Asianet Suvarna News Asianet Suvarna News

Budget 2023: ವಿಶ್ವಕರ್ಮರ ಬೆನ್ನಿಗೆ ನಿಂತ ಮೋದಿ, ವಿಕಾಸಕ್ಕೆ ಆದಿ!

ದೇಶದಲ್ಲಿನ ಸಾವಿರಾರು ಕುಶಲಕರ್ಮಿಗಳು ಹಾಗೂ ಕರಕುಶಲತೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶದಲ್ಲಿ ಪಿಎಂ ವಿಕಾಸ್‌ ಯೋಜನೆ ಜಾರಿ ಮಾಡಲಾಗಿದೆ. ಪಿಎಂ ವಿಕಾಸ್‌ ಯೋಜನೆಯ ಮೂಲಕ ವಿಶ್ವಕರ್ಮರು ಭಾರತದ ಪ್ರಗತಿಯಲ್ಲಿ ಸೇರಿಕೊಳ್ಳುವುದಲ್ಲದೆ ದೇಶದ ಬೆಳವಣಿಗೆ ಪ್ರಬಲ ಜನಾಂಗವಾಗಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

Budget 2023: PM Vishwa Karma Kaushal Samman or PM VIKAS Yojana san
Author
First Published Feb 1, 2023, 6:20 PM IST

ನವದೆಹಲಿ (ಫೆ.1): ನೂರಾರು ವರ್ಷಗಳಿಂದ ಕರಕುಶಲ ಕೆಲಸ ಹಾಗೂ ಆಕರ್ಷಕ ವಸ್ತುಗಳ ತಯಾರಿಕೆ  ಮಾಡುವ ಮೂಲಕ ಗಮನಸೆಳೆದಿರುವ ವಿಶ್ವಕರ್ಮರಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಮೋದಿ 2.0 ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ದೇಶದಾದ್ಯಂತ ಹರಡಿರುವ ದೊಡ್ಡ ವರ್ಗದ ಜನರಾದ ವಿಶ್ವಕರ್ಮ ಸಮುದಾಯದ ಸಬಲೀಕರಣಕ್ಕಾಗಿ ವಿಶಿಷ್ಟ ಯೋಜನೆಯನ್ನು ಘೋಷಣೆ ಮಾಡಿದರು. ಪಿಎಂ ವಿಕಾಸ್‌ (ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್‌ ಸಮ್ಮಾನ್‌) ಯೋಜನೆಯ ದೇಶದಲ್ಲಿ ವಿವಿಧ ಸಾಂಪ್ರದಾಯಿಕ ಮತ್ತು ನುರಿತ ಕರಕುಶಲ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಜನರಿಗೆ ಇನ್ನಷ್ಟು ಬೆಂಬಲ ನೀಡುವ ಕೆಲಸ ಮಾಡಲಿದೆ. ಸರ್ಕಾರವು ಅವರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಬೆಂಬಲವನ್ನು ನೀಡುತ್ತದೆ, ಅವರಿಗೆ ತಂತ್ರಜ್ಞಾನದ ಸಹಾಯದ ಸ್ಪರ್ಶ ನೀಡುವುದು ಮತ್ತು ಅವರ ಸರ್ವತೋಮುಖ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಅವರಿಗೆ ಸಾಲ ಸೌಲಭ್ಯಗಳನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ. ಪಿಎಂ ವಿಕಾಸ್ ದೇಶಾದ್ಯಂತ ಸಾವಿರಾರು ಕುಶಲಕರ್ಮಿಗಳು ಮತ್ತು ಕರಕುಶಲ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಿದೆ. '

ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಅಡಿಯಲ್ಲಿ ದೇಶದ ಕುಶಲಕರ್ಮಿಗಳು ಮತ್ತು ಕರಕುಶಲಿಗರಿಗೆ ವಿಶೇಷ ಪ್ಯಾಕೇಜ್ ನೀಡಲಾಗುತ್ತದೆ. ಆ ಮೂಲಕ ಅವರನ್ನು ಎಂಎಸ್‌ಎಂಇ ಯೋಜನೆಗಳ ಸರಪಳಿಯೊಂದಿಗೆ ಸಂಯೋಜಿಸಲು ಸಹಾಯ ಮಾಡುತ್ತದೆ. ಒಮ್ಮೆ ಎಂಎಸ್‌ಎಂಇ ಜೊತೆ ಇವರು ಸಂಯೋಜಿಸಲ್ಪಟ್ಟರೆ ಅವರು ತಯಾರಿಸಿದ ವಸ್ತುಗಳು ಮತ್ತು ವ್ಯಾಪಾರದ ಅವಕಾಶ ಪ್ರಮಾಣವು ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತದೆ.

Union Budget 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

ಪಿಎಂ ವಿಕಾಸ್‌ ಬಗ್ಗೆ ಸೀತಾರಾಮನ್‌ ಹೇಳಿದ್ದೇನು: "ಪಿಎಂ ವಿಶ್ವ ಕರ್ಮ ಕೌಶಲ್ ಸಮ್ಮಾನ್, ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗರಿಗೆ ಸಹಾಯದ ಪ್ಯಾಕೇಜ್ ಅನ್ನು ನೀಡುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಎಂಎಸ್‌ಎಂಇ ಪರಿಧಿಯೊಳಗೆ ಅವರನ್ನು ಸೇರಿಸುವ ಮೂಲಕಅವರ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ವ್ಯಾಪಾರದ ಅವಕಾಶಗಳನ್ನು ತೆರೆಯಲು ಅನುವು ಮಾಡಿಕೊಡುತ್ತದೆ ಎಂದು ಸೀತಾರಾಮನ್‌ ತಮ್ಮ ಭಾಷಣದಲ್ಲಿ ಹೇಳಿದ್ದರು.

Union Budget 2023:ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ; ಉಳಿತಾಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ

ಬಜೆಟ್‌ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಜೆಟ್‌ಅನ್ನು ಶ್ಲಾಘನೆ ಮಾಡಿದ್ದು ಮಾತ್ರವಲ್ಲದೆ, ಪಿಎಂ ವಿಶ್ವಕರ್ಮ ಕೌಶಲ್‌ ಸಮ್ಮಾನ್‌ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದರು. ಇದು ಕರಕುಶಲಿಗರು ಹಾಗೂ ಕುಶಲಕರ್ಮಿಗಳ ಬದುಕಿನಲ್ಲಿ ಗೇಮ್‌ ಚೇಂಜರ್‌ ಆಗಿರಲಿದೆ. ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡಲಿದೆ ಎಂದು ಹೇಳಿದರು. ಅದರೊಂದಿಗೆ ಭಾರತದ ಪ್ರಗತಿಯ ಹಾದಿಗೆ ಅವರೂ ಕೂಡ ಸಹಾಯ ಮಾಡಲಿದ್ದಾರೆ ಎಂದು ತಿಳಿಸಿದರು. ದೇಶದಲ್ಲಿ ವಿಶ್ವಕರ್ಮ ಸಮುದಾಯವನ್ನು ಭಿನ್ನ ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. 140 ಜಾತಿಗಳನ್ನು ವಿಶ್ವಕರ್ಮ ಸಮುದಾಯ ಎನ್ನಲಾಗುತ್ತದೆ.

ದೇಶದಲ್ಲಿರುವ ವಿಶ್ವಕರ್ಮ ಸಮುದಾಯ

Budget 2023: PM Vishwa Karma Kaushal Samman or PM VIKAS Yojana san

 

 

Follow Us:
Download App:
  • android
  • ios