ದುಬೈ[ಫೆ.07]: ಕೇರಳದ ಮೂಲದ ಮೊಹಮ್ಮದ್‌ ಸಲಾ ಎಂಬ 11 ತಿಂಗಳ ಮಗು ದುಬೈನಲ್ಲಿ ಭರ್ಜರಿ 7 ಕೋಟಿ ರು. ಲಾಟರಿ ಗೆದ್ದುಕೊಂಡು ಇತಿಹಾಸಿ ನಿರ್ಮಿಸಿದೆ.

ದುಬೈನಲ್ಲೇ ನೆಲೆಸಿರುವ ಕೇರಳದ ಕಣ್ಣೂರು ಮೂಲದ ಮೊಹಮ್ಮದ್‌ ಸಲಾ ಅವರ ತಂದೆ ರಮೀಸ್‌ ರಹಮಾನ್‌ ಈ ಹಿಂದೆ ತಮ್ಮ ಹೆಸರಲ್ಲೇ 3 ಬಾರಿ ಲಾಟರಿ ಟಿಕೆಟ್‌ ಖರೀದಿಸಿದ್ದರು. ಆದರೆ, ಬಹುಮಾನ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ತಮ್ಮ ಮಗುವಿನ ಹೆಸರಲ್ಲಿ ಲಾಟರಿ ಖರೀದಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಏನಿದು ಅದೃಷ್ಟ: ಮೊದಲು 6 ಕೋಟಿ ರೂ. ಲಾಟರಿ, ಬಳಿಕ ಹೊಲದಲ್ಲಿ ಸಿಕ್ತು ನಿಧಿ!

ಅವರ ನಿರೀಕ್ಷೆಯಂತೆಯೇ ಮೊಹಮ್ಮದ್‌ ಸಲಾಗೆ ಭರ್ಜರಿ 7 ಕೋಟಿ ರು. ಬಹುಮಾನ ಬಂದಿದೆ.

ಕಳೆದ ವರ್ಷ ತೆಲಂಗಾಣದ ರೈತನೊಬ್ಬ ದುಬೈನ ಲಾಟರಿಯಲ್ಲಿ 28 ಕೋಟಿ ಮೊತ್ತ ಗೆದ್ದಿದ್ದ.

ದುಬೈನಲ್ಲಿ ಕೆಲಸ ಸಿಗದೆ ಮರಳಿದವನಿಗೆ ಹೊಡೀತು 27 ಕೋಟಿ ರು.ಲಾಟರಿ!