ಹಾಥ್ರಸ್(ಅ.08)‌: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಉತ್ತರ ಪ್ರದೇಶದ ಹಾಥ್ರಸ್‌ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತೆ ಹಾಗೂ ಪ್ರಕರಣದ ಆರೋಪಿ ಫೋನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಇವರಿಬ್ಬರ ಸಂಬಂಧಕ್ಕೆ ಸಂತ್ರಸ್ತೆಯ ಕುಟುಂಬದ ವಿರೋಧವಿತ್ತು ಎಂದು ಗ್ರಾಮದ ಮುಖ್ಯಸ್ಥ ತಿಳಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.

ಪ್ರಕರಣದ ಆರೋಪಿಯು ಸಂತ್ರಸ್ತೆಗೆ ಫೋನ್‌ ನೀಡಲು ಹೋಗಿದ್ದ. ಇದನ್ನು ನೋಡಿ ಸಂತ್ರಸ್ತೆಯ ಕುಟುಂಬ ಆಕ್ರೋಶಗೊಂಡು, ಆಕೆಯನ್ನು ಥಳಿಸಿತ್ತು. ಹೀಗಾಗಿ ಆಕೆಗೆ ಗಂಭೀರವಾಗಿ ಗಾಯವಾಗಿತ್ತು. ಬೇರೊಬ್ಬರ ತಪ್ಪಿಗೆ ಯಾವುದೇ ವ್ಯಕ್ತಿಯನ್ನು ಶಿಕ್ಷಿಸಬಾರದು. ಈ ಪ್ರಕರಣದಲ್ಲಿ ಅದೇ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ, ಆರೋಪಿ ಹಾಗೂ ಸಂತ್ರಸ್ತೆ ಕುಟುಂಬದ ನಡುವೆ ನೂರಾರು ಕರೆಗಳ ವಿನಿಮಯವಾಗಿದೆ. ಈ ಸಂಬಂಧ ಸಂತ್ರಸ್ತೆಯ ಸೋದರನನ್ನು ವಿಚಾರಣೆಗೊಳಪಡಿಸಬೇಕು ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಆಗ್ರಹಿಸಿದ್ದಾರೆ.