Asianet Suvarna News Asianet Suvarna News

11 ಬಾರಿ ಶಾಸಕರಾಗಿದ್ದ ಮಹಾರಾಷ್ಟ್ರ ಮಾಜಿ ಸಚಿವ ಇನ್ನಿಲ್ಲ

  • 11 ಬಾರಿ ಶಾಸಕರಾಗಿದ್ದ ಮಹಾರಾಷ್ಟ್ರ ಮಾಜಿ ಸಚಿವ
  • 94ನೇ ವಯಸ್ಸಿನಲ್ಲಿ ನಿಧನ
11 term Maharashtra MLA and ex minister Ganpatrao Deshmukh dies aged 94 dpl
Author
Bangalore, First Published Jul 31, 2021, 1:52 PM IST
  • Facebook
  • Twitter
  • Whatsapp

ಮುಂಬೈ(ಜು.31): ರಾಜಕೀಯದಲ್ಲಿ ಒಂದು ಬಾರಿ ಶಾಸಕರಾಗುವುದೇ ವಿಶೇಷ. ಆದರೆ ಇವರನ್ನು ಜನ 11 ಬಾರಿ ಆಯ್ಕೆ ಮಾಡಿದ್ದಾರೆ. ಬರೋಬ್ಬರಿ 11 ಸಲ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದ 94 ವರ್ಷದ ಹಿರಿಯ ರಾಜಕರಾಣಿ ನಿಧನರಾಗಿದ್ದಾರೆ. ಮಾಜಿ ಸಚಿವ ಮತ್ತು ಮಹಾರಾಷ್ಟ್ರದ ಸುದೀರ್ಘ ಅವಧಿಯ ಚುನಾಯಿತ ಪ್ರತಿನಿಧಿ ಗಣಪತರಾವ್ ದೇಶಮುಖ್ ಅವರು ತಮ್ಮ 94 ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ದೇಶಮುಖ್, ರೈತರು ಮತ್ತು ಕಾರ್ಮಿಕರ ಪಕ್ಷದ (ಪಿಡಬ್ಲ್ಯೂಪಿ) ಸದಸ್ಯರಾಗಿದ್ದು, ಸೊಲ್ಲಾಪುರದ ಸಂಗೋಲಾ ಕ್ಷೇತ್ರದಿಂದ 11 ಬಾರಿ ಆಯ್ಕೆಯಾದ ದಾಖಲೆ ಹೊಂದಿದ್ದಾರೆ. 2019 ರವರೆಗೆ 55 ವರ್ಷಗಳ ಕಾಲ ಶಾಸಕರಾಗಿದ್ದ ಖ್ಯಾತಿ ಇವರದ್ದು. ಚುನಾವಣಾ ರಾಜಕೀಯದಲ್ಲಿ ಅವರ ಸಂಪೂರ್ಣ ವೃತ್ತಿಜೀವನದಲ್ಲಿ ದೇಶಮುಖ್ 13 ವಿಧಾನಸಭೆಗೆ ಸ್ಪರ್ಧಿಸಿದ್ದರು. ಕೇವಲ ಎರಡು ಬಾರಿ ಸೋತರು - 1972 ಮತ್ತು 1995 ರಲ್ಲಿ. 1995 ರಲ್ಲಿ ಅವರು 192 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋತರು.

ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ

2019 ರಲ್ಲಿ, ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿ ನಂತರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. 2014 ರ ವಿಧಾನಸಭಾ ಚುನಾವಣೆಯಲ್ಲಿ ದೇಶಮುಖ್ ಅವರು ಶಹಾಜಿ ಬಾಪು ಪಾಟೀಲ್ ಅವರನ್ನು 25,000 ಮತಗಳಿಂದ ಸೋಲಿಸಿದ್ದರು. ಕುತೂಹಲಕಾರಿ ವಿಚಾರ ಎಂದರೆ ದೇಶಮುಖ್ ಅವರು ಹೆಚ್ಚಾಗಿ ವಿರೋಧ ಪಕ್ಷದಲ್ಲಿದ್ದರು. 1978 ಮತ್ತು 1999 ಹೊರತುಪಡಿಸಿ, ಅವರು ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮೊದಲು ಶರದ್ ಪವಾರ್ ನೇತೃತ್ವದ ಸರ್ಕಾರದಲ್ಲಿ ಮತ್ತು ಎರಡನೇ ಬಾರಿಗೆ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP) PWP ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿದಾಗ ಸಚಿವರಾಗಿದ್ದರು.

ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಹಿರಿಯ ರಾಜಕಾರಣಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಿಡಬ್ಲ್ಯೂಪಿಯ ಹಿರಿಯ ನಾಯಕ ಮತ್ತು ರಾಜ್ಯ ಶಾಸಕಾಂಗದ ದೀರ್ಘಾವಧಿಯ ಸದಸ್ಯ ಗಣಪತರಾವ್ ದೇಶಮುಖ್ ಅವರ ನಿಧನದ ಬಗ್ಗೆ ತಿಳಿದಾಗ ನನಗೆ ದುಃಖವಾಯಿತು. ಒಬ್ಬ ಮಾದರಿ ಜನಪ್ರತಿನಿಧಿಯಾದ ಶ್ರೀ ದೇಶಮುಖ್ ಅವರು ತಮ್ಮ ಜೀವನದುದ್ದಕ್ಕೂ ರೈತರು, ಕಾರ್ಮಿಕರು ಮತ್ತು ಸಾಮಾನ್ಯ ನಾಗರಿಕರೊಂದಿಗೆ ಸುಂದರ ಸಂಬಂಧ ಉಳಿಸಿಕೊಂಡರು. ಅವರು ಸರಳ ಜೀವನ ಮತ್ತು ಉನ್ನತ ಚಿಂತನೆಯ ಪ್ರತಿರೂಪವಾಗಿದ್ದರು. ಶಾಂತಿ ಮತ್ತು ಸಂಯಮದ ವ್ಯಕ್ತಿಯಾಗಿದ್ದ ಶ್ರೀ ದೇಶಮುಖ್ ನಿರ್ಭೀತ ನಾಯಕ. ರಾಜಕೀಯ ವ್ಯಾಪ್ತಿಯಲ್ಲಿ ಸ್ನೇಹಿತರನ್ನು ಹೊಂದಿದ್ದರು ಎಂದಿದ್ದಾರೆ.

ನಾವು ರಾಜಕೀಯದಿಂದ ಒಬ್ಬ ಸರಳ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಮಹಾರಾಷ್ಟ್ರದಲ್ಲಿ ಗರಿಷ್ಠ ಬಾರಿ ಚುನಾಯಿತರಾಗಿ ದಾಖಲೆ ನಿರ್ಮಿಸಿದ್ದಾರೆ. ಆದರೆ ನನಗೆ ಅವರು ತಮ್ಮ ಜೀವನವನ್ನು ಸರಳ ಮತ್ತು ಉನ್ನತ ಚಿಂತನೆಯೊಂದಿಗೆ ಬದುಕುವ ರೀತಿಯೇ ಮುಖ್ಯವಾಗಿದೆ. ಮುಂಬರುವ ವರ್ಷಗಳಲ್ಲಿ ರಾಜಕೀಯ ಜಗತ್ತಿನಲ್ಲಿ ಒಬ್ಬ ಉತ್ತಮ ಮಾದರಿಯಾಗಿ ಉಳಿಯುವ ಉದಾಹರಣೆಯನ್ನೂ ಅವರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios