Asianet Suvarna News Asianet Suvarna News

ವಿಶಾಲ್ ಎಂಬುವವರನ್ನೆಲ್ಲಾ ಸಂಕಷ್ಟಕ್ಕೆ ಸಿಲುಕಿಸಿದ 10 ರೂಪಾಯಿ ನೋಟು

  • ವಿಶಾಲ್‌ ನನ್ನ ಮದುವೆ ಏಪ್ರಿಲ್ 26ಕ್ಕೆ ಇದೆ
  • 10 ರೂಪಾಯಿ ನೋಟಿನಲ್ಲಿ ಯುವತಿಯ ಪ್ರೇಮ ಬರಹ
  • ವಿಶಾಲ್‌ ಎಂಬುವವರಿಗೆಲ್ಲಾ ಸಂಕಷ್ಟ ತಂದ ನೋಟು
10 rupee note that distressed all Vishal named people akb
Author
Bangalore, First Published Apr 20, 2022, 6:59 PM IST | Last Updated Apr 20, 2022, 6:59 PM IST

ಕರೆನ್ಸಿ ನೋಟುಗಳಲ್ಲಿ ಬರೆಯುವುದು ಕಾನೂನು ಬಾಹಿರವಾಗಿದೆ. ಹಾಗೆಂದ ಮಾತ್ರಕ್ಕೆ ಜನರು ನೋಟುಗಳಲ್ಲಿ ಬರೆಯುವುದನ್ನು ನಿಲ್ಲಿಸಿಲ್ಲ. ಇತ್ತೀಚೆಗಷ್ಟೇ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ತನ್ನನ್ನು ಕರೆದುಕೊಂಡು ಓಡಿಹೋಗುವಂತೆ 10 ರೂಪಾಯಿ ನೋಟಿನಲ್ಲಿ  ಬರೆದಿದ್ದಳು. ಈ ನೋಟಿನ ಚಿತ್ರ ಇದೀಗ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಹಲವು ಜೋಕ್‌ಗಳನ್ನು ಹುಟ್ಟು ಹಾಕಿದೆ.

ಭಾರತದಲ್ಲಿ ಪ್ರೇಮ ವಿವಾಹಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆಂದು ತೋರುತ್ತದೆಯಾದರೂ, ಪ್ರತಿಯೊಬ್ಬರೂ ಮುಕ್ತವಾಗಿ ಆಯ್ಕೆ ಮಾಡುವ ಆಯ್ಕೆ ಇದಾಗಿಲ್ಲ. ಹೀಗಾಗಿ, ಕುಸುಮ್ ಎಂಬ ಮಹಿಳೆ ತನ್ನನ್ನು ಇದೇ ರೀತಿಯ ಸಂಕಷ್ಟದಿಂದ ಪಾರು ಮಾಡುವಂತೆ ತನ್ನ ಪ್ರೇಮಿ ವಿಶಾಲ್‌ಗೆ ಈ ಹತ್ತು ರೂಪಾಯಿ ನೋಟಿನಲ್ಲಿ ವಿನಂತಿಯ ಓಲೆ ಕಳುಹಿಸಿದ್ದಾಳೆ. ವಿಶಾಲ್, ಮೇರಿ ಶಾದಿ 26 ಎಪ್ರಿಲ್‌ ಕೋ ಹೈ. ಮುಝೇ ಭಾಗ ಕೇ ಲೇ ಜಾನಾ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ತುಮ್ಹಾರಿ ಕುಸುಮ್ (ವಿಶಾಲ್, ನನ್ನ ಮದುವೆಯನ್ನು ಏಪ್ರಿಲ್ 26 ಕ್ಕೆ ನಿಗದಿಪಡಿಸಲಾಗಿದೆ. ನನ್ನನ್ನು ಕರೆದುಕೊಂಡು ಓಡಿಹೋಗು ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮ ಕುಸುಮ್) ಎಂದು ಸಂದೇಶವನ್ನು ನೋಟಿನಲ್ಲಿ ಬರೆಯಲಾಗಿದೆ.

ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ 

ತನ್ನ ಗೆಳೆಯನನ್ನು ತಲುಪಲು ವಧುವಿನ ಹತಾಶ ಪ್ರಯತ್ನದ ಭಾಗವಾದ ಈ ನೋಟು ಈಗ ಇಂಟರ್‌ನೆಟ್‌ನಲ್ಲಿ ಸುತ್ತು ಹೊಡೆಯುತ್ತಿದ್ದು, ಟ್ವಿಟ್ಟರ್ ಬಳಕೆದಾರರು ಯಾರೆಲ್ಲಾ ವಿಶಾಲ್‌ ಎಂಬುವವರು ಇದ್ದಾರೋ ಅವರೆಲ್ಲರಿಗೂ ಈ ನೋಟನ್ನು ಟ್ಯಾಗ್ ಮಾಡುತ್ತಿದ್ದಾರೆ. ಟ್ವಿಟ್ಟರ್ ನಿನ್ನ ಶಕ್ತಿಯನ್ನು ತೋರಿಸು 26 ಏಪ್ರಿಲ್ ಕೆ ಪೆಹ್ಲೆ ಕುಸುಮ್ ಕಾ ಯೇ ಸಂದೇಶ ವಿಶಾಲ್ ತಕ್ ಪಹುಚಾನಾ ಹೈ.. ದೋನೊ ಪ್ಯಾರ್ ಕರ್ನೆ ವಾಲೇ ಕೋ ಮಿಲನಾ ಹೈ (ಏಪ್ರಿಲ್ 26 ರ ಮೊದಲು ಕುಸುಮ್‌ನ ಈ ಸಂದೇಶವನ್ನು ವಿಶಾಲ್‌ಗೆ ತಲುಪಿಸಬೇಕು ... ಪ್ರೀತಿಯಲ್ಲಿರುವ ಇಬ್ಬರು ಒಂದಾಗಬೇಕು), ಎಂದು ಬಳಕೆದಾರರು ಬರೆದಿದ್ದಾರೆ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಅನ್ನು ಟ್ಯಾಗ್ ಮಾಡಿ.." ಎಂದು ನೆಟ್ಟಿಗರು ಬರೆದುಕೊಂಡು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಫೋಟೋ ವಿಶಾಲ್‌ನ ಸರ್‌ನೇಮ್‌ ಅನ್ನು ಅಳಿಸಲಾಗಿದ್ದು, ಆ ಸರ್‌ನೇಮ್ ಅನ್ನು ಬಹಿರಂಗಪಡಿಸುವಂತೆ ನೆಟ್ಟಿಗರು ವಿನಂತಿಸಿದರು. ಅಲ್ಲದೇ ಯಾರೆಲ್ಲಾ ವಿಶಾಲ್ ಎಂಬ ಹೆಸರಿನವರಿದ್ದಾರೋ ಅವರೆಲ್ಲರಿಗೂ ಈ ಟ್ವಿಟ್‌ ಅನ್ನು ಟ್ಯಾಗ್ ಮಾಡಿದರು.

ನೀರಿನ ಟ್ಯಾಂಕ್‌ ಒಳಗೆ ಹಣದ ರಾಶಿ... ನೋಟು ಒಣಗಿಸಲು Hair Dryer ಬಳಸಿದ ಐಟಿ ಅಧಿಕಾರಿಗಳು
 

Latest Videos
Follow Us:
Download App:
  • android
  • ios