ ಅವರ ಅತ್ಯಂತ ಆಪ್ತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ದಿದ್ವಾನದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಖಾನ್ ಬಿಜೆಪಿ ತೊರೆಯಲು ನಿರ್ಧರಿಸಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಜಯಿಸಿದ್ದರು.
ಜೈಪುರ (ಡಿ.21): ಚುನಾವಣಾ ಫಲಿತಾಂಶದ ನಂತರ, ರಾಜಸ್ಥಾನದ 16 ನೇ ವಿಧಾನಸಭೆಯ ಮೊದಲ ಅಧಿವೇಶನವನ್ನು ಬುಧವಾರ ಕರೆಯಲಾಯಿತು. ನೂತನವಾಗಿ ಆಯ್ಕೆಯಾದ ಶಾಸಕರಿಗೆ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ದಿದ್ವಾನ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಶಾಸಕ ಯೂನಸ್ ಖಾನ್ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಮತ್ತೊಬ್ಬ ಶಾಸಕ ಜುಬೇರ್ ಖಾನ್ ಕೂಡ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜುಬೇರ್ ಖಾನ್ ರಾಜಸ್ಥಾನದ ರಾಮಘಢ (ಅಲ್ವಾರ್) ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಪತ್ನಿ ಶಫೀಯಾ ಖಾನ್‌ರನ್ನು ಸೋಲಿಸಿ ಕಾಂಗ್ರೆಸ್‌ನಿಂದ ಇವರು ಟಿಕೆಟ್ ಪಡೆದುಕೊಂಡಿದ್ದರು. ಇನ್ನು ರಾಜಸ್ಥಾನದ ರಾಜಕೀಯದಲ್ಲಿ ಯೂನುಸ್ ಖಾನ್ ಅವರನ್ನು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಆಪ್ತರು ಎಂದು ಪರಿಗಣಿಸಲಾಗಿದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ದಿದ್ವಾನ ಕ್ಷೇತ್ರದಿಂದ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದಾಗಿ ಬಿಜೆಪಿಯನ್ನು ತೊರೆದಿದ್ದ ಯೂನಿಸ್ ಖಾನ್, ಪಕ್ಷೇತರರಾಗಿ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದರು.
ಖಾನ್ ಅವರು ದಿದ್ವಾನಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ 70,952 ಮತಗಳನ್ನು ಪಡೆದಿದ್ದರು. ಅವರು ಕಾಂಗ್ರೆಸ್‌ನ ಚೇತನ್ ಸಿಂಗ್ ಚೌಧರಿ ಅವರನ್ನು 2,392 ಮತಗಳಿಂದ ಸೋಲಿಸಿದರು. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿತೇಂದ್ರ ಸಿಂಗ್ 22,138 ಮತಗಳಿಂದ ಹೀನಾಯ ಸೋಲು ಕಂಡಿದ್ದಾರೆ. ಇದಿಷ್ಟೇ ಅಲ್ಲ, ಬಿಜೆಪಿ ವಿರುದ್ಧ ಬಂಡಾಯವೆದ್ದು ದಿದ್ವಾನಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ವಸುಂಧರಾ ಸರ್ಕಾರದ ಮಾಜಿ ಸಚಿವ ಯೂನಸ್ ಖಾನ್ ಕೂಡ ದೇಶನೋಕ್‌ನ ಕರ್ಣಿ ಮಾತೆಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಚುನಾವಣೆ ಕಣಕ್ಕೆ ಇಳಿದಿದ್ದರು.
16 ಶಾಸಕರಿಂದ ಸಂಸ್ಕೃತದಲ್ಲಿ ಪ್ರಮಾಣವಚನ: ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರಾದ ಜೋರಂ ಕುಮಾವತ್, ನೋಕ್ಷಮ್ ಚೌಧರಿ, ಜೇತಾನಂದ್ ವ್ಯಾಸ್, ಪಬ್ಬರಾಮ್ ವಿಷ್ಣೋಯ್, ಮಹಂತ್ ಪ್ರತಾಪುರಿ, ಬಾಬು ಸಿಂಗ್ ರಾಥೋಡ್, ದೀಪ್ತಿ ಮೊಹೇಶ್ವರಿ, ಕೈಲಾಶ್ ಮೀನಾ, ಗೋಪಾಲ್ ಶರ್ಮಾ, ಛಗನ್ ಸಿಂಗ್, ಜೋಗೇಶ್ವರ್ ಗರ್ಗ್, ಕಾಂಗ್ರೆಸ್ ಶಾಸಕ ಜುಬೇರ್ ಖಾನ್ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದಲ್ಲದೇ ಸ್ವತಂತ್ರ ಯೂನಸ್ ಖಾನ್ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ.
ಆದಾಯ ಮೀರಿ ಆಸ್ತಿ ಗಳಿಕೆ, ತಮಿಳುನಾಡು ಸಚಿವ ಪೊನ್ಮುಡಿಗೆ 3 ವರ್ಷ ಜೈಲು!
ಬಾಗಿ ದೌರಾದ ಶಾಸಕ ಮಹೇಂದ್ರಜಿತ್ ಮಾಳವೀಯ, ದಂತ್ರಾಮ್‌ಗಢದ ವೀರೇಂದ್ರ ಸಿಂಗ್, ರಾಯಸಿಂಗ್ ನಗರದ ಸೋಹನ್‌ಲಾಲ್ ನಾಯಕ್, ತಿಜಾರಾದ ಮಹಂತ್ ಬಾಲಕನಾಥ್, ನಾಡಬಾಯಿಯಿಂದ ಜಗತ್ ಜಗತ್ ಸಿಂಗ್, ಬಂಡಿಕುಯಿಯ ಶಾಸಕ ಭಗಚಂದ್ ತಕ್ರಾ, ವೈರ್‌ನ ಬಹುದರ್ ಸಿಂಗ್ ಕೋಲಿ ಮತ್ತು ನಿಂಬಹೆರಾದ ಶ್ರೀಚಂದ್ ಕೃಪಲಾನಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿಲ್ಲ. ವಿಧಾನಸಭೆ ಅಧಿವೇಶನದ ಮೊದಲ ದಿನವೇ 191 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, 8 ಮಂದಿ ಪ್ರಮಾಣ ವಚನ ಸ್ವೀಕರಿಸಲು ಬಾಕಿ ಉಳಿದಿದ್ದಾರೆ.
ಕಂತೆ ಕಂತೆ ದುಡ್ಡೆಲ್ಲಾ ಯಾರ ಸ್ವತ್ತು..? ಹೇಗೆ ಬಂತು..? ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಧೀರಜ್ ಸಾಹು..?
