ಆ.21ರಿಂದ ಆರಂಭವಾಗಲಿರುವ ಮಣಿಪುರ ವಿಧಾನಸಭಾ ಅಧಿವೇಶನಕ್ಕೆ ರಾಜಧಾನಿ ಇಂಫಾಲ್‌ಗೆ (Imphal)ತೆರಳಲು ಇದೀಗ ಕುಕಿ ಸಮುದಾಯದ ಶಾಸಕರು ಹೆದರಿಕೊಂಡಿದ್ದಾರೆ. ಅಲ್ಲಿ ತಮ್ಮ ಮೇಲೆ ದಾಳಿ ನಡೆಯಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ ಅವರೆಲ್ಲಾ ಅಧಿವೇಶನ ಬಹಿಷ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೋಲ್ಕತಾ: ಕಳೆದ 3 ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೇವಲ ಜನಸಾಮಾನ್ಯರನ್ನು ಆತಂಕಕ್ಕೆ ಗುರಿ ಮಾಡಿಲ್ಲ. ಬದಲಾಗಿ ಸ್ಥಳೀಯ ಶಾಸಕರನ್ನೂ ಆತಂಕದ ಮಡುವಿಗೆ ತಳ್ಳಿದೆ. ಆ.21ರಿಂದ ಆರಂಭವಾಗಲಿರುವ ಮಣಿಪುರ ವಿಧಾನಸಭಾ ಅಧಿವೇಶನಕ್ಕೆ ರಾಜಧಾನಿ ಇಂಫಾಲ್‌ಗೆ (Imphal)ತೆರಳಲು ಇದೀಗ ಕುಕಿ ಸಮುದಾಯದ ಶಾಸಕರು ಹೆದರಿಕೊಂಡಿದ್ದಾರೆ. ಅಲ್ಲಿ ತಮ್ಮ ಮೇಲೆ ದಾಳಿ ನಡೆಯಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ ಅವರೆಲ್ಲಾ ಅಧಿವೇಶನ ಬಹಿಷ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಪಿಟಿಐ ಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಚುರಾಚಂದ್‌ಪುರ (Churachand) ಬಿಜೆಪಿ ಶಾಸಕ (ಕುಕಿ) ಎಲ್‌.ಎಂ. ಕೌಟೆ, ರಾಜ್ಯದಲ್ಲಿ ಈಗಿರುವ ಸ್ಥಿತಿಯಲ್ಲಿ ಕಲಾಪಕ್ಕೆ ತೆರಳಲು ಆಗುವುದಿಲ್ಲ. ಜೊತೆಗೆ ಕುಕಿ ಸಮುದಾಯದ ಶಾಸಕರಿಗೂ ಸದನಕ್ಕೆ ಬರಲು ಬಹಳ ಕಷ್ಟವಾಗುತ್ತದೆ ಎಂದರು. ಆದರೆ ಈ ಬಗ್ಗೆ ಆಶ್ವಾಸನೆ ನೀಡಿರುವ ಮೈತೇಯಿ ಸಂಸ್ಥೆಯಾದ ಕೋಕೊಮಿ, ಶಾಸಕರು ಬರುವುದಾದರೆ ನಾವು ಅವರಿಗೆ ಬೇಕಾದ ಎಲ್ಲ ಭದ್ರತೆಗಳನ್ನು ಒದಗಿಸುತ್ತೇವೆ. ಆದರೆ ಅವರು ವಿಧಾನಸಭೆಯಲ್ಲಿ ಕುಕಿಗೆ ಪ್ರತ್ಯೇಕ ರಾಜ್ಯದ ಮಂಡನೆಯನ್ನು ವಿರೋಧಿಸಬೇಕು ಎಂದು ಆಗ್ರಹಿಸಿದೆ.

ಮಣಿಪುರದಲ್ಲಿ ಕಾನೂನು ವ್ಯವಸ್ಥೆ ಪೂರ್ಣ ಕುಸಿತ: ಸುಪ್ರೀಂ

ಪಶ್ಚಿಮ ಇಂಫಾಲ್‌ನಲ್ಲಿ ಓರ್ವನಿಗೆ ಗುಂಡೇಟು

ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ (Manipur) ಮತ್ತೆ ಘರ್ಷಣೆ ನಡೆದಿದ್ದು ಪಶ್ಚಿಮ ಇಂಫಾಲ್‌ ಜಿಲ್ಲೆಯಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಓರ್ವನ ಮೇಲೆ ಗುಂಡು ಹಾರಿಸಲಾಗಿದೆ. ಶನಿವಾರ ಸಂಜೆ ಇಲ್ಲಿನ ಲಾಂಗೋಲ್‌ ಗ್ರಾಮದಲ್ಲಿ ಗುಂಪೊಂದು ಏಕಾಏಕಿ ದಾಳಿ ನಡೆಸಿ 15 ಮನೆಗಳಿಗೆ ಬೆಂಕಿ ಹಚ್ಚಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪನ್ನು ಚದುರಿಸಲು ಹಲವು ಸುತ್ತು ಆಶ್ರುವಾಯು ಸಿಡಿಸಿದ್ದಾರೆ. ಇದೇ ವೇಳೆ 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದ್ದು ಆತ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಭಾನುವಾರ ಪರಿಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಪೂರ್ವ ಇಂಫಾಲ್‌ (Imphal) ಜಿಲ್ಲೆಯಲ್ಲೂ ಹಿಂಸಾಚಾರ ನಡೆದಿದ್ದು ಇಲ್ಲಿನ ದೊಡ್ಡ ವಾಣಿಜ್ಯ ಸಂಸ್ಥೆ ಹಾಗೂ ಸಮೀಪದ ಮೂರು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಅಗ್ನಿಶಾಮಕ ದಳಗಳು ಬೆಂಕಿ ನಂದಿಸಿವೆ.

ಮೇಘಾಲಯ ಸಿಎಂ ಸಂಗ್ಮಾ ಕಚೇರಿಗೆ ಕಲ್ಲು: ನಗ್ನ ಪರೇಡ್‌ ಸಂತ್ರಸ್ತರ ಭೇಟಿ ಮಾಡಿದ ಸ್ವಾತಿ

ನಗ್ನ ಪರೇಡ್‌ ನಡೆದ ಸ್ಥಳದಲ್ಲಿ ಐವರು ಪೊಲೀಸರು ಸಸ್ಪೆಂಡ್‌

ಳೆದ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ್ದ ಹಾಗೂ ಸಾಮೂಹಿಕ ಅತ್ಯಾಚಾರ ಮಾಡಿದ್ದ ಅಮಾನವೀಯ ಘಟನೆ ನಡೆದಿದ್ದ ಪ್ರದೇಶದ ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇ.4ರಂದು ನಡೆದಿದ್ದ ಘಟನೆಯ ವಿಡಿಯೋ ಜು.19ರಂದು ವೈರಲ್‌ ಆಗಿ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಘಟನೆ ನಡೆದ ತೌಬಲ್‌ ಜಿಲ್ಲೆಯ ನಾಮಗ್‌ಪೋಕ್‌ ಸೆಕ್ಮೈ ಪೊಲೀಸ್‌ ಠಾಣೆಯ ಉಸ್ತುವಾರಿ ಸೇರಿ ಐವರನ್ನು ಘಟನೆ ತಡೆಯುವಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಮಣಿಪುರ ಪೊಲೀಸ್‌ ಇಲಾಖೆ ಭಾನುವಾರ ತಿಳಿಸಿದೆ.