ನಾನು ಬಿಜೆಪಿ ಶಾಸಕ; ಅಮಿತ್ ಶಾ ಭೇಟಿಯಾಗ್ಬೇಕು ಎಂದ ಟಿಎಂಸಿ ನಾಯಕ ಮುಕುಲ್ ರಾಯ್
ಕೋಲ್ಕತ್ತದಿಂದ ದಿಢೀರ್ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಸೋಮವಾರ ಸಂಚಲನ ಹುಟ್ಟಿಸಿದ್ರು ಮುಕುಲ್ ರಾಯ್. ಅಲ್ಲದೆ, ತಮ್ಮ ತಂದೆ ಕಾಣೆಯಾಗಿದ್ದಾರೆ ಎಂದು ಟಿಎಂಸಿ ನಾಯಕ ಮುಕುಲ್ ರಾಯ್ ಪುತ್ರ ಹೇಳಿಕೊಂಡಿದ್ದರು. ಈಗ ಅವರು ಪುನ: ಬಿಜೆಪಿಗೆ ಮರಳಲು ಉತ್ಸುಕರಾಗಿದ್ದೇನೆ ಎಂದಿದ್ದಾರೆ.
ದೆಹಲಿ / ಕೋಲ್ಕತ್ತ (ಏಪ್ರಿಲ್ 19, 2023): ಬಿಜೆಪಿ ತೊರೆದು ಮತ್ತೆ ಮಾತೃಪಕ್ಷ ಟಿಎಂಸಿಗೆ ಮರಳಿದ್ದ ಮುಕುಲ್ ರಾಯ್, ಈಗ ಪುನ: ಬಿಜೆಪಿಗೆ ಮರಳಲು ಉತ್ಸುಕರಾಗಿದ್ದೇನೆ ಎಂದಿದ್ದಾರೆ. ಅಲ್ಲದೆ, ತಾವು ಬಿಜೆಪಿಯಿಂದಲೇ ಶಾಸಕರಾಗಿದ್ದು, ಈಗ ಪಕ್ಷಕ್ಕೆ ಮರಳಲು ಉತ್ಸುಕರಾಗಿರುವ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.
ಕೋಲ್ಕತ್ತದಿಂದ ದಿಢೀರ್ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಸೋಮವಾರ ಸಂಚಲನ ಹುಟ್ಟಿಸಿದ್ರು ಮುಕುಲ್ ರಾಯ್. ಅಲ್ಲದೆ, ತಮ್ಮ ತಂದೆ ಕಾಣೆಯಾಗಿದ್ದಾರೆ ಎಂದು ಟಿಎಂಸಿ ನಾಯಕ ಮುಕುಲ್ ರಾಯ್ ಪುತ್ರ ಹೇಳಿಕೊಂಡಿದ್ದರು. ಆದರೆ, ಕೆಲವು ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಮುಕುಲ್ ರಾಯ್ ಹೇಳಿದ ಬಳಿಕ ಅಸ್ವಸ್ಥರಾಗಿರುವ ಟಿಎಂಸಿ ನಾಯಕನನ್ನು ಬಳಸಿಕೊಂಡು ಬಿಜೆಪಿ ಕೊಳಕು ರಾಜಕೀಯದಲ್ಲಿ ತೊಡಗಿದೆ. ತಮ್ಮ ತಂದೆಯ ಮನಸ್ಸು ಸರಿಯಾದ ಚೌಕಟ್ಟಿನಲ್ಲಿಲ್ಲ ಎಂದು ಮುಕುಲ್ ರಾಯ್ ಪುತ್ರ ಆರೋಪಿಸಿದ್ದರು.
ಇದನ್ನು ಓದಿ: 'ಅಪ್ಪನನ್ನು ಕಿಡ್ನಾಪ್ ಮಾಡಿದ್ದಾರೆ' ಎಂದು ಮಗ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪತ್ತೆಯಾದ ಮಾಜಿ ರೈಲ್ವೆ ಸಚಿವ!
ಆದರೆ, ಇತ್ತೀಚೆಗೆ ಬಂಗಾಳದ ಸುದ್ದಿವಾಹಿನಿಯೊಂದರ ಜತೆ ಮಾತನಾಡಿರುವ ಮುಕುಲ್ ರಾಯ್, "ನಾನು ಬಿಜೆಪಿ ಶಾಸಕ. ನಾನು ಬಿಜೆಪಿಯೊಂದಿಗೇ ಇರಲು ಬಯಸುತ್ತೇನೆ. ನಾನು ಇಲ್ಲಿ ಉಳಿದುಕೊಳ್ಳಲು ಪಕ್ಷವು ವ್ಯವಸ್ಥೆ ಮಾಡಿದೆ. ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಲು ಮತ್ತು (ಪಕ್ಷದ ಅಧ್ಯಕ್ಷ) ಜೆಪಿ ನಡ್ಡಾ ಅವರೊಂದಿಗೆ ಮಾತನಾಡಲು ಬಯಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ''ಕೆಲವು ದಿನಗಳಿಂದ ನನಗೆ ಆರೋಗ್ಯ ಸರಿಯಿಲ್ಲದ ಕಾರಣ ರಾಜಕೀಯದಿಂದ ದೂರವಿದ್ದೆ. ಆದರೆ ಇದೀಗ ನಾನು ಚೆನ್ನಾಗಿದ್ದೇನೆ. ಮತ್ತೆ ರಾಜಕೀಯದಲ್ಲಿ ಸಕ್ರಿಯನಾಗುತ್ತೇನೆ ಎಂದು ಮುಕುಲ್ ರಾಯ್ ಹೇಳಿದ್ದಾರೆ. ಅಲ್ಲದೆ, ಟಿಎಂಸಿಯೊಂದಿಗೆ ಮತ್ತೆಂದಿಗೂ ಸಂಬಂಧ ಹೊಂದುವುದಿಲ್ಲ ಎಂದು ಶೇ. 100 ರಷ್ಟು ವಿಶ್ವಾಸ ಹೊಂದಿರುವುದಾಗಿಯೂ ಮುಕುಲ್ ರಾಯ್ ಹೇಳಿದ್ದಾರೆ. ಹಾಗೂ, ತನ್ನ ಮಗ ಸುಭ್ರಾಂಶು ಕೂಡ ಬಿಜೆಪಿಗೆ ಸೇರಬೇಕು. ಏಕೆಂದರೆ, ಇದು ಅವನಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತದೆ ಎಂದೂ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ ಎಂದು ಟಿಎಂಸಿ ನಾಯಕನ ಪುತ್ರ ಹೇಳಿಕೊಂಡಿದ್ದರು. ಆದರೆ, ಸೋಮವಾರ ರಾತ್ರಿ ದೆಹಲಿ ತಲುಪಿದ ನಂತರ ಮುಕುಲ್ ರಾಯ್ ತಾನು ಯಾವುದೇ ನಿರ್ದಿಷ್ಟ ಕಾರ್ಯಸೂಚಿಯನ್ನು ಹೊಂದಿಲ್ಲ" ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಅಲ್ಲದೆ, "ನಾನು ದೆಹಲಿಗೆ ಬಂದಿದ್ದೇನೆ. ನಿರ್ದಿಷ್ಟ ಅಜೆಂಡಾ ಏನೂ ಇಲ್ಲ. ನಾನು ಹಲವಾರು ವರ್ಷಗಳಿಂದ ಸಂಸದನಾಗಿದ್ದೇನೆ. ನಾನು ದೆಹಲಿಗೆ ಬರಬಾರದೇ? ಮೊದಲು ನಾನು ಆಗಾಗ್ಗೆ ಬರುತ್ತಿದ್ದೆ. ನಾನು ಶಾಸಕ ಮತ್ತು ಸಂಸದ" ಎಂದೂ ಹೇಳಿದ್ದರು.
ಇನ್ನು, ಮುಕುಲ್ ರಾಯ್ ಬಿಜೆಪಿಗೆ ಮರುಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹ ಶುರುವಾದ ನಂತರ, ತಮ್ಮ ತಂದೆ "ಅತ್ಯಂತ ಅಸ್ವಸ್ಥರಾಗಿದ್ದಾರೆ" ಮತ್ತು "ಡಿಮೆನ್ಶಿಯಾ ಹಾಗೂ ಪಾರ್ಕಿನ್ಸನ್ ಕಾಯಿಲೆ" ಯಿಂದ ಬಳಲುತ್ತಿದ್ದಾರೆ ಎಂದು ಅವರ ಪುತ್ರ ಹೇಳಿದ್ದಾರೆ. ಹಾಗೂ, "ನನ್ನ ತಂದೆಯ ಮನಸ್ಥಿತಿ ಸರಿಯಿಲ್ಲ. ಅಸ್ವಸ್ಥ ವ್ಯಕ್ತಿಯೊಂದಿಗೆ ರಾಜಕೀಯ ಮಾಡಬೇಡಿ ಎಂದು ನಾನು ಎಲ್ಲರನ್ನೂ ವಿನಂತಿಸುತ್ತೇನೆ. ಅವರು ನಾಪತ್ತೆಯಾದ ನಂತರ ನಾನು ನಿನ್ನೆ ರಾತ್ರಿ ಪೊಲೀಸ್ ದೂರು ನೀಡಿದ್ದೇನೆ" ಎಂದೂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಬಂಗಾಳದಲ್ಲಿ ಬಿಜೆಪಿಗೆ 35 ಸ್ಥಾನ ಕೊಡಿ; ನಂತರ ಟಿಎಂಸಿ ಸರ್ಕಾರ ಉಳಿಯಲ್ಲ: ಅಮಿತ್ ಶಾ
ಟಿಎಂಸಿ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ನಂತರ 2017 ರಲ್ಲಿ ಮುಕುಲ್ ರಾಯ್ ಬಿಜೆಪಿ ಸೇರಿದರು. 2020ರಲ್ಲಿ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅಲ್ಲದೆ, ಅವರು 2021 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಕೃಷ್ಣನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು ಮತ್ತು ಫಲಿತಾಂಶ ಪ್ರಕಟವಾದ ಕೇವಲ ಒಂದು ತಿಂಗಳ ನಂತರ ಅವರು ಮತ್ತೆ ಟಿಎಂಸಿಗೆ ವಾಪಸಾದರು. ಹಾಗೆ, ಕೇಸರಿ ಪಕ್ಷ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದೂ ಆರೋಪಿಸಿದ್ದರು. ಆದರೆ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.
ಆದರೂ, ಟಿಎಂಸಿಗೆ ವಾಪಸಾದ ನಂತರ, ಮುಕುಲ್ ರಾಯ್ ಸಾರ್ವಜನಿಕವಾಗಿ ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಅಲ್ಲದೆ, ಅನಾರೋಗ್ಯದ ಕಾರಣಕ್ಕಾಗಿ ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿಯೂ ಅವರು ಹೇಳಿದ್ದಾರೆ.
ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!