Asianet Suvarna News Asianet Suvarna News

Covid Origin:ಚೀನಾ ಪ್ರಯೋಗಾಲಯದಿಂದ ಕೊರೋನಾ ವೈರಸ್ ಸೋರಿಕೆ ವಾದ ತಳ್ಳಿ ಹಾಕಲ್ಲ: ಡಬ್ಲ್ಯು ಎಚ್ ಒ

*ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಈ ವಾದವನ್ನು ತಳ್ಳಿ ಹಾಕಲು ನಿರಾಕರಿಸಿದ ಡಬ್ಲ್ಯು ಎಚ್ ಒ
* ಸಾಕ್ಷ್ಯಾಧಾರಗಳು ಸಿಗುವ ತನಕ ಯಾವ ವಾದವನ್ನು ನಿರಾಕರಿಸೋದಿಲ್ಲ
*ಕೊರೋನಾ ಹುಟ್ಟಿಗೆ ಸಂಬಂಧಿಸಿ ಅಧ್ಯಯನ ಮುಂದುವರಿಸಿರುವ ಡಬ್ಲ್ಯು ಎಚ್ ಒ

Covid origin WHO refuses to rule out China lab leak theory without evidence
Author
Bangalore, First Published Jun 16, 2022, 11:53 AM IST

ನವದೆಹಲಿ (ಜೂ.16): ಚೀನಾ (China) ಪ್ರಯೋಗಾಲಯದಿಂದ (laboratory) ಕೊರೋನಾ ವೈರಸ್ (Corona Virus) ಸೋರಿಕೆಯಾಗಿದೆ (Leak) ಎಂಬ ಸಿದ್ಧಾಂತವನ್ನು (Theory) ಯಾವುದೇ ಸಾಕ್ಷ್ಯಾಧಾರವಿಲ್ಲದೆ (evidence) ತಳ್ಳಿ ಹಾಕಲು ವಿಶ್ವ ಆರೋಗ್ಯ ಸಂಸ್ಥೆ (WHO) ನಿರಾಕರಿಸಿದೆ. 

ಕೋರೋನಾ ವೈರಸ್ ಹುಟ್ಟಿಗೆ ಸಂಬಂಧಿಸಿದ ಎಲ್ಲ ಊಹಾಪೋಹಗಳು (hypothesis) ಹೆಚ್ಚಿನ ಸಾಕ್ಷ್ಯಾಧಾರಗಳು ಸಿಗುವ ತನಕ ಟೇಬಲ್ ಮೇಲೆಯೇ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ತಿಳಿಸಿದೆ. ಚೀನಾ 'ಲ್ಯಾಬ್ ಲೀಕ್' ಸಿದ್ಧಾಂತವನ್ನು ಉಲ್ಲೇಖಿಸಿ ವಿಶ್ವಸಂಸ್ಥೆ ಆರೋಗ್ಯ ಏಜೆನ್ಸಿ ಈ ಹೇಳಿಕೆ ನೀಡಿದೆ.  

ಮತ್ತೆ ಕೊರೋನಾ ಸ್ಫೋಟ: ಸೋಂಕು ಭಾರೀ ಏರಿಕೆ..!

'ಕೆಲವೊಂದು ಸಿದ್ಧಾಂತಗಳನ್ನು ಪರಿಗಣಿಸಬೇಕಾ ಬೇಡವಾ ಎಂದು ನಿರ್ಧರಿಸಲು ನಮಗೆ ಸಾಕ್ಷ್ಯಾಧಾರಗಳು ಸಿಗುವ ತನಕ ಎಲ್ಲ ಸಿದ್ಧಾಂತಗಳು ಹಾಗೆಯೇ ಇರಬೇಕು. ಈ ಪ್ರಕ್ರಿಯೆಯಲ್ಲಿ ಸಹಕರಿಸಲು ನಾವು ಆಗಾಗ ಚೀನಾಕ್ಕೆ ಕರೆ ಮಾಡುವುದನ್ನು ಮುಂದುವರಿಸುತ್ತೇವೆ ಹಾಗೂ ಸ್ಯಾಗೋ (SAGO) ಶಿಫಾರಸ್ಸು ಮಾಡಿದ ಅಧ್ಯಯನಗಳನ್ನು ಮುಂದುವರಿಸೋದಾಗಿ' ಡಬ್ಲ್ಯುಎಚ್ ಒ ತಿಳಿಸಿದೆ.

ಕೋವಿಡ್ ಸೋಂಕು ಚೀನಾದ ವುಹಾನ್ (Wuhan) ನಗರದ ಪ್ರಯೋಗಾಲಯದಿಂದ ಮನುಷ್ಯರಿಗೆ ಹರಡಿರುವ ಸಾಧ್ಯತೆಯಿದೆ ಎಂದು ಸಿದ್ಧಾಂತ ಹೇಳಿದೆ. ಅನೇಕ ವಿಜ್ಞಾನಿಗಳು ಬಾವಲಿಯಿಂದ ಕೊರೋನಾ ವೈರಸ್ ಮನುಷ್ಯರಿಗೆ ಹರಡಿರುವ ಸಾಧ್ಯತೆಯಿದೆ ಎಂಬ ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ ಕಳೆದ ವರ್ಷ ಡಬ್ಲ್ಯು ಎಚ್ ಒ ( WHO) ಈ ಸಿದ್ಧಾಂತವನ್ನು ತಳ್ಳಿ ಹಾಕಿತ್ತು. 

ಕೋವಿಡ್ -19ಗೆ ಕಾರಣವಾಗುವ ಸಾರ್ಸ್ -ಕೋವಿ-2 ( SARS-CoV-2) ಮೂಲದ ಬಗ್ಗೆ ಅಧ್ಯಯನ ನಡೆಸುವ ವಿಶ್ವ ಆರೋಗ್ಯ ಸಂಸ್ಥೆಯ ಸಲಹಾ ತಂಡ ಲ್ಯಾಬ್ ಲೀಕ್ ಸಿದ್ಧಾಂತವನ್ನು ತಳ್ಳಿ ಹಾಕುವಂತಿಲ್ಲ ಎಂಬ ವಾದವನ್ನು ಮತ್ತೆ ಪುನರುಚ್ಚರಿಸಿದೆ. ಇದನ್ನೇ ಡಬ್ಲ್ಯುಎಚ್ ಒ ಮಹಾ ನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರೆಯೇಸಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಪೆಂಡಾಮಿಕ್ ನ ಮೂಲ ಪತ್ತೆ ಹಚ್ಚಲು ಹಾಗೂ ಭವಿಷ್ಯದ ರೋಗಕಾರಕಗಳ ಬಗ್ಗೆ ಅರಿಯಲು ಯಾವೆಲ್ಲ ವಲಯಗಳಲ್ಲಿ ಅಧ್ಯಯನ ನಡೆಸಬೇಕು ಎಂಬುದನ್ನು ಶಿಫಾರಸ್ಸು ಮಾಡಲು ಕಳೆದ ವರ್ಷ ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ (SAGO) ತನ್ನ ಕೊನೆಯ ವರದಿಯಲ್ಲಿ ಲ್ಯಾಬ್ ಲೀಕ್ ಸಿದ್ಧಾಂತ ಅತ್ಯಂತ ಅಸಂಭವ' ಅನ್ನೋದನ್ನು ತಳ್ಳಿ ಹಾಕಿತ್ತು. 

ಯಾವುದೇ ಹೊಸ ತನಿಖೆಗೆ ನೆರವು ನೀಡಲು ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಸ್ಯಾಗೋ ಚೀನಾಕ್ಕೆ ತಿಳಿಸಿತ್ತು.ಆದರೆ, ಚೀನಾ ರೋಗಿಯ ಖಾಸಗಿ ನಿಯಮಗಳನ್ನು ಉಲ್ಲೇಖಿಸಿ ಮಾಹಿತಿ ಒದಗಿಸಲು ನಿರಾಕರಿಸಿತ್ತು. ವುಹಾನ್ ನಲ್ಲಿನ ವಿಶೇಷ ಪ್ರಯೋಗಾಲಯದಿಂದ ಕೊರೋನಾ ವೈರಸ್ ಸೋರಿಕೆಯಾಗಿದೆ ಎಂಬ ವಾದವನ್ನು ಚೀನಾ ಸತತವಾಗಿ ನಿರಾಕರಿಸುತ್ತಲೇ ಬಂದಿದೆ. ವುಹಾನ್ ನಲ್ಲೇ ಮೊದಲ ಕೊರೋನಾ ಪ್ರಕರಣ  2019ರ ಕೊನೆಯಲ್ಲಿ ಪತ್ತೆಯಾಗಿತ್ತು.

Covid Crisis: 6594 ಕೇಸು, 6 ಜನ ಸಾವು: 50000 ಗಡಿ ದಾಟಿದ ಸಕ್ರಿಯ ಸೋಂಕು

ಕಳೆದ ವರ್ಷ ಪ್ರಕಟವಾದ ಚೀನಾ ಹಾಗೂ ಡಬ್ಲ್ಯುಎಚ್ ಒ ಜಂಟಿ ಅಧ್ಯಯನ ಕೋವಿಡ್ -19 ಪ್ರಯೋಗಾಲಯದಲ್ಲಿ ಸೃಷ್ಟಿಯಾಯ್ತು ಎಂಬ ವಾದವನ್ನು ತಳ್ಳಿ ಹಾಕಿತ್ತು. ವನ್ಯಜೀವಿಗಳ ಮೂಲಕ ಈ ಸೋಂಕು ಮನುಷ್ಯನಿಗೆ ತಗುಲಿರುವ ಸಾಧ್ಯತೆಯಿದೆ ಎಂದು ಹೇಳಿತ್ತು. 
ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

4ನೇ ಅಲೆಯ ಭೀತಿಯ ನಡುವೆಯೇ ದೇಶದಲ್ಲಿ ಕೋವಿಡ್‌ ಆರ್ಭಟ ಇನ್ನಷ್ಟು ಹೆಚ್ಚಾಗಿದ್ದು, ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 8822 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಂಕ್ರಿಯ ಸೋಂಕಿತರ ಸಂಖ್ಯೆಯು 53,637ಕ್ಕೆ ಏರಿಕೆಯಾಗಿದೆ. 
ರಾಜ್ಯದಲ್ಲಿ ಬುಧವಾರ 648 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. 112 ದಿನದ ಗರಿಷ್ಠ. ಬೆಂಗಳೂರಿನ 72 ವರ್ಷದ ಪುರುಷರೊಬ್ಬರು ಮರಣವನ್ನಪ್ಪಿದ್ದಾರೆ. ಇದು 10 ದಿನಗಳ ನಂತರ ಮೊದಲ ಕೋವಿಡ್‌ ಸಾವಾಗಿದೆ.

Follow Us:
Download App:
  • android
  • ios