Adi Sankara Birthplace : ಆದಿ ಶಂಕರರ ಜನ್ಮಸ್ಥಳಕ್ಕೆ ರಾಷ್ಟ್ರೀಯ ಸ್ಮಾರಕ ಗೌರವ

* ಆದಿ ಶಂಕರರ ಜನ್ಮಸ್ಥಳಕ್ಕೆ ರಾಷ್ಟ್ರೀಯ ಸ್ಮಾರಕ ಮಾನ್ಯತೆ
* ಕೇರಳದ ಕಾಲಡಿಗೆ ಭೇಟಿ ನೀಡಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷ ತರುಣ್ ವಿಜಯ್ 
* ಪೂರ್ವಾಗ್ರಹ ಪೀಡಿತ ಇತಿಹಾಸದಿಂದ ಹೊರಬರಬೇಕಿದೆ
* ದೇಶದ ಸ್ಮಾರಕಗಳಿಗೆ ಕಾನೂನಿನ ರಕ್ಷಣೆ

Adi Sankara Birthplace may become national Monument NMA Chairman Tarun Vijay visits Kalady Kerala mah

ನವದೆಹಲಿ/ ಕೇರಳ(ಡಿ. 30)  ಆದಿ  ಶಂಕರ (Adi Shankaracharya) ಜನ್ಮಸ್ಥಳ ಕೇರಳದ ಕಾಲಡಿ  ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ(National Monuments Authority ) ಅಧ್ಯಕ್ಷ ತರುಣ್ ವಿಜಯ್(Tarun Vijay)ತಿಳಿಸಿದ್ದಾರೆ.

ಕೇರಳದ ಕಾಲಡಿಗೆ ಭೇಟಿ ನೀಡಿದ ವಿಜಯ್, ಇತಿಹಾಸದಲ್ಲಿ ಆದ ಹಲವಾರು ತಪ್ಪುಗಳನ್ನು ತೊಡೆದು ಹಾಕಲು ಪ್ರಧಾನಿ ನರೇಂದ್ರ ಮೋದಿ ಕಟಿಬದ್ಧರಾಗಿದ್ದಾರೆ ಎಂದರು.  ಪ್ರಧಾನಿಯವರ ನಿರ್ದೇಶನದಂತೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದು ರುದ್ರಾಕ್ಷಿಯ ಸಸಿಗಳನ್ನು ಶಂಕರಾಚಾರ್ಯರ ದೇವಾಲಯದ ಆವರಣದಲ್ಲಿ ನೆಟ್ಟಿದ್ದಾರೆ. 

ಕೇದಾರನಾಥದ ಶಂಕರಾಚಾರ್ಯರ ಪುತ್ಥಳಿ ಸ್ಥಳಕ್ಕೆ ಭೇಟಿ ನೀಡಿದಾಗ ನನಗೆ ಅವರ ಜನ್ಮ  ಸ್ಥಳಕ್ಕೆ ಭೇಟಿ ನೀಡುವ ಪ್ರೇರಣೆಯಾಯಿತು.  ಪ್ರಧಾನಿ ಮೋದಿ ಕೆಲ ದಿನಗಳ ಹಿಂದಷ್ಟೆ ಆದಿ ಶಂಕರರ ಪುತ್ಥಳಿ ಅನಾವರಣ ಮಾಡಿದ್ದರು ಎಂಬುದನ್ನು ಸ್ಮರಿಸಿದರು.

ವಸಾಹತುಶಾಹಿ ಚಿಂತನೆ ನಮ್ಮಿಂದ ದೂರವಾಗಬೇಕಿದೆ.  ಪೂರ್ವಾಗ್ರಹ ಪೀಡಿತ ಇತಿಹಾಸಕಾರರು ಮತ್ತು ವಸಾಹತುಶಾಹಿ ಮನಸ್ಥಿತಿಯಿಂದಾಗಿ, ಅಫ್ಜಲ್ ಖಾನ್ ನ(ಮಹಾರಾಜಾ ಶಿವಾಜಿಯಿಂದ ಕೊನೆಯಾದ ವ್ಯಕ್ತಿ) ಅರವತ್ತೆರಡು ಹೆಂಡತಿಯರ ಸ್ಮಶಾನವನ್ನು ಬ್ರಿಟಿಷ್ ಆಳ್ವಿಕೆಯ ಅಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ ಎಂದು ಹೇಳಲಾಗುತ್ತದೆ. ಆದರೆ ನಾಗರಿಕತೆಯ ಪುನರುಜ್ಜೀವನದ ಶ್ರೇಷ್ಠ ಜಾಗ ಕಾಲಡಿಯ ಶಂಕರ ಜನ್ಮಸ್ಥಳವನ್ನು ನಿರ್ಲಕ್ಷಿಸಲಾಗುತ್ತದೆ. ಇಂಥ ವ್ಯವಸ್ಥೆ ದೂರವಾಗಲಿದೆ ಎಂದರು.

ಆದಿ ಶಂಕರರ ಜನ್ಮಸ್ಥಾನ ಎಂದರೆ  ಪೂರ್ಣಾ (ಪೆರಿಯಾರ್)  ನದಿ, ಮುತಲಕವಾಡು (ಮೊಸಳೆ ಘಾಟ್) ಮತ್ತು ಆದಿ ಶಂಕರನ ತಾಯಿ ಆರ್ಯಾಂಬೆ   ಸ್ಮಾರಕ  ಸ್ತಂಭಕ್ಕೆ  ರಾಷ್ಟ್ರೀಯ ಸ್ಮಾರಕ ಸ್ಥಾನ ಸಿಗಲಿದೆ ಎಂದು ತಿಳಿಸಿದರು. ಇದೊಂದು ದಾರ್ಶನಿಕ ಕ್ಷೇತ್ರವಾಗಲಿದೆ ಎಂದು ತಿಳಿಸಿದರು.#

ಆದಿಗುರು ಶಂಕರರ ಪುತ್ಥಳಿ ಅನಾವರಣ : ರೂ. 180 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ!

ಇಲ್ಲಿನ ಸಮಗ್ರ ಕಾರ್ಯನಿರ್ವಹಣೆಯನ್ನು ಗೆಜೆಟೆಡ್ ಅಧಿಕಾರಿಯೊಬ್ಬರ ಹೊಣೆಗಾರಿಕೆಗೆ  ನೀಡಲಾಗುತ್ತದೆ.  AMASR ಕಾಯಿದೆಯ ಪ್ರಕಾರ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.

ಏನಿದು  AMASR Act: ಪುರಾತನ ಸ್ಥಳ ಮತ್ತು  ಸ್ಮಾರಕಗಳಿಗೆ ರಕ್ಷಣೆ ಒದಗಿಸಿ ಮುಂದಿನ ಜನಮಾನಸಕ್ಕೆ ಅದನ್ನು ಕಾಪಾಡುವುದು ಈ ಕಾನೂನಿನ ಪ್ರಮುಖ ಅಂಶ. ಶಿಲ್ಪಗಳು, ಕೆತ್ತನೆಗಳಿಗೂ ರಕ್ಷಣೆ ಇಲ್ಲಿದೆ.

.ಭಾರತೀಯ ಪುರಾತತ್ವ ಇಲಾಖೆ ಈ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.  ಸಂರಕ್ಷಿತ ಸ್ಮಾರಕದ ಸುತ್ತಲಿನ 100 ಮೀಟರ್ ವಿಸ್ತೀರ್ಣದ ‘ನಿಷೇಧಿತ ಪ್ರದೇಶದಲ್ಲಿ’ ಯಾವುದೇ ಹೊಸ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಷರತ್ತುಗಳನ್ನು ಹೊರತುಪಡಿಸಿ, ಸಾರ್ವಜನಿಕ ಉದ್ದೇಶಗಳಿಗಾಗಿ ಸಹ ಅಂತಹ  ಪ್ರದೇಶದಲ್ಲಿ ಹೊಸ ನಿರ್ಮಾಣ ಸಾರ್ಧಯವಿಲ್ಲ. ಸರ್ಕಾರ ನಿಷೇಧಿತ ಪ್ರದೇಶದ ವ್ಯಾಪ್ತಿಯನ್ನು ಮತ್ತೂ ವಿಸ್ತಾರ ಮಾಡಬಲ್ಲದು.

ಭವ್ಯ ಕಾರ್ಯಕ್ರಮ: ಉತ್ತರಖಂಡಕ್ಕೆ(Uttarakhandದ ಕೇದಾರನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದ ಪ್ರಧಾನಿ ನರೇಂದ್ರ ಮೋದಿಆದಿ ಶಂಕರಾಚಾರ್ಯ( Adi Guru Shankaracharya) ಸಮಾಧಿ ಸ್ಥಳಕ್ಕೆ ತೆರಳಲಿ ಪುತ್ಥಳಿಯನ್ನು ಅನಾವರಣ ಮಾಡಿದ್ದರು.

2013ರಲ್ಲಿ ಉತ್ತರಖಂಡದಲ್ಲಿ ಸಂಭವಿಸಿದ ಮಹಾ ಪ್ರವಾಹಕ್ಕೆ ಆದಿ ಶಂಕಾರಾಚಾರ್ಯ ಸಮಾಧಿ ಸ್ಥಳದಲ್ಲಿದ್ದ ಪುತ್ಥಳಿ ನಾಶವಾಗಿತ್ತು. ಈ ಪುತ್ಥಳಿಯನ್ನು ಹೊಸದಾಗಿ ನಿರ್ಮಿಸಲಾಗಿತ್ತು. 

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು.  ಶಂಕರಾಚಾರ್ಯರು ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ  'ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿದವರು. ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು. 
 

Latest Videos
Follow Us:
Download App:
  • android
  • ios