Asianet Suvarna News Asianet Suvarna News

ಚರ್ಚ್ ಕಾರ್ಯಕ್ರಮದಲ್ಲಿ ಭಾಗಿಯಾದ 100 ಪಾದ್ರಿಗಳಿಗೆ ಕೊರೋನಾ: ಇಬ್ಬರು ಸಾವು

ಚರ್ಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇ ಕಂಟಕವಾಯ್ತು | 100 ಜನ ಪಾದ್ರಿಗಳಿಗೆ ಕೊರೋನಾ ಪಾಸಿಟಿವ್ | ಇಬ್ಬರು ಸಾವು

100 priests Covid positive 2 die after Church event in Keralas Munnar dpl
Author
Bangalore, First Published May 6, 2021, 2:11 PM IST

ತಿರುವನಂತಪುರ(ಮೇ.06): ಕೊರೋನಾ ಪ್ರೊಟೋಕಾಲ್‌ಗಳನ್ನು ಮೀರಿದ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಲ್ಲಿ ಈಗ 100 ಜನ ಪಾದ್ರಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚರ್ಚ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊರೋನಾ ಗೈಡ್‌ಲೈನ್ಸ್‌ಗಳನ್ನು ಮೀರಿ ಜನರು ಭಾಗವಹಿಸಿದ್ದರು. ಇದೀಗ ಈ ಘಟನೆಯ ಕುರಿತು ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

BPL ಕಾರ್ಡಿನ ಕೊರೋನಾ ರೋಗಿಗಳಿಗೆ ದಿನಕ್ಕೆ 5 ಸಾವಿರ ನೆರವು

ಸೋಂಕಿತರಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್ಐ) ದಕ್ಷಿಣ ಕೇರಳ ಬಿಷಪ್ ಫಾದರ್ ಧರ್ಮರಾಜ್ ರಸಲಂ ಸೇರಿದ್ದಾರೆ. ಪಾಲ್ಗೊಂಡ ಇಬ್ಬರು ಪುರೋಹಿತರು, ಫಾದರ್ ಬಿಜುಮೊನ್ (52) ಮತ್ತು ರೆವ್ ಶೈನ್ ಬಿ ರಾಜ್ (43) ಕಳೆದ ವಾರ ಕೋವಿಡ್ -19 ದೃಢಪಟ್ಟ ನಂತರ ನಿಧನರಾದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘಟನೆ ಬಗ್ಗೆ ವಿಶಾದ ವ್ಯಕ್ತಪಡಿಸಿ ದುರದೃಷ್ಟಕರ ಎಂದು ಹೇಳಿದ್ದಾರೆ. ತನಿಖೆ ನಡೆಸಲು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಏಪ್ರಿಲ್ 13-17ರ ನಡುವೆ ಕಾರ್ಯಕ್ರಮ ನಡೆಯಿತು. ಕೋವಿಡ್ -19 ನಿರ್ಬಂಧಗಳು ಜಾರಿಯಲ್ಲಿದ್ದ ಸಮಯದಲ್ಲಿ ಇದನ್ನು ನಡೆಸಲಾಯಿತು. ಕಳೆದ ವರ್ಷ ಮೊದಲ ಅಲೆಯಲ್ಲಿ ನವದೆಹಲಿಯ ತಬ್ಲಿಘಿ ಜಮಾಅತ್‌ನ ಒಂದು ಸಭೆಯಲ್ಲಿಯೂ ಪ್ರಕರಣಗಳು ಹೆಚ್ಚಳಕ್ಕೆ ಕಾರಣವಾಗಿತ್ತು. ಕುಂಭಮೇಳದಿಂದಲೂ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು.

99ರ ಅಜ್ಜಿಗೆ 30 ವರ್ಷದ ಗೆಳೆಯ: ಇದು ಕೊರೋನಾ ಕಾಲದ ಸ್ನೇಹ

ಕರಕೋಣಂನ ಸಿಎಸ್ಐ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 40 ಕ್ಕೂ ಹೆಚ್ಚು ಪಾದ್ರಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಬಗ್ಗೆ  ಪ್ರತಿಕ್ರಿಯೆಯನ್ನು ನಿರಾಕರಿಸಲಾಗಿದೆ. ಘಟನೆಯನ್ನು ಮುಚ್ಚಿಹಾಕಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪವೂ ಇದೆ.

ಈ ಕಾರ್ಯಕ್ರಮಕ್ಕಾಗಿ ಜಿಲ್ಲಾ ಅಧಿಕಾರಿಗಳಿಂದ ಅನುಮತಿ ಕೋರಿಲ್ಲ. ಘಟನೆ ಕುರಿತು ನಾವು ವಿಚಾರಿಸುತ್ತಿದ್ದೇವೆ. ನಾವು ರೆಸಾರ್ಟ್, ಈವೆಂಟ್ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಎಚ್ ದಿನೇಶ್ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios