ಶಶಿ ತರೂರ್ ಕೇಳದೇ ಇರೋ ಪದ ಹೇಳಿದ ಕೇರಳದ ಹುಡುಗಿ | ನಿಬ್ಬೆರಗಾಗಿ ಕೇಳಿದ ಕಾಂಗ್ರೆಸ್ ಸಂಸದ | ಮುಂದೇನಾಯ್ತು ಓದಿ

ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತಿನಲ್ಲಿ ಬಳಸೋ ಪದಗಳ ಅರ್ಥ ಹುಡುಕೋಕೆ ಡಿಕ್ಷನರಿ ಹಿಡಿಯೋರು ಇದ್ದಾರೆ. ಅಷ್ಟೂ ಅಪರೂಪದ ಪದಬಳಕೆ ಮಾಡುತ್ತಾರೆ ಹಿಡಿಯ ಕಾಂಗ್ರೆಸ್ ನಾಯಕ. ಆದರೆ ಇಂತಹ ಮಾತಿನ ಮಲ್ಲನನ್ನೇ ನಿಬ್ಬೆರಗಾಗಿಸಿದ್ದಾಳೆ ಕೇರಳದ ಹುಡುಗಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಮಾತು, ಪದ ಬಳಕೆ, ಭಾಷಣಗಳಿಂದಲೇ ಬಹಳಷ್ಟು ಫ್ಯಾನ್ಸ್‌ಗಳನ್ನು ಪಡೆದಿರೋ ಕಾಂಗ್ರೆಸ್ ಸಂಸದನನ್ನು ಇಂಪ್ರೆಸ್ ಮಾಡಿದ್ದಾಳೆ 10ನೇ ತರಗತಿಯ ವಿದ್ಯಾರ್ಥಿನಿ. ಕೇರಳದ ಪ್ರಾದೇಶಿಕ ಕ್ಲಬ್‌ ಎಫ್‌ಎಂಗೆ ಸರ್ಪೈಸ್ ವಿಸಿಟ್ ಕೊಟ್ಟ ಸಂಸದನಿಗೆ ಇಡುಕ್ಕಿಯ 10ನೇ ತರಗತಿ ಬಾಲಕಿ ದಿಯಾ ಹೊಸ ಪದವೊಂದನ್ನು ಹೇಳಿದ್ದಾಳೆ.

17ರ ಚೆಲುವೆ ಜೊತೆ 78ರ ವೃದ್ಧನ ಮದುವೆ: 22 ದಿನವೇ ಸಂಸಾರ

ಆರ್‌ಜೆ ರಫಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸದ ಬಾಲಕಿಯ ಟ್ಯಾಲೆಂಟ್‌ಗೆ ಮಾರುಹೋಗಿದ್ದಾರೆ. ಕ್ಲಬ್ ಎಫ್‌ಎಂ ದಿಯಾಳ ಜೊತೆ ಝೂಮ್ ಸೆಗ್ಮೆಂಟ್ ಮಾಡಿತ್ತು. ಈ ಸಂದರ್ಭ ತರೂರ್ ಸಡನ್ನಾಗಿ ಕಾಣಿಸಿಕೊಂಡಿದ್ದಾರೆ.

Scroll to load tweet…

ಶಶಿ ತರೂರ್‌ಗೆ ಕಷ್ಟದ ಪದವೊಂದನ್ನು ಮೆಸೇಜ್ ಮಾಡಿ ಒಂದೇ ಬಾರಿಗೆ ಪ್ರೊನೌನ್ಸ್ ಮಾಡೋಕೆ ಹೆಳಿದ್ಲಂತೆ ದಿಯಾ. ಇದರಲ್ಲಿ ಸಂಸದ ಸೋತರೂ ಬಾಲಕಿ ಮಾತ್ರ ಆರಾಮವಾಗಿ ಒಂದೇ ಸಲಕ್ಕೆ ಕಷ್ಟದ ಪದವನ್ನು ಹೇಲಿ ತೋರಿಸಿದ್ದಾಳೆ.

ಅರ್ನಬ್ ಗೋಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ: ಹಲ್ಲೆ ಆರೋಪವೂ ವಜಾ!

ಬಾಲಕಿಯ ಮೆಮೊರಿ ಪವರ್ ಹೊಗಳಿದ ಸಂಸದ ಇಂತಹ ಪದಗಳನ್ನು ಕಲಿತು ಬಳಸುವಂತೆ ಸಲಹೆ ಕೊಟ್ಟಿದ್ದಾರೆ. ಇವರ ಸಂಭಾಷಣೆ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ.