ಹರಿಯಾಣದ 3 ಜಿಲ್ಲೆಗಳ 14  ಹಳ್ಳಿಗಳು ಮುಸಲ್ಮಾನರನ್ನೇ ಬಹಿಷ್ಕರಿಸೋ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಮತ್ತು ಜಿಲ್ಲಾಡಳಿತಗಳಿಗೆ ಪತ್ರ ಬರೆದಿದ್ದು, ಈ ತೀರ್ಮಾನ ಕೈಗೊಂಡಿರೋದಾಗಿ ಹೇಳಿದ್ದಾರೆ. 

ಚಂಡೀಗಢ (ಆಗಸ್ಟ್‌ 7, 2023): ಹರಿಯಾಣದ ನುಹ್‌ನಲ್ಲಿ ಕೆಲ ದಿನಗಳ ಹಿಂದೆ ದೊಡ್ಡ ಮಟ್ಟದ ಕೋಮು ಗಲಭೆ ಪ್ರಕರಣಗಳು ನಡೆದಿವೆ. ವಿಎಚ್‌ಪಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ, ಗುಂಡು ಹಾರಿಸಿದ್ದ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಮುಸ್ಲಿಮರ ವಿರುದ್ದ ಹರ್ಯಾಣದಲ್ಲಿ ಆಕ್ರೋಶ ಹೆಚ್ಚಾಗ್ತಿದೆ. ಇದಕ್ಕೆ ಕಾರಣವೂ ಇಲ್ಲಿದೆ ನೋಡಿ..

ಹರಿಯಾಣದ 3 ಜಿಲ್ಲೆಗಳ 14 ಹಳ್ಳಿಗಳು ಮುಸಲ್ಮಾನರನ್ನೇ ಬಹಿಷ್ಕರಿಸೋ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಮತ್ತು ಜಿಲ್ಲಾಡಳಿತಗಳಿಗೆ ಪತ್ರ ಬರೆದು, "ಮುಸ್ಲಿಂ ಸಮುದಾಯದ ಸದಸ್ಯರನ್ನು ಬಹಿಷ್ಕರಿಸುವ" ನಿರ್ಧಾರವನ್ನು ತಿಳಿಸಿವೆ. ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ನಂತರ ಪಂಚಾಯತ್ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Haryana: ವಿಎಚ್‌ಪಿ ಶೋಭಾಯಾತ್ರೆ ಮೇಲೆ ದಾಳಿ ಪ್ರೀ ಪ್ಲ್ಯಾನ್‌; ಕಲ್ಲು, ಬಂದೂಕು, ಲಾಠಿ ಎಲ್ಲವೂ ರೆಡಿ ಇತ್ತು: ಗೃಹ ಸಚಿವ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಧಾರ್ಮಿಕ ಮೆರವಣಿಗೆಯ ಮೇಲೆ ಜುಲೈ 31 ರಂದು ಪ್ರಾರಂಭವಾದ ಕೋಮು ಘರ್ಷಣೆಯಿಂದ ಹಾನಿಗೊಳಗಾದ ಜಿಲ್ಲೆಗಳ ವ್ಯಾಪ್ತಿಯಲ್ಲೇ ಬರುತ್ತದೆ. ಈ 14 ಗ್ರಾಮಗಳು ಕೋಮು ಘರ್ಷಣೆಯಿಂದ ಹಾನಿಗೊಳಗಾದ ಮಹೇಂದ್ರಗಢ, ಜಜ್ಜರ್ ಮತ್ತು ರೇವಾರಿ ಜಿಲ್ಲೆಗಳಲ್ಲಿದೆ. ನುಹ್‌ನಲ್ಲಿ ಪ್ರಾರಂಭವಾದ ಹಿಂಸಾಚಾರವು ಇತರ ಜಿಲ್ಲೆಗಳಿಗೆ ಹರಡಿದ್ದು, ಈ ಕೋಮು ಗಲಭೆಯಲ್ಲಿ 6 ಜೀವಗಳು ಬಲಿಯಾಗಿದ್ದು, ಮತ್ತು ಆಸ್ತಿಪಾಸ್ತಿಗೂ ಗಮನಾರ್ಹ ಹಾನಿಯಾಗಿದೆ.

ಕೋಮು ಘರ್ಷಣೆಯ ನಂತರ ಪಂಚಾಯತ್‌ಗಳು "ಮುಸ್ಲಿಂ ಸಮುದಾಯದ ಜನರಿಗೆ ಮನೆ ಮತ್ತು ಅಂಗಡಿಗಳನ್ನು ಬಾಡಿಗೆಗೆ ನೀಡುವುದಿಲ್ಲ" ಎಂಬ ನಿರ್ಧಾರ ತೆಗೆದುಕೊಂಡು ಹರಿಯಾಣದ ಅಧಿಕಾರಿಗಳಿಗೆ ಪತ್ರದ ಮೂಲಕ ಈ ಮಾಹಿತಿಯನ್ನೂ ನೀಡಿದ್ದಾರೆ. ಧಾರ್ಮಿಕ ಮೆರವಣಿಗೆ ನಡೆಯುವಾಗ ಎರಡು ಸಮುದಾಯಗಳ ಸದಸ್ಯರ ನಡುವೆ ಗಲಾಟೆ ನಡೆದಾಗ ನುಹ್ ಕೋಮು ಉದ್ವಿಗ್ನತೆಯ ಕೇಂದ್ರಬಿಂದುವಾಗಿತ್ತು. ಅದರೂ, ಕೆಲವೇ ಗಂಟೆಗಳಲ್ಲಿ, ಗುಂಪು ಹಿಂಸಾಚಾರವು ಗುರುಗ್ರಾಮ್ ಮತ್ತು ಸೋನಿಪತ್ ಸೇರಿದಂತೆ ಪಕ್ಕದ ಪ್ರದೇಶಗಳಿಗೂ ಹರಡಿತು.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಈ ಮಧ್ಯೆ, ಘರ್ಷಣೆಯನ್ನು ಪ್ರಚೋದಿಸಿದ ಮತ್ತು ನಡೆಸಿದ ಆರೋಪದ ಮೇಲೆ 215 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ. ಮತ್ತೊಂದೆಡೆ, ದೊಡ್ಡ ಷಡ್ಯಂತ್ರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಜುಲೈ 31 ರ ಹಿಂಸಾಚಾರವು ಪ್ರೀ ಪ್ಲ್ಯಾನ್ಡ್‌ ಅನ್ನೋ ವರದಿಗಳೂ ಇವೆ. 

ಬಹಿಷ್ಕಾರದ ಅರ್ಥವೇನು?
ಈ ಗ್ರಾಮಗಳ ಹಿಂದೂ ಸಮುದಾಯದವರು ಬರೆದಿರುವ ಪತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಬಾಡಿಗೆಗೆ ಮನೆ, ಅಂಗಡಿ ಮತ್ತು ಸಂಸ್ಥೆಗಳನ್ನು ನಿರಾಕರಿಸುವಂತೆ ಮನವಿ ಮಾಡಲಾಗಿದೆ. ಇದಲ್ಲದೆ, ಗ್ರಾಮಗಳಿಗೆ ವ್ಯಾಪಾರಿಗಳಿಗೆ ಪ್ರವೇಶಿಸಲು ಅನುಮತಿಸುವ ಮುನ್ನ ಗ್ರಾಮಸ್ಥರು ಬೀದಿಬದಿ ವ್ಯಾಪಾರಿಗಳ ಗುರುತಿನ ಪುರಾವೆಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ನಿರ್ದಿಷ್ಟ ಸಮುದಾಯಗಳ ವಿರುದ್ಧ ಸಾಮೂಹಿಕ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಗಳ ಮನವಿಗಳನ್ನು ಘೋಷಿಸಿದ ಇಂತಹ ಘೋಷಣೆಗಳನ್ನು ಈ ಹಿಂದೆಯೂ ಮಾಡಲಾಗಿದೆ.

ಇದನ್ನೂ ಓದಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್‌: ಕಾಂಗ್ರೆಸ್‌ ಶಾಸಕ ಗೋಪಾಲ್‌ ಕಾಂಡಾ ಖುಲಾಸೆಗೊಳಿಸಿದ ಕೋರ್ಟ್‌

ಜನರು ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡುವ ಮೊದಲು ಆಧಾರ್ ಕಾರ್ಡ್‌ಗಳು ಮತ್ತು ಬಾಡಿಗೆದಾರರ ಇತರ ಗುರುತಿನ ಪುರಾವೆಗಳನ್ನು ಪರಿಶೀಲಿಸಬೇಕು ಎಂದು ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಷನ್ (MCG) ನ ನಿರ್ಗಮಿತ ಕೌನ್ಸಿಲರ್ ಬ್ರಹ್ಮ್ ಯಾದವ್ ಹೇಳಿದರು. ಅಲ್ಲದೆ, ಜಿಲ್ಲೆಯಲ್ಲಿ ವಾಲ್ಮೀಕಿ ಜನಾಂಗದವರು ಮಾಂಸದ ಅಂಗಡಿಗಳನ್ನು ನಡೆಸಬೇಕು ಮತ್ತು ಮುಸ್ಲಿಮರು ನಡೆಸುತ್ತಿರುವ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದೂ ಬ್ರಹ್ಮ್ ಯಾದವ್ ಹೇಳಿದರು.

ಜುಲೈ 31 ರಂದು ನುಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಮುಸ್ಲಿಂ ಸಮುದಾಯವೇ ಕಾರಣ. ಅವರಿಗೆ ಆ ಪ್ರದೇಶದಲ್ಲಿ ಯಾವುದೇ ಮನೆ ಅಥವಾ ಕೊಠಡಿಯನ್ನು ಬಾಡಿಗೆಗೆ ನೀಡಬಾರದು. ವಾಸ್ತವವಾಗಿ ಜಿಲ್ಲೆಯಲ್ಲಿ ಮಾಂಸದ ಅಂಗಡಿಗಳನ್ನು ನಡೆಸಲು ನಮ್ಮ ವಾಲ್ಮೀಕಿ ಜನಾಂಗದವರಿಗೆ ಅವಕಾಶ ನೀಡಬೇಕು ಮತ್ತು ಮುಸ್ಲಿಮರು ನಡೆಸುವ ಅಂಗಡಿಗಳನ್ನು ನಾವೆಲ್ಲರೂ ಬಹಿಷ್ಕರಿಸಬೇಕಾಗಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ರೈತರನ್ನು ನಾವು ಅರ್ಥ ಮಾಡಿಕೊಂಡ್ರೆ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್‌ ಗಾಂಧಿ