ದೆಹಲಿ(ಜು.06): ರೋಗ ನಿರೋಧಕ ಶಕ್ತಿ ಇದ್ದ ದೆಹಕ್ಕೆ ಕೊರೋನಾ ವೈರಸ್ ಬಹುಬೇಗನೆ ವಕ್ಕರಿಸುವುದಿಲ್ಲ. ಹೀಗಾಗಿ ಮಕ್ಕಳು, ವೃದ್ಧರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ, ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಿದೆ. ಇದೀಗ ದೆಹಲಿಯ 106 ವರ್ಷದ ವೃದ್ಧ ಕೊರೋನಾ ವೈರಸ್ ತಗುಲಿ ಆಸ್ಪತ್ರೆ ಸೇರಿದ್ದರು. ಆದರೆ ಅಷ್ಟೇ ಬೇಗನೆ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಆದರೆ ವೃದ್ಧನ ಜೊತೆ ಆಸ್ಪತ್ರೆ ಸೇರಿದ್ದ ಮಕ್ಕಳು, ಕುಟುಂಬ ಸದಸ್ಯರು ಇನ್ನೂ ಚೇತರಿಸಿಕೊಂಡಿಲ್ಲ.

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ರೆಡಿಯಾಗ್ತಿದೆ ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್

ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಕೊರೋನಾ ಚಿಕಿತ್ಸೆ ಪೆಡದು ಬಹುಬೇಗನೆ ಗುಣಮುಖರಾದ 106 ವರ್ಷದ ವೃದ್ಧನ ಆರೋಗ್ಯ ಕಂಡು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದರೆ ಇದೇ ವೃದ್ಧ 4 ವರ್ಷ ವಯಸ್ಸಿದ್ದಾಗ, ವಿಶ್ವವನ್ನೇ ನಲುಗಿಸಿದ್ದ ಸ್ಪಾನೀಶ್ ಜ್ವರದಿಂದ ಬಳಲಿದ್ದ. 1918ರಲ್ಲಿ ಬಳಿಕ ಸ್ಪಾನಿಶ್ ಜ್ವರದಿಂದ ಚೇತರಿಸಿಕೊಂಡಿದ್ದ ವೃದ್ಧ ಇದೀಗ ತಮ್ಮ 106ನೇ ವಯಸ್ಸಿನಲ್ಲಿ ಕೊರೋನಾ ವೈರಸ್‌ನಿಂದಲೂ ಗೆದ್ದಿದ್ದಾರೆ.

 ರಾಜ್ಯದ ಮತ್ತೊಬ್ಬ ಶಾಸಕನಿಗೆ ಕೊರೋನಾ ದೃಢ..!

1918-19ರಲ್ಲಿ ಸ್ಪಾನೀಶ್ ಫ್ಲೂ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಈ ಜ್ವರದಿಂದ ವಿಶ್ವದಲ್ಲಿ ಸುಮಾರು 4 ಕೋಟಿ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಪಾನಿಶ್ ಜ್ವರ ಕಾಣಿಸಿಕೊಂಡಿತ್ತು.  ಭಾರತದ ಇತರ ಭಾಗಗಳಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಆದರೆ 1918ರ ಸಮಯದಲ್ಲಿ ಆಸ್ಪತ್ರೆ ಹಾಗೂ ರೋಗಿಗಳ ವಿವರ ದಾಖಲಿಸವು ವ್ಯವಸ್ಥೆ ಭಾರತದ ಎಲ್ಲಾ ಭಾಗಗಳಲ್ಲಿ ಇರಲಿಲ್ಲ. 

ಇದೀಗ ಕೊರೋನಾ ವೈರಸ್, 102 ವರ್ಷಗಳ ಹಿಂದೆ ಸ್ಪಾನೀಶ್ ಜ್ವರದಿಂದ ಚೇತರಿಸಿಕೊಂಡಿದ್ದ ವೃದ್ಧನ ಆರೋಗ್ಯ, ಮನಸ್ಸು ಉತ್ತಮವಾಗಿದೆ ಎಂದು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.