ಇಂಡಿಯಾ ಭಾರತ ಮಾಡಲು 14,000 ಕೋಟಿ ವೆಚ್ಚ..!
ಭಾರತದಲ್ಲಿನ ನಗರಗಳ ಹೆಸರು ಬದಲಾವಣೆ, ವಿವಿಧ ದೇಶಗಳ ಹೆಸರು ಮತ್ತು ಅಲ್ಲಿನ ನಗರ ಬದಲಾವಣೆಗಳಿಗೆ ತಗುಲಿದ ವೆಚ್ಚವನ್ನು ಆಧಾರವಾಗಿಟ್ಟುಕೊಂಡು ಈ ಅಂದಾಜನ್ನು ಮಾಡಲಾಗಿದೆ ಎಂದು ವರದಿ ಹೇಳಿದೆ.

ನವದೆಹಲಿ(ಸೆ.07): ದೇಶದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂಬ ವದಂತಿಗಳ ಬೆನ್ನಲ್ಲದೇ ಈ ಹೆಸರು ಬದಲಾವಣೆಗೆ ಬರೋಬ್ಬರಿ 14 ಸಾವಿರ ಕೋಟಿ ರು. ವೆಚ್ಚವಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಗ್ರಾಮ ಮಟ್ಟದಿಂದ ಆರಂಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬದಲಾವಣೆಗೆ ಮಾಡಬೇಕಿರುವುದರಿಂದ ಈ ಪ್ರಮಾಣದಲ್ಲಿ ಖರ್ಚು ಉಂಟಾಗಲಿದೆ ಎನ್ನಲಾಗಿದೆ.
ಭಾರತದಲ್ಲಿನ ನಗರಗಳ ಹೆಸರು ಬದಲಾವಣೆ, ವಿವಿಧ ದೇಶಗಳ ಹೆಸರು ಮತ್ತು ಅಲ್ಲಿನ ನಗರ ಬದಲಾವಣೆಗಳಿಗೆ ತಗುಲಿದ ವೆಚ್ಚವನ್ನು ಆಧಾರವಾಗಿಟ್ಟುಕೊಂಡು ಈ ಅಂದಾಜನ್ನು ಮಾಡಲಾಗಿದೆ ಎಂದು ವರದಿ ಹೇಳಿದೆ. ಬ್ರಿಟಿಷರ ವಸಾಹಾತುಶಾಹಿ ಮನೋಭಾವವನ್ನು ತೊಡೆದು ಹಾಕಲು ಭಾರತದಲ್ಲೂ ಹಲವು ನಗರಗಳ ಹೆಸರನ್ನು ಬದಲಾವಣೆ ಮಾಡಲಾಗಿತ್ತು. ಶ್ರೀಲಂಕಾ ಸಹ 1972ರಲ್ಲಿ ತನ್ನ ಸಿಲೋನ್ ಹೆಸರನ್ನು ಬದಲಾವಣೆ ಮಾಡಿತ್ತು. 2018 ಸ್ವಿಜರ್‌ರ್ಲೆಂಡ್ ಸಹ ತನ್ನ ನಗರಗಳ ಹೆಸರನ್ನು ಬದಲಾವಣೆ ಮಾಡಿತ್ತು. ಇವುಗಳಿಗಾಗಿ ಆ ದೇಶದ ಜಿಡಿಪಿಯ ಶೇ.6ರಷ್ಟುವೆಚ್ಚ ತಗುಲಿತ್ತು.
ದೇಶಕ್ಕೆ ಭಾರತ, ಇಂಡಿಯಾ ಹೆಸರು ಹೇಗೆ ಬಂತು? ಇದೀಗ ಬದಲಾವಣೆ ಚರ್ಚೆ ಯಾಕೆ?
ಹೆಸರು ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ ಗ್ರಾಮ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯವಾಗಿ ಹಲವು ವಿಭಾಗಗಳಲ್ಲಿ ಸಮನ್ವಯತೆ ಸಾಧಿಸಬೇಕು. ಇದಕ್ಕಾಗಿ ಭಾರತ ಎಂದು ಹೆಸರು ಬದಲಾವಣೆ ಮಾಡಲು ಸುಮಾರು 14 ಸಾವಿರ ಕೋಟಿ ರು. ತಗುಲಲಿದೆ ಎಂದು ಅಂದಾಜಿಸಲಾಗಿದೆ.