ಚೆನ್ನೈ(ಜು.17): ವಯೋವೃದ್ಧರು ಕೋವಿಡ್‌ಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ತಮಿಳುನಾಡಿನಲ್ಲಿ 110 ವರ್ಷದ ಹಮೀದಾಬಿ ಎಂಬ ವೃದ್ಧೆಯೊಬ್ಬರು ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

"

ಜೊತೆಗೆ ಕೊರೋನಾ ಸೋಲಿಸಲಾಗದ ಸೋಂಕಲ್ಲ ಎಂಬ ಸಂದೇಶವನ್ನೂ ಎಲ್ಲರಿಗೆ ರವಾನಿಸಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದಂತೆ ಆಕೆಯ ವಯಸ್ಸು 110 ವರ್ಷವೇ ಆಗಿದ್ದಲ್ಲಿ ಕೊರೋನಾದಿಂದ ಚೇತರಿಸಿಕೊಂಡ ವಿಶ್ವದ ಅತಿ ಹಿರಿಯ ರೋಗಿ ಎಂಬ ಹಿರಿಮೆಯೂ ಆಕೆಯದ್ದಾಗಲಿದೆ.

ವಿಜಯಪುರ: ಡೆಡ್ಲಿ ಕೊರೋನಾದಿಂದ ಹೋರಾಡಿ ಗೆದ್ದ 90 ವರ್ಷ ಮೀರಿದ ವೃದ್ಧೆಯರು..!

ತಿರುಪತ್ತೂರು ಜಿಲ್ಲೆಯ ಅಂಬೂರು ಸಮೀಪದ ಗ್ರಾಮದ ಹಮೀದಾಬೀ ಸಣ್ಣ ಜ್ವರದ ಕಾರಣ ಜು.29ಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಅವರಿಗೆ ಕೊರೋನ ಪರೀಕ್ಷೆಯನ್ನೂ ಮಾಡಲಾಗಿತ್ತು. ಅವರಿಗೆ ಸೋಂಕು ತಗುಲಿದ್ದು ಖಚಿತವಾದ ಹಿನ್ನೆಲೆಯಲ್ಲಿ ಜು.1ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಕೊರೋನಾ ಗೆದ್ದ 107ರ ವೃದ್ಧೆ..! ಕೋವಿಡ್‌-19ನಿಂದ ಚೇತರಿಸಿದ ದೇಶದ ಅತಿ ಹಿರಿಯ ವ್ಯಕ್ತಿ

ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದ ಹಮೀದಾಬೀ, ನಂತರ ನಡೆಸಿದ ಎರಡೂ ಪರೀಕ್ಷೆಯಲ್ಲಿ ಸೋಂಕು ಮುಕ್ತರಾಗಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಜು.12ರಂದು ಮನೆಗೆ ಕಳುಹಿಸಿಕೊಡಲಾಗಿದೆ.

ಬಹಿಷ್ಕಾರ:

ಆದರೆ ಸೋಂಕು ಮುಕ್ತರಾಗಿ ಮನೆಗೆ ಮರಳಿದರೂ, ನೆರೆಹೊರೆಯವರು ಮಾತ್ರ ವೃದ್ಧೆಯನ್ನು ಬಹಿಷ್ಕರಿಸಿದ್ದಾರೆ. ವೃದ್ಧ ಪುತ್ರಿ ಮತ್ತು ಮೊಮ್ಮಗಳೊಂದಿಗೆ ಸಣ್ಣ ಜಾಗವೊಂದರಲ್ಲಿ ವಾಸವಿರುವ ಹಮೀದಾಬೀಗೆ ಜಾಗ ಖಾಲಿ ಮಾಡುವಂತೆ ಅಕ್ಕಪಕ್ಕದ ಮನೆಯವರು ಬೆದರಿಕೆ ಹಾಕಿದ್ದಾರೆ. ಜೊತೆಗೆ ಸಮೀಪದ ಅಂಗಡಿಯವರೂ ಕುಟುಂಬಕ್ಕೆ ಯಾವುದೇ ವಸ್ತುಗಳನ್ನು ಮಾರಾಟ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಕುಟುಂಬ ಇದೀಗ ಸಂಕಷ್ಟಎದುರಿಸುವಂತಾಗಿದೆ.

99 ವರ್ಷದ ಮಹಿಳಾ ಕೊರೋನಾ ರೋಗಿ ಚೇತರಿಕೆ!

ಈ ನಡುವೆ ವಿಷಯ ಹೊರಬೀಳುತ್ತಲೇ, ಸ್ಥಳೀಯ ಜನಪ್ರತಿನಿಧಿಗಳು ಆಕೆಯ ಕುಟುಂಬಕ್ಕೆ ಕೆಲ ಅಹಾರ ಸಾಮಗ್ರಿ ಮತ್ತು ಹಣಕಾಸಿನ ನೆರವು ಒದಗಿಸಿದ್ದಾರೆ. ಜಿಲ್ಲಾಡಳಿತ ಕೂಡಾ ಘಟನೆ ಕುರಿತು ತನಿಖೆಗೆ ಆದೇಶಿಸಿದೆ.