Asianet Suvarna News Asianet Suvarna News

ರೈತರಿಗೆ ಕೇಂದ್ರದ ವಿಶೇಷ ಗೌರವ:1500 ರೈತ ದಂಪತಿಗೆ ಇದೇ ಮೊದಲ ಬಾರಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ

ಪ್ರತಿ ವರ್ಷ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ದಂಪತಿಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಈ ಬಾರಿ 1,500 ರೈತ ದಂಪತಿಗಳನ್ನು ದೇಶದ ವಿವಿಧ ಭಾಗಗಳಿಂದ ಆರಿಸಿ ಆಹ್ವಾನ ನೀಡಲಾಗಿದೆ.

1500 farmer couples from different corners of the country have been invited to Delhi Republic Day for the first time akb
Author
First Published Jan 19, 2024, 8:57 AM IST

ನವದೆಹಲಿ: ಪ್ರತಿ ವರ್ಷ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ದಂಪತಿಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಈ ಬಾರಿ 1,500 ರೈತ ದಂಪತಿಗಳನ್ನು ದೇಶದ ವಿವಿಧ ಭಾಗಗಳಿಂದ ಆರಿಸಿ ಆಹ್ವಾನ ನೀಡಲಾಗಿದೆ. ಇದರಲ್ಲಿ ವಿವಿಧ ರೈತ ಉತ್ಪಾದಕರ ಸಂಘದ ಪ್ರತಿನಿಧಿಗಳು ಮತ್ತು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳು ಮತ್ತು ಸರ್ಕಾರದ ವಿವಿಧ ಸಣ್ಣ ನೀರಾವರಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 

ಇವರಿಗೆ ಕೇಂದ್ರ ಕೃಷಿ ಸಚಿವ ಅರ್ಜುನ್‌ ಮುಂಡಾ ಕಾರ್ಯಕ್ರಮದ ನಂತರ ಭೋಜನಕೂಟವನ್ನೂ ಏರ್ಪಡಿಸಿದ್ದಾರೆ. ಕಳೆದ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೂ 500 ರೈತರನ್ನು ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಲಾಗಿತ್ತು.

ಉದ್ಯೋಗ ಕಡಿತ ಸುಳಿವು ನೀಡಿದ ಗೂಗಲ್‌ನ ಪಿಚೈ

ಕ್ಯಾಲಿಫೋರ್ನಿಯಾ: ಈಗಾಗಲೇ ಸಾವಿರಾರು ಉದ್ಯೋಗಿಗಳ ವಜಾ ಮಾಡಿರುವ ಸರ್ಚ್ ಇಂಜಿನ್ ಗೂಗಲ್ 2024ರಲ್ಲಿ ಮತ್ತೆ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆ ಕುರಿತು ಗೂಗಲ್ ಸಿಇಒ ಆಗಿರುವ ಭಾರತೀಯ ಸುಂದರ್‌ ಪಿಜೈ ಸುಳಿವು ನೀಡಿದ್ದಾರೆ. 'ನಾವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೇವೆ. ಈ ವರ್ಷ ಪ್ರಮುಖ ಯೋಜನೆಯಲ್ಲಿ ಹೂಡಿಕೆ ಮಾಡುತ್ತೇವೆ. ವಾಸ್ತವವೆಂದರೆ : ಈ ಹೂಡಿಕೆಯ ಸಾಮರ್ಥ್ಯ ಸೃಷ್ಟಿಸಲು, ನಾವು ಕಠಿಣ ಆಯ್ಕೆಗಳನ್ನು ಮಾಡಬೇಕಾಗಿದೆ' ಎಂದು ಸುಂದರ್ ಹೇಳಿದ್ದಾರೆ. ಹೀಗಾಗಿ ವೆಚ್ಚ ಕಡಿತದ ಮೂಲಕ ಹೂಡಿಕೆ ಪ್ರಮಾಣ ಹೆಚ್ಚಿಸಲು ಉದ್ಯೋಗಿಗಳನ್ನು ಗೂಗಲ್ ಶೀಘ್ರ ವಜಾ ಮಾಡಲಿದೆ ಎಂದು ವರದಿಯಾಗಿದೆ.

Kartavya Path Jamun Trees: ದೆಹಲಿಯ ಕರ್ತವ್ಯಪಥದಲ್ಲಿ ನೇರಳೆ ಹಣ್ಣು ಕೀಳಲು ಟೆಂಡರ್‌!

ನೀರಿನ ಕೊರತೆ: ಪನಾಮ ಕಾಲುವೆಯಲ್ಲಿ ದೈನಂದಿನ ಹಡಗು ಸಂಚಾರ 24ಕ್ಕಿಳಿಕೆ

ಪನಾಮ ನಗರ: ಕಳೆದ ವರ್ಷ ಮಳೆಯ ಕೊರತೆಯಿಂದ ಉಂಟಾದ ಬರಗಾಲದಿಂದಾಗಿ ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾಗಿರುವ ಪನಾಮ ಕಾಲುವೆಯಲ್ಲಿ ನೀರಿನ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಅಲ್ಲಿ ಹಡಗುಗಳ ಸಂಚಾರದ ಪ್ರಮಾಣವನ್ನು ಕಡಿತಗೊಳಿಸಲಾಗಿದ್ದು ನಿತ್ಯ 24 ಹಡಗಿಗೆ ಮಾತ್ರ ಕ್ರಾಸಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ. ಕೆರಿಬಿಯನ್ ಸಮುದ್ರ ಮತ್ತು ಫೆಸಿಫಿಕ್ ಸಾಗರವನ್ನು ಸಂಪರ್ಕಿಸುವ ಪನಾಮ ಕಾಲುವೆಯು ಸರಕು ಸಾಗಣೆ ಮಾಡುವ ಹಡಗುಗಳ 50 ಮೈಲಿ ಉದ್ದದ ಕಾಲುವೆಯಾಗಿದ್ದು ಇದು ಜಗತ್ತಿನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊದಲ ಬಾರಿಗೆ ಮಹಿಳೆಯರಿಂದಲೇ ಪಥಸಂಚಲನ ನಡೆಸಲು ನಿರ್ಧಾರ

ಸ್ನೇಹಿತನ ಅಮಾನತಿಗೆ ಬೇಸರ, ಪ್ರೊಫೆಸರ್‌ಗೆ ವಿದ್ಯಾರ್ಥಿ ಚಾಕು ಇರಿತ

ಕೊಚ್ಚಿ: ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಪ್ರಾಧ್ಯಾಪಕರಿಗೆ ಹಿಂದಿನಿಂದ ಚಾಕುವಿನಿಂದ ಇರಿದು ಪರಾರಿಯಾದ ಆಘಾತಕಾರಿ ಘಟನೆ ನಗರದ ಮಹಾರಾಜ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ನಿಜಾಮುದ್ದೀನ್ ಬಳಿ ಮೊಹಮ್ಮದ್ ರಶೀದ್ ಎಂಬ ವಿದ್ಯಾರ್ಥಿಯು, ತನ್ನ ಸ್ನೇಹಿತನ ಅಮಾನತು ಕುರಿತು ವಾಗ್ವಾದ ನಡೆಸಿದ್ದಾನೆ. ವಾಗ್ವಾದದ ಬಳಿಕ ಪ್ರಾಧ್ಯಾಪಕರಿಗೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಜಾ ಮುದ್ದೀನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಶೀದ್ ಪತ್ತೆಗೆ ಬಲೆ ಬೀಸಿದ್ದಾರೆ.

Follow Us:
Download App:
  • android
  • ios