Asianet Suvarna News Asianet Suvarna News

ಮತ್ತೆ ಕೊರೋನಾ ಸ್ಫೋಟ: ಒಂದೇ ದಿನ 12,213 ಕೇಸ್‌, 111 ದಿನಗಳಲ್ಲೇ ಗರಿಷ್ಠ, ಹೆಚ್ಚಾದ ಆತಂಕ..!

*   ಮಹಾರಾಷ್ಟ್ರ, ಕೇರಳ, ದೆಹಲಿಯಲ್ಲೂ ಹೆಚ್ಚಳ
*  ಮೊನ್ನೆಗಿಂತ 38.4% ಹೆಚ್ಚಳ
*  ರಾಜ್ಯದಲ್ಲಿ 833 ಕೇಸ್‌ 4 ತಿಂಗಳ ಗರಿಷ್ಠ
 

12213 New Coronavirus Cases on June 16th in India grg
Author
Bengaluru, First Published Jun 17, 2022, 12:30 AM IST

ನವದೆಹಲಿ(ಜೂ.17):  ದೇಶದಲ್ಲಿ ಕೊರೋನಾ ಸೋಂಕು ದಿನೇದಿನೇ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ಶೇ.38.4ರಷ್ಟು ಹೆಚ್ಚಳವಾಗಿದೆ. ಗುರುವಾರ ದೇಶದಲ್ಲಿ ಒಟ್ಟು 12,213 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದು ಕಳೆದ 111 ದಿನಗಳಲ್ಲೇ ಗರಿಷ್ಠ ಏಕದಿನದ ಸೋಂಕಾಗಿದೆ. 11 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ.2.35ರಷ್ಟಿದೆ.

ಇನ್ನು ಕಳೆದ 3 ಅಲೆಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿದ್ದ ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಯಲ್ಲೂ ದಿನೇ ದಿನೇ ಹೊಸ ಪ್ರಕರಣಗಳು ಮತ್ತು ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡುಬರುತ್ತಿರುವುದು, ಇದು 4ನೇ ಅಲೆಯ ಆರಂಭವಾಗಿರಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.

COVID ORIGIN:ಚೀನಾ ಪ್ರಯೋಗಾಲಯದಿಂದ ಕೊರೋನಾ ವೈರಸ್ ಸೋರಿಕೆ ವಾದ ತಳ್ಳಿ ಹಾಕಲ್ಲ: ಡಬ್ಲ್ಯು ಎಚ್ ಒ

ಶೇ.38ರಷ್ಟು ಹೆಚ್ಚಳ:

ಬುಧವಾರ ದೇಶದಲ್ಲಿ 8822 ಕೇಸು ಪತ್ತೆಯಾಗಿತ್ತು. ಗುರುವಾರ ಅದು 4,578 ಏರಿಕೆಯಾಗಿ ದಿಢೀರ್‌ 12,213ಕ್ಕೆ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ಅದರೊಂದಿಗೆ ದೇಶದಲ್ಲೀಗ ಸಕ್ರಿಯ ಸೋಂಕಿತರ ಸಂಖ್ಯೆ 58,213ಕ್ಕೆ ಏರಿಕೆಯಾಗಿದೆ.

ಮಹಾ ಏರಿಕೆ:

ಮತ್ತೊಂದೆಡೆ ದೇಶದಲ್ಲೇ ಅತಿ ಹೆಚ್ಚು ಕೋವಿಡ್‌ ಕೇಸು, ಸಾವು ದಾಖಲಾದ ಮಹಾರಾಷ್ಟ್ರದಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ 4,255 ಹೊಸ ಪ್ರಕರಣ ದಾಖಲಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಸೋಂಕಿನ ಪ್ರಮಾಣ ಫೆ.12ರ ಬಳಿಕದ ದೈನಂದಿನ ಗರಿಷ್ಠವಾಗಿದೆ. ಪರಿಣಾಮ ಸಕ್ರಿಯ ಸೋಂಕಿತರ ಸಂಖ್ಯೆಯು 20,634ಕ್ಕೆ ಏರಿಕೆಯಾಗಿದೆ.

ಕೊರೋನಾದಿಂದ ತಗ್ಗಿದ್ದ ರಕ್ತದಾನ ಚೇತರಿಕೆಯತ್ತ!

ಇನ್ನು ಕೇರಳದಲ್ಲೂ ಕೋವಿಡ್‌ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ 3,419 ಕೋವಿಡ್‌ ಪ್ರಕರಣ ದಾಖಲಾಗಿವೆ, 8 ಜನರು ಸಾವನ್ನಪ್ಪಿದ್ದಾರೆ. ಸೋಂಕಿನ ಪ್ರಮಾಣ 111 ದಿನಗಳ ಗರಿಷ್ಠ ಮಟ್ಟತಲುಪಿದೆ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 65 ಲಕ್ಷಕ್ಕೆ ಹಾಗೂ ಒಟ್ಟು ಸಾವು 69 ಸಾವಿರಕ್ಕೆ ತಲುಪಿದೆ. ಸಕ್ರಿಯ ಪ್ರಕರಣ ಸಂಖ್ಯೆ 18,345ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಗುರುವಾರದಿಂದ ವಿಶೇಷ ಲಸಿಕಾಕರಣ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಿದೆ.

10+ ಮಕ್ಕಳು ಸೋಂಕಿತರಾದರೆ ಶಾಲೆಗೆ 3 ದಿನ ರಜೆ

ಬೆಂಗಳೂರು: ರಾಜ್ಯದ ಯಾವುದೇ ಶಾಲೆಗಳಲ್ಲಿ ತರಗತಿವಾರು 10ಕ್ಕಿಂತ ಹೆಚ್ಚು ಮಕ್ಕಳಲ್ಲಿ ಕೋವಿಡ್‌ ಸೋಂಕು ಕಂಡುಬಂದರೆ ತಕ್ಷಣ ಆ ಶಾಲೆಗೆ ಮುಂದಿನ ಎರಡು- ಮೂರು ದಿನ ರಜೆ ಘೋಷಿಸಬೇಕು’ ಎಂಬುದು ಸೇರಿ ಶಾಲೆಗಳಿಗೆ ರಾಜ್ಯ ಸರ್ಕಾರ 7 ಕೋವಿಡ್‌ ಮಾರ್ಗಸೂಚಿ ಹೊರಡಿಸಿದೆ.
 

Follow Us:
Download App:
  • android
  • ios