Asianet Suvarna News Asianet Suvarna News

ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ

  • ಕೋವಿಡ್‌ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ನಿರ್ಬಂಧ
  •  ವಿಮಾನ ರದ ಮೇಲೆ ನಿರ್ಬಂಧ ಆಗಸ್ಟ್‌ 31ರವರೆಗೆ ವಿಸ್ತರಣೆ
  • ಕೊರೋನಾ ಪ್ರಕರಣಗಳ ಏರಿಳಿತ ಗಮನದಲ್ಲಿರಿಸಿಕೊಂಡು ಕೆಲವೊಂದು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಅವಕಾಶ 
covid 19 India extends ban on international flights till July 31 snr
Author
Bengaluru, First Published Jul 31, 2021, 10:28 AM IST

ನವದೆಹಲಿ (ಜು.31): ಕೋವಿಡ್‌ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿದೆ.

ವಿಮಾನಯಾನ ಸೇವೆ ನಿಷೇಧಿಸಿದ್ದಾಗಿ ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಆದರೆ ಕೊರೋನಾ ಪ್ರಕರಣಗಳ ಏರಿಳಿತ ಗಮನದಲ್ಲಿರಿಸಿಕೊಂಡು ಕೆಲವೊಂದು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ. 

ದುರ್ಗಮ ಪ್ರದೇಶಗಳಲ್ಲೂ ಏರ್‌ಪೋರ್ಟ್‌: ಮಸೂದೆ ಪಾಸ್‌!

ಕೋವಿಡ್‌ ಹಿನ್ನಲೆಯಲ್ಲಿ 2020ರ ಮಾರ್ಚ್ 23ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲಾಗಿತ್ತು. ದ್ವಿಪಕ್ಷೀಯ ಒಪ್ಪಂದದೊಂದಿಗೆ ಕೆಲವು ದೇಶಗಳಿಗೆ ಭಾರತದ ವಿಮಾನಗಳು ‘ಏರ್‌ ಬಬಲ್‌’ ವ್ಯವಸ್ಥೆಯೊಡನೆ ಜುಲೈ 2020ರಿಂದ ವಿಮಾನಯಾನ ಸೌಲಭ್ಯ ಒದಗಿಸುತ್ತಿವೆ.

ದೇಶದಲ್ಲಿಯೂ ಈಗ ದಿನದಿನವೂ ಕೊರೋನಾ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಸದ್ಯ ದೇಶದಲ್ಲಿ 4 ಲಕ್ಷ ಸಕ್ರೀಯ ಕೇಸುಗಳಿದ್ದು 40 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಕೇರಳದಲ್ಲಿ ಅತ್ಯಂತ ಹೆಚ್ಚಿನ ಸೋಂಕು ಪತ್ತೆಯಾಗಿದೆ. ಈಗ ದೇಶದ ಲಸಿಕೆ ಹಂಚಿಕೆ ಪ್ರಕ್ರಿಯೆ ತೀವ್ರಗೊಳಿಸುತ್ತಿದ್ದು, 3ನೇ ಅಲೆಯ ಆತಂಕದಲ್ಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Follow Us:
Download App:
  • android
  • ios