ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ 10 ರಾಜ್ಯಗಳು ತಮ್ಮ ವ್ಯಾಪ್ತಿಯ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ ಎಂದು ಲೋಕಸಭೆಗೆ ಬುಧವಾರ ತಿಳಿಸಲಾಗಿದೆ.

ನವದೆಹಲಿ: ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ 10 ರಾಜ್ಯಗಳು ತಮ್ಮ ವ್ಯಾಪ್ತಿಯ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ ಎಂದು ಲೋಕಸಭೆಗೆ ಬುಧವಾರ ತಿಳಿಸಲಾಗಿದೆ.

1946ರ ದೆಹಲಿ ಪೊಲೀಸ್‌ ಸ್ಥಾಪನಾ ಕಾಯ್ದೆಯ (ಡಿಎಸ್‌ಇಪಿ) ಸೆಕ್ಷನ್‌ 6ರ ಪ್ರಕಾರ ಕೇಂದ್ರಿಯ ತನಿಖಾ ದಳವು ರಾಜ್ಯಗಳಲ್ಲಿ ಪ್ರಕರಣಗಳ ತನಿಖೆ ನಡೆಸಲು ಸಂಬಂಧಿಸಿದ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕು. ಆದರೆ, ಪಂಜಾಬ್‌, ಜಾರ್ಖಂಡ್‌, ಕೇರಳ, ರಾಜಸ್ಥಾನ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮಿಜೋರಂ, ತೆಲಂಗಾಣ, ಮೇಘಾಲಯ ಹಾಗೂ ತಮಿಳುನಾಡು ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಲಿಖಿತ ಉತ್ತರ ನೀಡಿದ್ದಾರೆ.

ಡಿಎಸ್‌ಇಪಿ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಇಲ್ಲ ಎಂದು ತಿಳಿಸಿದ್ದಾರೆ. ಕೆಲವು ರಾಜ್ಯಗಳು ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಳ್ಳುವುದರಿಂದ ಕಠಿಣ ಪ್ರಕರಣಗಳ ತನಿಖೆಗೆ ಸಿಬಿಐನ ಅಧಿಕಾರದಲ್ಲಿ ತೀವ್ರ ಮಿತಿಗಳಿಗೆ ಕಾರಣವಾಗಲಿದೆ. ‘ರಾಜ್ಯದ ಒಪ್ಪಿಗೆ ಮತ್ತು ಹಸ್ತಕ್ಷೇಪ’ ಇಲ್ಲದೆ ಪ್ರಕರಣಗಳನ್ನು ತನಿಖೆ ಮಾಡಲು ಹೊಸ ಕಾನೂನನ್ನು ಜಾರಿಗೊಳಿಸುವ ಮತ್ತು ಫೆಡರಲ್ ಏಜೆನ್ಸಿಗೆ (ಸಿಬಿಐ) ವ್ಯಾಪಕ ಅಧಿಕಾರವನ್ನು ನೀಡುವ ಅವಶ್ಯಕತೆಯಿದೆ ಎಂದು ಸಂಸದೀಯ ಸಮಿತಿಯು ಇತ್ತೀಚೆಗೆ ಹೇಳಿದೆ.

338ರೂ.ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ: ಸಮೀರ್ ಮಹೇಂದ್ರು ಹೇಳಿಕೆ ಸಾಕ್ಷ್ಯ ಆಧರಿಸಿ ಕೇಜ್ರಿವಾಲ್‌ಗೆ ಇಡಿ ಸಮನ್ಸ್..!

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಅನುಮತಿ ವಾಪಸ್; ಸರ್ಕಾರದ ಕ್ರಮ ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೊರೆ