ದೆಹಲಿ(ಮೇ.06): ಭಾರತದಲ್ಲಿ ಡೈನೋಸಾರ್ ಪಳೆಯುಳಿಕೆಗಳು ಹೆಚ್ಚಾಗಿ ಪತ್ತೆಯಾಗುತ್ತಿರುತ್ತದೆ. ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ, ಸೌರಪಾಡ್ ಡೈನೋಸಾರ್‌ಗಳ 100 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆ ಮೂಳೆ ತುಣುಕುಗಳು ಸಿಕ್ಕಿದೆ.

ಭಾರತದ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಸಂಶೋಧಕರು ಇದನ್ನು ಕಂಡುಹಿಡಿದಿದ್ದಾರೆ. ಮೂಳೆ ತುಣುಕುಗಳನ್ನು ವಿಂಗಡಿಸಿ ಸಂಗ್ರಹಿಸಲಾಗುತ್ತಿತ್ತು. 25 ಕ್ಕಿಂತಲೂ ಹೆಚ್ಚು ನಿರುಪಯುಕ್ತ, ಛಿದ್ರಗೊಂಡ ಮೂಳೆ ಮಾದರಿಗಳನ್ನು ಮರುಪಡೆಯಲಾಗಿದೆ. ಅವು ವಿಭಿನ್ನ ಗಾತ್ರಗಳಲ್ಲಿರುತ್ತವೆ ಮತ್ತು ಪ್ರತ್ಯೇಕ ಮಾದರಿಗಳಾಗಿ ವಿಂಗಡಿಸಲಾಗಿದೆ.

ಯುವ ವೈದ್ಯನ 27 ಗಂಟೆಗಳ ಕೊರೋನಾ ಶಿಫ್ಟ್..!

ಸೌರಪಾಡ್‌ಗಳಿಗೆ ಉದ್ದನೆಯ ಕುತ್ತಿಗೆ, ಉದ್ದನೆಯ ಬಾಲಗಳು, ಸಣ್ಣ ತಲೆಗಳು ಮತ್ತು ಸ್ತಂಭದಂತಹ ಕಾಲುಗಳಿರುತ್ತವೆ. ಕೆಲವು ಸೌರಪಾಡ್ ಪ್ರಭೇದಗಳು ಅವುಗಳ ಗಾತ್ರಗಳಿಂದಲೇ ಗಮನಾರ್ಹವಾಗಿವೆ. ಈ ಗುಂಪಿನಲ್ಲಿ ಇದುವರೆಗೆ ಭೂಮಿಯಲ್ಲಿ ವಾಸಿಸುವ ಅತಿದೊಡ್ಡ ಪ್ರಾಣಿಗಳೂ ಸೇರಿವೆ. ಬ್ರಾಚಿಯೋಸಾರಸ್, ಡಿಪ್ಲೊಡೋಕಸ್, ಅಪಾಟೊಸಾರಸ್ ಮತ್ತು ಬ್ರಾಂಟೋಸಾರಸ್ ಕೆಲವು ಉದಾಹರಣೆಗಳಾಗಿವೆ.

ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಹಿಂದೆ ಟೈಟಾನೊಸೌರಿಯನ್ ಸಂಬಂಧ ಹೊಂದಿರುವ ಸೌರಪಾಡ್ ಮೂಳೆಗಳು ಕಂಡುಬಂದಿವೆ. ಪಳೆಯುಳಿಕೆಗಳ ಇರುವಿಕೆ ವರದಿ ಮಾಡಿದ ಈಶಾನ್ಯದಿಂದ ಬಂದ ಮೊದಲ ರಾಜ್ಯ ಮೇಘಾಲಯ. ಅತಿದೊಡ್ಡ ಮೂಳೆ ಮತ್ತು ಭಾಗಶಃ ಸಂರಕ್ಷಿಸಲ್ಪಟ್ಟ ಅಂಗ ಮೂಳೆ, 55 ಸೆಂಟಿಮೀಟರ್ ಉದ್ದವಿದೆ.