ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆ ಹಲವು ಸಮೀಕ್ಷೆಗಳು, ಅಂಕಿ ಅಂಶಗಳು ಬಹಿರಂಗಗೊಂಡಿದೆ. ಇದೀಗ ಹಿರಿಯ ವೈದ್ಯರೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಈ ವೈದ್ಯರ ಪ್ರಕಾರ ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗೆ ಕೊರೋನಾ ತಗುಲಿದೆ ಎಂದಿದ್ದಾರೆ. ಹಿರಿಯ ವೈದ್ಯ ಬಹಿರಂಗಪಡಿಸಿದ ಅಂಕಿ ಅಂಶ ಇಲ್ಲಿದೆ.
ನವದೆಹಲಿ(ಆ.20): ಸರ್ಕಾರ ಬಿಡುಗಡೆ ಮಾಡುತ್ತಿರುವ ಕೊರೋನಾ ಬುಲೆಟಿನ್ ಮಾಹಿತಿಗಿಂತಲೂ ವಾಸ್ತವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಈ ಕುರಿತು ವೈದ್ಯ ಡಾ. ವೇಲುಮಣಿ ನೂತನ ಅಂಕಿ ಅಂಶ ಬಹಿರಂಗಪಡಿಸಿದ್ದಾರೆ. ಇವರ ಪ್ರಕಾರ ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ ಎಂದಿದ್ದಾರೆ.
ಭಾರತದಲ್ಲಿ ಕೊರೋನಾ ಹರಡೋ ವೇಗ ಈಗ ಅತ್ಯಂತ ಕಡಿಮೆ.
ಡಾ.ವೇಲುಮಣಿ ನೇತೃತ್ವದ ಥೈರೋಕೇರ್ ಸಂಸ್ಥೆ ಭಾರತದಲ್ಲಿ 2.70 ಲಕ್ಷ ಮಂದಿಗೆ ಆ್ಯಂಟಿ ಬಾಡಿ ಟೆಸ್ಟ್ ಮಾಡಿಸಿದೆ. ಇದರಲ್ಲಿ ಶೇಕಡಾ 26 ರಷ್ಟು ಮಂದಿಗೆ ಈಗಾಗಲೇ ಕೊರೋನಾ ತಗುಲಿದೆ. ಮುಂಬೈ ನಗರದಲ್ಲಿ ನಡೆಸಿದ ಸಮೀಕ್ಷೆಯಿಂದ ಶೇಕಾಡ 57 ರಷ್ಟು ಸ್ಲಂ ವಲಯಗಳು ಕೊರೋನಾ ವೈರಸ್‌ನಲ್ಲಿ ಮುಳುಗಿದೆ. ದೇಶದ ಪ್ರಮುಖ ನಗರಗಳು ಹಾಗೂ ಇತರೆಡೆಗಳ ಅಂಕಿ ಅಂಶಗಳನ್ನು ಅಧ್ಯಯನ ಮಾಡಿದರೆ ಭಾರತದಲ್ಲಿನ ನಾಲ್ವರಲ್ಲಿ ಒಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಸಾಧ್ಯತೆ ಇದೆ ಎಂದು ಡಾ.ವೇಲುವಣಿ ಹೇಳಿದ್ದಾರೆ.
ಭಾರತದಲ್ಲಿ ಸದ್ಯ 2.8 ಮಿಲಿಯನ್ ಕೊರೋನಾ ವೈರಸ್ ಪ್ರಕರಣಗಳಿವೆ. ಅಮೆರಿಕಾ ಹಾಗೂ ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತವಿದೆ. ಕೊರೋನಾ ವೈರಸ್ ತಗುಲಿದ ಆರೋಗ್ಯವಂತ ವ್ಯಕ್ತಿಗೆ ಸಮಸ್ಯ ಎದುರಾಗುವುದು ವಿರಳ. ಆದರೆ ಅದೇ ಆರೋಗ್ಯವಂತ ವ್ಯಕ್ತಿ ಕೊರೋನಾ ಹರಡುವ ಸಾಧ್ಯತೆ ಹೆಚ್ಚು. ಇದು ಆತಂಕಕಾರಿ ಎಂದು ಡಾ. ವೇಲುಮಣಿ ಹೇಳಿದ್ದಾರೆ.
