Adi Shankara Statue: ಮಧ್ಯಪ್ರದೇಶದಲ್ಲಿ ಅತಿ ಎತ್ತರದ ಶಂಕರರ ಪ್ರತಿಮೆ ನಿರ್ಮಾಣ: ಶಿವರಾಜ್ ಸಿಂಗ್ ಚೌಹಾಣ್!
*108 ಅಡಿ ಎತ್ತರ: 2000 ಕೋಟಿ ರು. ವೆಚ್ಚ
*54 ಅಡಿ ಎತ್ತರದ ವೇದಿಕೆ ಮೇಲೆ ನಿರ್ಮಾಣ
*18.5 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ
ಭೋಪಾಲ್ (ಜ. 12): ವಿಶ್ವದಲ್ಲೇ ಅತಿ ಎತ್ತರದ ಶಂಕರಾಚಾರ್ಯರ (Shankaracharya) ಪ್ರತಿಮೆ ನಿರ್ಮಾಣ ಮಾಡಲು ಮಧ್ಯಪ್ರದೇಶ ಸರ್ಕಾರ (MP Government) ನಿರ್ಧರಿಸಿದೆ. ಪ್ರತಿಮೆ 108 ಅಡಿ ಎತ್ತರವಿರಲಿದ್ದು, ಇಡೀ ಯೋಜನೆಯನ್ನು 2000 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 108 ಅಡಿ ಎತ್ತರದ ಪ್ರತಿಮೆಯನ್ನು ಮಿಶ್ರ ಲೋಹ ಬಳಸಿ ನಿರ್ಮಿಸಲಾಗುವುದು. ವೇದಾಂತದ ಸಾರವನ್ನು ಜಗತ್ತಿಗೆ ಸಾರುವುದು ಯೋಜನೆಯ ಉದ್ದೇಶ ಎಂಬುದು ಸರ್ಕಾರದ ಹೇಳಿಕೆ.
ಇಡೀ ಯೋಜನೆಯಲ್ಲಿ ಏನೇನಿರಲಿದೆ?
ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು 18.5 ಎಕರೆ ಪ್ರದೇಶದಲ್ಲಿ ಶಂಕರಚಾರ್ಯರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ನಿರ್ಮಾಣ. ಈ ವಸ್ತು ಸಂಗ್ರಹಾಲಯದದಲ್ಲಿ ಸುಮಾರು 54 ಅಡಿ ಎತ್ತರದ ಪೀಠದ ಮೇಲೆ ಶಂಕರರ ಪ್ರತಿಮೆ ನಿರ್ಮಾಣ. ಜೊತೆಗೆ ನರ್ಮದಾ ನದಿಯ ಮತ್ತೊಂದು ತೀರದಲ್ಲಿ 12 ಎಕರೆ ಪ್ರದೇಶದಲ್ಲಿ ಅಂತರಾಷ್ಟ್ರೀಯ ಅದ್ವೈತ ವೇದಾಂತ ಸಂಸತ್ತು ನಿರ್ಮಾಣ.
ಈ ಸ್ಥಳದಲ್ಲೇ ಏಕೆ?:
ಶಂಕರರು ದೇಶ ಸಂಚಾರ ಮಾಡುತ್ತಿರುವಾಗ ವೇದಾಂತಿ ಗುರು ಗೋವಿಂದನಾಥ ಭಗವತ್ಪಾದರನ್ನು ಓಂಕಾರೇಶ್ವರಲ್ಲಿ ಭೇಟಿ ಮಾಡಿ ಇಲ್ಲಿಯೇ ದೀಕ್ಷೆ ಸ್ವೀಕರಿಸಿದರು ಎಂಬ ಮಾತಿದೆ. ಹೀಗಾಗಿ ನರ್ಮದಾ ನದಿ ತಟದಲ್ಲಿ ಓಂಕಾರೇಶ್ವರದಲ್ಲೇ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: Modi In Kedarnath| ಕೇದಾರನ ರುದ್ರಾಭಿಷೇಕ ಮಾಡಿ, ಆದಿಗುರು ಶಂಕರರ ಪುತ್ಥಳಿ ಅನಾವರಣಗೊಳಿಸಿದ ಪಿಎಂ!
ರಾಜ್ಯವನ್ನು ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ
ಓಂಕಾರೇಶ್ವರದಲ್ಲಿ ಆದಿ ಶಂಕರ ಮ್ಯೂಸಿಯಂ ಮತ್ತು ಅಂತರಾಷ್ಟ್ರೀಯ ವೇದಾಂತ ಸಂಸ್ಥಾನದ 108 ಅಡಿ ಬಹುಲೋಹದ ಪ್ರತಿಮೆ ಸ್ಥಾಪಿಸುವ ಯೋಜನೆಯು ರಾಜ್ಯವನ್ನು ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.ಓಂಕಾರೇಶ್ವರದಲ್ಲಿ ಶಂಕರಾಚಾರ್ಯರ ಪ್ರತಿಮೆಯನ್ನು ಸ್ಥಾಪಿಸುವುದು ಪ್ರಾಯೋಗಿಕ ವೇದಾಂತವನ್ನು ಜೀವಂತಗೊಳಿಸುವ ಯೋಜನೆಯಾಗಿದೆ ಎಂದು ಚೌಹಾಣ್ ಹೇಳಿದ್ದಾರೆ. "ಈ ಜಗತ್ತು ಒಂದೇ ಕುಟುಂಬವಾಗಲಿ, ಇದರ ಹಿಂದಿನ ಗುರಿ ಇದಾಗಿದ್ದು, ಟ್ರಸ್ಟ್‌ನ ಸದಸ್ಯರು ನೀಡುವ ಸಲಹೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲಿದ್ದು, ಸಂಪೂರ್ಣ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡುವ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!
ಪ್ರತಿಪಕ್ಷ ಕಾಂಗ್ರೆಸ್ ಯೋಜನೆಯ ಬಗ್ಗೆ ಅನುಮಾನಗಳನ್ನು ಎತ್ತಿದೆ ಮತ್ತು ರಾಜ್ಯ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿದ ನಂತರ ಮಾತ್ರ ಚರ್ಚಿಸುವುದಾಗಿ ಹೇಳಿದೆ. ಪಕ್ಷವು ರಾಜ್ಯಕ್ಕೆ ಮಾಡಿರುವ ಭಾರಿ ಸಾಲದ ಬಗ್ಗೆಯೂ ಗಮನಸೆಳೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಪ್ರತಿಪಕ್ಷ ನಾಯಕ ಕಮಲ್ ನಾಥ್ ಹೇಳಿದ್ದಾರೆ. ಬಜೆಟ್‌ನಲ್ಲಿ ಯೋಜನೆಗೆ ಹಣ ಮೀಸಲಿಟ್ಟಾಗ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದ ಸಾಲವು ಒಟ್ಟು ಬಜೆಟ್ ಹಂಚಿಕೆಗಿಂತ ಹೆಚ್ಚಿರುವ ಸಮಯದಲ್ಲಿ ಪ್ರತಿಮೆ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಬಜೆಟ್ ₹ 2.41 ಲಕ್ಷ ಕೋಟಿ ಆದರೆ ಒಟ್ಟು ಸಾಲ ₹ 2.56 ಲಕ್ಷ ಕೋಟಿ ಇದೆ.
ಆದಿ ಶಂಕರರ ಜನ್ಮಸ್ಥಳಕ್ಕೆ ರಾಷ್ಟ್ರೀಯ ಸ್ಮಾರಕ ಗೌರವ
ಆದಿ ಶಂಕರ (Adi Shankaracharya) ಜನ್ಮಸ್ಥಳ ಕೇರಳದ ಕಾಲಡಿ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ(National Monuments Authority ) ಅಧ್ಯಕ್ಷ ತರುಣ್ ವಿಜಯ್(Tarun Vijay)ತಿಳಿಸಿದ್ದಾರೆ. ಕೇರಳದ ಕಾಲಡಿಗೆ ಭೇಟಿ ನೀಡಿದ ವಿಜಯ್, ಇತಿಹಾಸದಲ್ಲಿ ಆದ ಹಲವಾರು ತಪ್ಪುಗಳನ್ನು ತೊಡೆದು ಹಾಕಲು ಪ್ರಧಾನಿ ನರೇಂದ್ರ ಮೋದಿ ಕಟಿಬದ್ಧರಾಗಿದ್ದಾರೆ ಎಂದರು. ಪ್ರಧಾನಿಯವರ ನಿರ್ದೇಶನದಂತೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದು ರುದ್ರಾಕ್ಷಿಯ ಸಸಿಗಳನ್ನು ಶಂಕರಾಚಾರ್ಯರ ದೇವಾಲಯದ ಆವರಣದಲ್ಲಿ ನೆಟ್ಟಿದ್ದಾರೆ.
ಕೇದಾರನಾಥದ ಶಂಕರಾಚಾರ್ಯರ ಪುತ್ಥಳಿ ಸ್ಥಳಕ್ಕೆ ಭೇಟಿ ನೀಡಿದಾಗ ನನಗೆ ಅವರ ಜನ್ಮ ಸ್ಥಳಕ್ಕೆ ಭೇಟಿ ನೀಡುವ ಪ್ರೇರಣೆಯಾಯಿತು. ಪ್ರಧಾನಿ ಮೋದಿ ಕೆಲ ದಿನಗಳ ಹಿಂದಷ್ಟೆ ಆದಿ ಶಂಕರರ ಪುತ್ಥಳಿ ಅನಾವರಣ ಮಾಡಿದ್ದರು ಎಂಬುದನ್ನು ಸ್ಮರಿಸಿದರು