Asianet Suvarna News Asianet Suvarna News

ದೆಹಲಿ ಆಶಾ ಕಿರಣ ನಿಲಯ ಅನಾಥಶ್ರಮದಲ್ಲಿ 20 ದಿನದಲ್ಲಿ 14 ಬುದ್ದಿಮಾಂದ್ಯ ಮಕ್ಕಳ ನಿಗೂಢ ಸಾವು!

ದಿಲ್ಲಿಯ ಆಶಾ ಕಿರಣ ನಿಲಯದಲ್ಲಿ ಕಳೆದ 20 ದಿನದಲ್ಲಿ 14 ಮಂದಿ ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

14 mentally retarded children Mysterious deaths in delhi asha kiran nilaya in 20 days rav
Author
First Published Aug 3, 2024, 8:17 AM IST | Last Updated Aug 5, 2024, 4:31 PM IST

ನವದೆಹಲಿ (ಆ.3): ದಿಲ್ಲಿಯ ಆಶಾ ಕಿರಣ ನಿಲಯದಲ್ಲಿ ಕಳೆದ 20 ದಿನದಲ್ಲಿ 14 ಮಂದಿ ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ 48 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸಚಿವೆ ಆತಿಷಿ ಆದೇಶಿಸಿದ್ದಾರೆ.

ದೆಹಲಿ ಸರ್ಕಾರವು ಬುದ್ದಿಮಾಂದ್ಯತೆ, ವಿಶೇಷ ಚೇತನರಿಗಾಗಿ , ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಆಶಾ ಕಿರಣ ನಿಲಯವನ್ನು ನಡೆಸುತ್ತಿದೆ. ಕಳೆದ ಮೂರು ವಾರಗಳಲ್ಲಿ ಇಲ್ಲಿ ಆಶ್ರಯವನ್ನು ಪಡೆದಿರುವವರ ಪೈಕಿ 14 ಮಂದಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಇದೇ ವರ್ಷದ ಜನವರಿಯಲ್ಲಿ 27 ಸಾವಿನ ವರದಿಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಶಾಲೆಯ ಬಾತ್‌ರೂಮ್‌ನಲ್ಲಿ ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ, ಸ್ಥಳದಲ್ಲೇ ಸಾವು ಕಂಡ ಶಿಶು!

ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಬಿಜೆಪಿ , ನಿರ್ಲಕ್ಷ್ಯ, ಅವ್ಯವಸ್ಥೆಯ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಆರೋಪಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ಕುರಿತು ತನಿಖೆಗೆ ಸಮಿತಿ ರಚಿಸಿದೆ. ಈ ಬೆನ್ನಲ್ಲೇ ಆಪ್ ಸಚಿವೆ ಆತಿಷಿ . ಸಾವಿನ ಕುರಿತು ಮ್ಯಾಜಿಸ್ಟ್ರೇಟ್‌ ತನಿಖೆಯನ್ನು ಆರಂಭಿಸುವಂತೆ ಕಂದಾಯ ಇಲಾಖೆಗೆ ಆದೇಶಿಸಿದ್ದಾರೆ. ಪ್ರಕರಣದ 48 ಗಂಟೆಯೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios