ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ ಜನರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ನೂತನ 'ವಿಶ್ವಕರ್ಮ ಯೋಜನೆಯನ್ನು 15 ಸಾವಿರ ಕೋಟಿ ರು. ವೆಚ್ಚದಲ್ಲಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನವದೆಹಲಿ: ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ ಜನರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ನೂತನ 'ವಿಶ್ವಕರ್ಮ ಯೋಜನೆಯನ್ನು 15 ಸಾವಿರ ಕೋಟಿ ರು. ವೆಚ್ಚದಲ್ಲಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ವಿಶ್ವಕರ್ಮ ಜಯಂತಿ ದಿನವಾದ ಸೆ.17ರಂದು ಈ ಯೋಜನೆಯನ್ನು ಜಾರಿಗೆ ತರುವುದಾಗಿ ಅವರು ಪ್ರಕಟಿಸಿದ್ದಾರೆ.
ದೆಹಲಿಯ ಕೆಂಪುಕೋಟೆಯ ಮೇಲೆ ದೇಶದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ (independence day) ನಡೆಸಿದ ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿ ಮೋದಿ, ‘ಸಾಂಪ್ರದಾಯಿಕ ಕೌಶಲ್ಯ (traditional skills) ಹೊಂದಿರುವ ಬಡಗಿಗಳು, ಕಲ್ಲು ಕೆಲಸ ಮಾಡುವವರು, ಚಿನ್ನದ ಕೆಲಸ ಮಾಡುವವರು, ಅಗಸರು, ಕ್ಷೌರಿಕರು ಸೇರಿದಂತೆ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ 13.5 ಕೋಟಿ ಇತರೆ ಹಿಂದುಳಿದ ವರ್ಗದ (ಒಬಿಸಿ) ಜನರಿಗೆ ಇನ್ನಷ್ಟುಅವಕಾಶಗಳನ್ನು ಸೃಷ್ಟಿಸಿ ಅವರ ಜೀವನಕ್ಕೆ ಇನ್ನಷ್ಟುಬಲ ತುಂಬುವ ನಿಟ್ಟಿನಲ್ಲಿ 13000- 15 ಸಾವಿರ ಕೋಟಿ ರು. ವೆಚ್ಚದಲ್ಲಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲಾಗುವುದು’ ಎಂದು ಪ್ರಕಟಿಸಿದರು.
ಈಗಾಗಲೇ ವಸತಿ, ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲು ಪಿಎಂ ಆತ್ಮನಿರ್ಭರ (Atma nirbhara Bharat) ನಿಧಿಯಡಿ 50 ಸಾವಿರ ಕೋಟಿ ರು. ಸೇರಿದಂತೆ ವಿವಿಧ ಯೋಜನೆಗಳ ಮೂಲಕ 13.5 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ. ಜೀವನದಲ್ಲಿ ಇದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ.
ಕ್ರಿಕೆಟ್ ಜಗತ್ತಿಗೆ ಬ್ಯಾಟ್ ತಯಾರಿಸಿ ಕೊಡುವ ವಿಶ್ವಕರ್ಮ ಕಾಯಕಯೋಗಿಗಳು
20 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಮುದ್ರಾ ಯೋಜನೆಯು ಸ್ವಯಂ ಉದ್ಯೋಗ, ಉದ್ಯಮ ಮತ್ತು ದೇಶದ ಯುವಕರಿಗೆ ನವೀನ ಕಲ್ಪನೆಯ ಉದ್ಯಮ ಸ್ಥಾಪನೆಗೆ ಅವಕಾಶಗಳನ್ನು ಕಲ್ಪಿಸಿದೆ. ಈಗಾಗಲೇ 8 ಕೋಟಿ ಜನರು ಹೊಸ ಉದ್ಯೊಗ ಸ್ಥಾಪಿಸಿದ್ದಾರೆ ಮತ್ತು ಇಂಥ ಪ್ರತಿ ಉದ್ಯೋಗಿ ಕನಿಷ್ಠ ಒಬ್ಬರು ಅಥವಾ ಇಬ್ಬರಿಗೆ ಉದ್ಯೋಗ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ಸರ್ಕಾರ 3.5 ಲಕ್ಷ ಕೋಟಿ ರು.ಗಳನ್ನು ಸಾಲವಾಗಿ ನೀಡಿದೆ ಎಂದು ಮೋದಿ ಬಣ್ಣಿಸಿದರು.
