ಕಳೆದ ಎರಡು ವಾರಗಳಿಂದ ಭಾರತದಲ್ಲಿ ಅತ್ಯಂತ ಹೆಚ್ಚು ಕೊರೋನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದೆ. ಆದರೂ ಭಾರತದಲ್ಲಿ ಕೊರೋನಾ ಹರಡುವ ವೇಗ ಈಗ ಕಡಿಮೆಯಾಗಿದೆ.

ಈ ವಾರ ಕೊರೋನಾ ಕರಡುವ ವೇಗ ಅತ್ಯಂತ ಕಡಿಮೆಯಾಗಿದೆ. ಕೆಲವು ಪ್ರಮುಖ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಮಖ್ಯೆ ಹೆಚ್ಚುವುದರ ವೇಗ ತುಂಬಾ ಕಡಿಮೆಯಾಗಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಹರಡುತ್ತೆ ರೂಪಾಂತರಗೊಂಡ ಕೊರೋನಾ ವೈರಸ್

ಇದುವರೆಗೆ ಭಾರತದಲ್ಲಿ ಒಟ್ಟಿ 20,836,925 ಕೊರೋನಾ ಪ್ರಕರಣಗಳು ದಾಖಲಾಗಿದೆ. ಆದರೆ ಹಲವು ಪ್ರಮುಖ ನಗರಗಳಲ್ಲಿ ಕೆಲವು ಪ್ರಕರಣ ದಾಖಲಾಗದೇ ಇರಬಹುದು ಎಂದೂ ಹೇಳಲಾಗುತ್ತಿದೆ. ಪುಣೆಯಲ್ಲಿ ಕೊರೋನಾ ಹೆಚ್ಚು ಬಾಧಿಸಿರುವ ಸ್ಥಳದಲ್ಲಿ ಸೆರೋ ಸರ್ವೆ ನಡೆದಿದೆ.

ಸರ್ವೆಯಲ್ಲಿ ಭಾಗವಹಿಸಿದ ಶೇಖಡ 52ರಷ್ಟು ಮಂದಿಯಲ್ಲಿ  ಪ್ರತಿಕಾಯಗಳು ಅತ್ಯಧಿಕ ಪ್ರಮಾಣದಲ್ಲಿ ಕಂಡು ಬಂದಿದೆ. ಇದೀಗ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ಇಳಿಕೆಯಾಗುತ್ತಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಕ್ಟಿವ್ ಕೇಸುಗಳ ಪ್ರಮಾಣ ಕಡಿಮೆಯಾಗುತ್ತಿದೆ.