Coronavirus: ಮಹಾರಾಷ್ಟ್ರದ 10 ಮಹಾ ಸಚಿವರು, 20 ಶಾಸಕರಿಗೆ ಸೋಂಕು
ರಾಜ್ಯದಲ್ಲಿ ಈವರೆಗೆ 10ಕ್ಕೂ ಹೆಚ್ಚು ಸಚಿವರು ಹಾಗೂ ಕನಿಷ್ಠ 20 ಶಾಸಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ಪುಣೆ (ಜ.2): ರಾಜ್ಯದಲ್ಲಿ ಈವರೆಗೆ 10ಕ್ಕೂ ಹೆಚ್ಚು ಸಚಿವರು ಹಾಗೂ ಕನಿಷ್ಠ 20 ಶಾಸಕರು ಕೊರೋನಾ ಸೋಂಕಿಗೆ (Covid Positive) ತುತ್ತಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ತಿಳಿಸಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರತಿಯೊಬ್ಬರೂ ಹೊಸ ವರ್ಷ, ಹುಟ್ಟುಹಬ್ಬ ಸೇರಿದಂತೆ ಇನ್ನಿತರ ಸಂಭ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳಲು ಬಯಸುತ್ತಾರೆ.
ಆದರೆ ಒಮಿಕ್ರೋನ್ (Omicron) ಪ್ರಭೇದ ಹೆಚ್ಚು ವೇಗವಾಗಿ ಹಬ್ಬುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಯಾರೂ ಮರೆಯಬಾರದು. ಕೊರೋನಾ (Corona) ಕಾರಣಕ್ಕೆ ಇತ್ತೀಚೆಗೆ ವಿಧಾನಸಭೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಈಗಾಗಲೇ ಸಚಿವರು ಸೇರಿದಂತೆ ಹಲವು ಜನಪ್ರತಿನಿಧಿಗಳು ಸೋಂಕಿಗೆ ತುತ್ತಾಗಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟುಹೆಚ್ಚಳವಾದರೆ, ರಾಜ್ಯಾದ್ಯಂತ ಕಠಿಣ ನಿರ್ಬಂಧಗಳನ್ನು ಹೇರುವ ಅನಿವಾರ್ಯತೆ ಎದುರಾಗಲಿದೆ’ ಎಂದು ಹೇಳಿದ್ದಾರೆ.
Massive jump in COVID 19 case: 16764 ಕೋವಿಡ್ ಕೇಸ್, 64 ದಿನಗಳ ಗರಿಷ್ಠ
ಕೊರೋನಾ ಹಳೇ ತಳಿಗಿಂತ ವಿಭಿನ್ನ ಒಮಿಕ್ರಾನ್‌ನ ಈ ಎರಡು ಲಕ್ಷಣಗಳು: ಕೊರೋನಾ ವೈರಸ್‌ನ ಅಪಾಯಕಾರಿ ರೂಪಾಂತರವಾದ ಓಮಿಕ್ರಾನ್ ವಿಶ್ವದಲ್ಲಿ ಮತ್ತು ಭಾರತದಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ. ದೇಶದಲ್ಲಿ ಇದುವರೆಗೆ 976 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಪ್ರಕಾರ, ಈ ಕಾರಣದಿಂದಾಗಿ, ದೇಶದಲ್ಲಿ ಕೊರೋನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ, ಇದರಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿವೆ.
ಆರೋಗ್ಯ ತಜ್ಞರು ಸಹ ಒಮಿಕ್ರಾನ್ ರೋಗಲಕ್ಷಣಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತಿದ್ದಾರೆ ಮತ್ತು ಯಾರಿಗಾದರೂ ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ತಜ್ಞರನ್ನು ಸಂಪರ್ಕಿಸಿ ಮತ್ತು ನಿಮ್ಮನ್ನು ಪ್ರತ್ಯೇಕಿಸಿ ಎಂದು ಎಚ್ಚರಿಸುತ್ತಿದ್ದಾರೆ. ಕೊರೋನಾ ಸೋಂಕಿನ ಕೊನೆಯ ಎರಡು ಅಲೆಗಳಲ್ಲಿ, ಜ್ವರ, ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಲಕ್ಷಣಗಳು ಕಂಡುಬಂದಿವೆ. ಆದರೆ ಲಂಡನ್‌ನ ಸಂಶೋಧಕರೊಬ್ಬರು ಓಮಿಕ್ರಾನ್‌ನಿಂದ ಕೆಟ್ಟದಾಗಿ ಪ್ರಭಾವಿತಗೊಳಿಸುವ, ಎರಡು ಹೊಸ ರೋಗಲಕ್ಷಣಗಳನ್ನು ಗುರುತಿಸಿದ್ದಾರೆ. ಈ ರೋಗಲಕ್ಷಣಗಳು ಈ ಹಿಂದೆ ದಾಳಿ ಇಟ್ಟಿದ್ದ ಕೊರೋನಾ ಹಳೇ ತಳಿಗಳಲ್ಲಿ ಕಂಡು ಬಂದಿಲ್ಲ ಎಂಬುವುದು ಮತ್ತೊಂದು ವಿಶೇಷ.
3rd Wave Soon: ಭಾರತಕ್ಕೆ ಶೀಘ್ರ 3ನೇ ಅಲೆ, ಕೇಂಬ್ರಿಜ್ ತಜ್ಞ ಭವಿಷ್ಯ!
ದಕ್ಷಿಣ ಆಫ್ರಿಕಾದಿಂದ ಆರಂಭ: ಓಮಿಕ್ರಾನ್ ರೂಪಾಂತರವನ್ನು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದ ಕೋವಿಡ್-19 ರ ಈ ರೂಪಾಂತರವು ಪ್ರಪಂಚದ 90 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಇದು ಅಮೆರಿಕ ಮತ್ತು ಯುಕೆಯಂತಹ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಸಾಕಷ್ಟು ವಿನಾಶವನ್ನು ಉಂಟುಮಾಡಿದೆ. ಭಾರತದ ಬಗ್ಗೆ ಮಾತನಾಡುವುದಾದರೆ, ಸುಮಾರು 976 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಬುಧವಾರ ದೇಶದಲ್ಲಿ ಒಟ್ಟು 13,000 ಪ್ರಕರಣಗಳು ಮತ್ತು ಮಂಗಳವಾರ 9,195 ಕೊರೋನಾ ಪ್ರಕರಣಗಳು ವರದಿಯಾಗಿವೆ.