Asianet Suvarna News Asianet Suvarna News

15 ದಿನ ರಜೆ: ಕೊರೋನಾ ಹಾವಳಿ ಮಧ್ಯೆ ಕೇಂದ್ರ ನೌಕರರಿಗೆ ಗುಡ್‌ ನ್ಯೂಸ್!

* ದೇಶವನ್ನು ಕಾಡುತ್ತಿದೆ ಕೊರೋನಾ ಎರಡನೇ ಅಲೆ

* ಕೊರೋನಾ ಸಾಂಕ್ರಾ​ಮಿ​ಕ​ದಿಂದಾಗಿ ಉದ್ಯೋ​ಗಿ​ಗಳಿಗೆ ಸಂಕಷ್ಟ

* 15 ದಿನ ರಜೆ: ಕೊರೋನಾ ಹಾವಳಿ ಮಧ್ಯೆ ಕೆಂದ್ರ ನೌಕರರಿಗೆ ಗುಡ್‌ ನ್ಯೂಸ್

15 days casual leave for Central govt employees whose parents test positive pod
Author
Bangalore, First Published Jun 10, 2021, 11:28 AM IST

ನವ​ದೆ​ಹ​ಲಿ(ಜೂ.10): ತಮ್ಮ ಪೋಷ​ಕರು, ಕುಟುಂಬದ ಯಾವುದೇ ಸದ​ಸ್ಯರು ಕೊರೋನಾ ಸೋಂಕಿ​ತ​ರಾ​ದರೆ ಕೇಂದ್ರ ಸರ್ಕಾರಿ ನೌಕ​ರರು 15 ದಿನ​ಗಳ ವಿಶೇಷ ರಜೆ​ಯನ್ನು ಪಡೆ​ದು​ಕೊ​ಳ್ಳ​ಬ​ಹು​ದಾ​ಗಿದೆ ಎಂದು ಸಿಬ್ಬಂದಿ ಸಚಿ​ವಾ​ಲಯ ಆದೇ​ಶ​ ಹೊರ​ಡಿ​ಸಿ​ದೆ.

ಒಂದು ವೇಳೆ ಕುಟುಂಬದ ಯಾವುದೇ ಸದಸ್ಯ ಆಸ್ಪತ್ರೆಗೆ ದಾಖ​ಲಾ​ದರೆ, ಅವರು ಬಿಡು​ಗಡೆ ಆಗು​ವ​ವ​ರೆಗೆ 15 ದಿನ​ಗಳ ಬಳಿ​ಕವೂ ನೌಕ​ರರು ರಜೆ​ಯನ್ನು ಪಡೆ​ದು​ಕೊ​ಳ್ಳ​ಬ​ಹು​ದಾ​ಗಿದೆ.

ಕೊರೋನಾ ಸಾಂಕ್ರಾ​ಮಿ​ಕ​ದಿಂದಾಗಿ ಉದ್ಯೋ​ಗಿ​ಗಳು ಎದು​ರಿ​ಸು​ತ್ತಿ​ರುವ ಸಂಕ​ಷ್ಟದ ಹಿನ್ನೆ​ಲೆ​ಯಲ್ಲಿ ಕೇಂದ್ರ ಸರ್ಕಾರ ಉದ್ಯೋ​ಗಿ​ಗ​ಳಿಗೆ ಕ್ವಾರಂಟೈನ್‌ ಅವ​ಧಿ​ಯಲ್ಲಿ ರಜೆ ಪಡೆ​ಯಲು ಅವ​ಕಾಶ ಕಲ್ಪಿ​ಸಿದೆ. ಉದ್ಯೋ​ಗಿ​ಯೇ ಸ್ವತಃ ಕೊರೋನಾ ಸೋಂಕಿ​ತ​ರಾದರೆ 20 ದಿನ​ಗಳ ರಜೆ​ಯನ್ನು ಪಡೆ​ಯಲು ಅರ್ಹ​ರಾ​ಗಿ​ದ್ದಾರೆ.

ಒಂದು ವೇಳೆ ಅವರು 20 ದಿನ​ಗಳ ಬಳಿ​ಕವೂ ಆಸ್ಪ​ತ್ರೆಗೆ ದಾಖ​ಲಾ​ಗುವ ಸಂದರ್ಭ ಎದು​ರಾ​ದರೆ ರಜೆ​ಯನ್ನು ಇನ್ನಷ್ಟುದಿನ ವಿಸ್ತರಿ​ಸ​ಲಾ​ಗು​ವುದು ಎಂದು ಆದೇ​ಶ​ದಲ್ಲಿ ತಿಳಿ​ಸ​ಲಾ​ಗಿದೆ.

Follow Us:
Download App:
  • android
  • ios