ನವದೆಹಲಿ(ನ.30): ಕೊರೋನಾ ವೈರಸ್‌ಗೆ ಲಸಿಕೆ ಬಂದಾಕ್ಷಣ ಅದನ್ನು ಆರೋಗ್ಯ ಕಾರ್ಯಕರ್ತರು ಮುಂತಾದ ಆದ್ಯತಾ ವಲಯದ ಜನರಿಗೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್‌ಗಳ (ಲಸಿಕೆ ನೀಡುವವರು) ಪಡೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ.

'ಕೊರೋನಾ ಲಸಿಕೆ ಬಗ್ಗೆ ಮೋದಿಗಿರುವ ಜ್ಞಾನಕ್ಕೆ ತಲೆದೂಗಲೇಬೇಕು'

2021ರ ಆರಂಭಿಕ ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡುವ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿದ್ದು, ನಂತರ ಹಂತಹಂತವಾಗಿ ಹೆಚ್ಚಿನ ಜನಸಿಗೆ ಲಸಿಕೆ ನೀಡಲಿದೆ. ದೇಶದ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳೂ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಈಗಾಗಲೇ 70,000 ವ್ಯಾಕ್ಸಿನೇಟರ್‌ಗಳು ಲಭ್ಯವಿದ್ದಾರೆ. ಜೊತೆಗೆ, ಖಾಸಗಿ ವಲಯದಿಂದ 30,000 ವೈದ್ಯರು, ನರ್ಸ್‌ಗಳು ಹಾಗೂ ಪ್ರಯೋಗಾಲಯದ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ತಡೆಯುವ ಲಸಿಕೆಗೆ ಸರ್ಕಾರದ ಒಪ್ಪಿಗೆ ದೊರೆತ ತಕ್ಷಣ ಈ ವ್ಯಾಕ್ಸಿನೇಟರ್‌ಗಳು ಲಸಿಕೆ ನೀಡಲು ಆರಂಭಿಸುತ್ತಾರೆ. ತರಬೇತಿ ಪಡೆದ ಒಬ್ಬ ವ್ಯಾಕ್ಸಿನೇಟರ್‌ ಒಂದು ಗಂಟೆಗೆ 20-25 ಡೋಸ್‌ ಲಸಿಕೆ ನೀಡಲು ಸಾಧ್ಯವಿದೆ. ಆದರೆ, ಆರಂಭದಲ್ಲಿ ಲಸಿಕೆಯ ಲಭ್ಯತೆ ಸೀಮಿತವಾಗಿರುವುದರಿಂದ ಇಷ್ಟುಲಸಿಕೆ ನೀಡುವ ಅಗತ್ಯ ಬೀಳುವುದಿಲ್ಲ ಎಂದು ಹೇಳಲಾಗುತ್ತಿದೆ.

3 ಲಸಿಕಾ ಘಟಕಗಳಿಗೆ ಮೋದಿ ಭೇಟಿ : ಪರಿಶೀಲಿಸಿದ ಪಿಎಂ

ದೇಶದ ಸರ್ಕಾರಿ ಸಂಸ್ಥೆಗಳಲ್ಲಿ ಸದ್ಯ ಲಭ್ಯರಿರುವ 70,000 ವ್ಯಾಕ್ಸಿನೇಟರ್‌ಗಳು ಸಾರ್ವತ್ರಿಕ ಲಸಿಕಾ ಅಭಿಯಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರನ್ನೂ ಕೊರೋನಾ ಲಸಿಕೆ ನೀಡಲು ಬಳಸಿಕೊಳ್ಳಲಾಗುತ್ತದೆ. ಇನ್ನು, ಲಸಿಕೆ ನೀಡುವ ಕುರಿತು ರಚಿಸಲಾದ ರಾಷ್ಟ್ರೀಯ ತಜ್ಞರ ಸಮೂಹವು ಫಿಕ್ಕಿ, ಸಿಐಐ ಮುಂದಾದ ಖಾಸಗಿ ಉದ್ಯಮಗಳ ಸಂಘದ ಬಳಿ ನಿಮ್ಮಲ್ಲೆಷ್ಟುಮಂದಿ ವ್ಯಾಕ್ಸಿನೇಟರ್‌ಗಳು ಸಿಗಬಹುದು ಎಂದು ಮಾಹಿತಿ ಕೇಳಿದೆ. ಈ ಮಾಹಿತಿ ಬಂದ ಮೇಲೆ ಅಂತಿಮವಾಗಿ ವ್ಯಾಕ್ಸಿನೇಟರ್‌ಗಳ ಪಟ್ಟಿಸಿದ್ಧಪಡಿಸಲಾಗುತ್ತದೆ. ಜೊತೆಗೆ, ಇನ್ನಷ್ಟುಜನರಿಗೆ ಲಸಿಕೆ ನೀಡುವ ತರಬೇತಿ ನೀಡುವುದಕ್ಕೂ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.