PM ಕೇರ್ಸ್ ಫಂಡ್ ಮೂಲಕ 1 ಲಕ್ಷ ಪೊರ್ಟೇಬಲ್ ಆಕ್ಸಿಜನ್ ಸಾಂದ್ರಕ ಖರೀದಿಗೆ ಕೇಂದ್ರ ನಿರ್ಧಾರ

2ನೇ ಕೊರೋನಾ ಅಲೆಗೆ ದೇಶದಲ್ಲಿ ಎದುರಾದ ಆಕ್ಸಿಜನ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಪಿಎಂ ಕೇರ್ಸ್ ಫಂಡ್ ಮೂಲಕ 1 ಲಕ್ಷ ಪೋರ್ಟೇಬಲ್ ಆಕ್ಸಿಜನ್ ಸಾಂದ್ರಕ ಖರೀದಿಗೆ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

1 Lakh Portable Oxygen Concentrators to be procured from PM CARES fund ckm

ನವದೆಹಲಿ(ಏ.28): ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಕಾಡುತ್ತಿದೆ. ಹೀಗಾಗಿ ದೇಶ ಎದುರಿಸುತ್ತಿರುವ ಕೊರತೆಗಳನ್ನು ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಆಕ್ಸಿಜನ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 551 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ನಿರ್ದೇಶಿದ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ 1 ಲಕ್ಷ ಆಕ್ಸಿಜನ್ ಸಾಂದ್ರಕ ಖರೀದಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಾಯುಸೇನೆ ಜೊತೆ ಪ್ರಧಾನಿ ಮಹತ್ವದ ಚರ್ಚೆ; ಕೊರೋನಾ ಕಾರ್ಯಚರಣೆ ಕುರಿತು ಪರಿಶೀಲನೆ!

ಪಿಎಂ ಕೇರ್ಸ್ ಫಂಡ್ ಮೂಲಕ 1 ಲಕ್ಷ ಆಕ್ಸಿಜನ್ ಸಾಂದ್ರಕ ಖರೀದಿಗೆ ನರೇಂದ್ರ ಮೋದಿ ಅಂಕಿತ ಹಾಕಿದ್ದಾರೆ. ಈ ಮೂಲಕ 2ನೇ ಶ್ರೇಣಿ ನಗರಗಳು ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಮಹತ್ತರ ಹೆಜ್ಜೆ ಇಡಲಾಗಿದೆ.  

ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಈಗಾಗಲೇ ಮಂಜೂರಾಗಿರುವ 713 PSA ಸ್ಥಾವರಗಳ ಜೊತೆಗೆ, 500 ಹೊಸ ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ಆಮ್ಲಜನಕ ಸ್ಥಾವರಗಳನ್ನು ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಮಂಜೂರು ಮಾಡಲಾಗಿದೆ. 

ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ

ಪಿಎಸ್ಎ ಸ್ಥಾವರಗಳು ಜಿಲ್ಲಾ ಕೇಂದ್ರ ಮತ್ತು 2ನೇ ಶ್ರೇಣಿ ನಗರಗಳಲ್ಲಿನ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲಿವೆ. ಈ 500 ಪಿಎಸ್‌ಎ ಸ್ಥಾವರಗಳನ್ನು ಡಿಆರ್‌ಡಿಒ ಮತ್ತು ಸಿಎಸ್‌ಐಆರ್ ಅಭಿವೃದ್ಧಿಪಡಿಸಿದ ಸ್ಥಳೀಯ ತಂತ್ರಜ್ಞಾನವನ್ನು ದೇಶೀಯ ಉತ್ಪಾದಕರಿಗೆ ಸ್ಥಾಪಿಸಲಾಗುತ್ತಿದೆ..

Latest Videos
Follow Us:
Download App:
  • android
  • ios