100 ವರ್ಷದ ಮಾವು ಕಳ್ಳತನದ ಕೇಸ್‌ನಲ್ಲಿ ಅಪರಾಧಿಗಳಿಗೆ ಅಂದು ಕೋರ್ಟ್ ನೀಡಿದ ಶಿಕ್ಷೆ ಏನು ಗೊತ್ತಾ?

100 ವರ್ಷದ ಹಿಂದೆ ನಾಲ್ವರು ಮಾವು ಕಳ್ಳತನ ಮಾಡಿದ್ದರು. ನಾಲ್ವರ ವಿರುದ್ಧವೂ ಆರೋಪ ಸಾಬೀತು ಆಗಿತ್ತು. ಅಂದು ಈ ನಾಲ್ವರಿಗೆ ನ್ಯಾಯಾಲಯ ಯಾವ ಶಿಕ್ಷೆ ನೀಡಿತ್ತು ಗೊತ್ತಾ?

100 year mango theft case judgement viral mrq

ಮುಂಬೈ: ಮಹಾರಾಷ್ಟ್ರದ ಥಾಣೆಯ ವಕೀಲರೊಬ್ಬರಿಗೆ 100 ವರ್ಷದ ಹಳೆಯ ಕೋರ್ಟ್ ಆದೇಶದ ಪ್ರತಿ ಸಿಕ್ಕಿದೆ. ಈ ಆದೇಶದಲ್ಲಿ ನ್ಯಾಯಾಲಯ ಮಾವು ಕಳ್ಳತನದ ಪ್ರಕರಣದ ತೀರ್ಪು ದಾಖಲಾಗಿತ್ತು.  ಸುಮಾರು 100 ವರ್ಷಗಳ ಹಿಂದೆ  ಮಾವು ಕಳ್ಳತನಕ್ಕೆ ನ್ಯಾಯಾಲಯ ನೀಡಿದ ತೀರ್ಪು ಏನು ಗೊತ್ತಾ? ಇಲ್ಲಿದೆ ಮಾಹಿತಿ.  

ನ್ಯಾಯಾಲಯದ ಈ ಆದೇಶ ಪ್ರತಿ 1924ರದ್ದಾಗಿದೆ. 5 ಜುಲೈ 19924ರಂದು ಈ ಆದೇಶ ಪ್ರಕಟವಾಗಿದೆ. ಮ್ಯಾಜಿಸ್ಟ್ರೇಟ್ ಟಿಎ ಫರ್ನಾಂಡಿಸ್, ಮಾವು ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ದೋಷಿ ಎಂದು ಆದೇಶ ನೀಡಿದ್ದಾರೆ. ನಾಲ್ವರನ್ನು ದೋಷಿ ಎಂದು ಆದೇಶ ನೀಡಿದ ಬಳಿಕ ಎಲ್ಲರಿಗೂ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿತ್ತು.  ನಾಲ್ವರು ಅಪರಾಧಿಗಳು ಯುವಕರಾಗಿದ್ದು, ಜೈಲು ಶಿಕ್ಷೆ ನೀಡಿ ಅವರ ಭವಿಷ್ಯವನ್ನು ಹಾಳು ಮಾಡಲು  ನ್ಯಾಯಾಧೀಶರಿಗೆ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ. 

ಮನೆಯಲ್ಲಿ ಸಿಕ್ತು ಹಳೆಯ ಬ್ಯಾಗ್

ಭಾನುವಾರ ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ವಕೀಲ ಪುನೀತ್ ಮಹಿಮಕರ್, ನಾನು ನನ್ನ ಹಳೆ ಮನೆಯಿಂದ ಶಿಫ್ಟ್ ಆಗುತ್ತಿದ್ದೆ. ಈ ವೇಳೆ ನನಗೆ  ಹಳೆಯದಾದ ಬ್ಯಾಗ್ ಸಿಕ್ತು. ಈ ಮೊದಲು ನಾನು ಆ ಬ್ಯಾಗ್ ನೋಡಿರಲಿಲ್ಲ. ನನಗಿಂತ ಮೊದಲು ಇದ್ದವರು ಈ ಬ್ಯಾಗ್ ಬಿಟ್ಟು ಹೋದಂತಿದೆ ಎಂದು ಹೇಳಿದರು. 

ನಾನು ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ಕೆಲವು ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳಿದ್ದವು. ಜೊತೆಯಲ್ಲಿ ನ್ಯಾಯಾಲಯ ಆದೇಶದ ಪ್ರತಿ ಸಹ ಇತ್ತು ಎಂದು ಪುನೀರ್ ಮಹಿಮಕರ್ ತಿಳಿಸಿದ್ದಾರೆ. ವಕೀಲ ಪುನೀತ್ ಮಹಿಮಕರ್ ಈ ಎಲ್ಲಾ ದಾಖಲೆಗಳನ್ನು ರಕ್ಷಿಸಿ ಇಡೋದಾಗಿ ಹೇಳಿದ್ದಾರೆ.

ಮೈಸೂರು: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕಾರ್ಪೆಂಟರ್; ಮಹಡಿ ಜಿಗಿದು ಮಂಡೆ ಒಡೆದುಕೊಂಡ!

ಇದು 185 ಮಾವು ಕಳ್ಳತನ ಪ್ರಕರಣ

ಈ ಆದೇಶದ ಪ್ರತಿ ಕ್ರೌನ್ ಬನಮ್ ಅಲ್ವೆರೆಸ್ ಮತ್ತು ಮೂವರು ಶೀರ್ಷಿಕೆಯಲ್ಲಿತ್ತು. 185  ಮಾವಿನಕಾಯಿ ಕಳ್ಳತನದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379/109 ಅಡಿ ಆರೋಪಿಗಳನ್ನು ದೋಷಿ ಎಂದು ಪರಿಗಣಿಸಲಾಗಿತ್ತು. ಆರೋಪಿಗಳು ಬೊಸ್ಟಿಯಾವ್ ಆಲಿಸ್ ಆಂಡ್ರಾಡೆನ್ ಅವರ ಜಮೀನಿನಲ್ಲಿ ಮಾವ ಕೀಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂದು ಆರೋಪಿಸಲಾಗಿತ್ತು.

ಕದ್ದ ಮಾವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು. ಮಾವು ಮಾರಾಟ ಮಾಡುತ್ತಿರೋದನ್ನು ನೋಡಿದ್ದ ಜನರು ಸಾಕ್ಷಿ ಹೇಳಿದ್ದರು. ಹೀಗಾಗಿ ಬೊಸ್ಟಿಯಾವ್ ಆಲಿಸ್ ಆಂಡ್ರಾಡೆನ್ ದೂರು ದಾಖಲಿಸಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ತಮ್ಮ ಮಾವು  ಅಥವಾ ಅದರ ಬೆಲೆಯನ್ನು ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

Air India express ವಿಮಾನದ ಎಂಜಿನ್‌ನಲ್ಲಿ ಬೆಂಕಿ, ತುರ್ತು ಭೂ ಸ್ಪರ್ಶ!

ಆರೋಪಿಗಳ ಪರ ವಕೀಲರು ಎಲ್ಲರೂ ನಿರಪರಾಧಿಗಳು ಎಂದು ವಾದ ಮಂಡಿಸಿದ್ದರು. ಸಾಕ್ಷಿಗಳ ಹೇಳಿಕೆ ಆಧಾರದ ಮೇಲೆ ಆರೋಪಿಗಳನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ಆದೇಶ ನೀಡುವಾಗ ಮ್ಯಾಜಿಸ್ಟ್ರೇಟ್ ಹೇಳಿದ್ದೇನು? 

ಮ್ಯಾಜಿಸ್ಟ್ರೇಟ್ ತಮ್ಮ ಆದೇಶದಲ್ಲಿ, ಸಂಪೂರ್ಣ ಸಾಕ್ಷ್ಯವನ್ನು ಪರಿಗಣಿಸಿ, ಆರೋಪಿಗಳು ಕಳ್ಳತನದ ಅಪರಾಧಿಗಳೆಂದು ತಿಳಿದು ಬಂದಿದೆ. ಎಲ್ಲಾ ದೋಷಿಗಳು ಚಿಕ್ಕ ವಯಸ್ಸಿನ ಯುವಕರು ಮತ್ತು ಅವರಿಗೆ ಶಿಕ್ಷೆ ವಿಧಿಸುವ ಮೂಲಕ ಅವರ ಜೀವನವನ್ನು ಹಾಳುಮಾಡಲು ನನಗೆ ಯಾವುದೇ ಆಸೆ ಇಲ್ಲ. ಸೆಕ್ಷನ್ 379/109 ರ ಅಡಿಯಲ್ಲಿ ನಾನು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತೇನೆ. ಎಚ್ಚರಿಕೆ ನೀಡಿ ಯುವಕರನ್ನು ಬಿಡುಗಡೆಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Latest Videos
Follow Us:
Download App:
  • android
  • ios