Asianet Suvarna News Asianet Suvarna News

ಕುಂಭ​ಮೇ​ಳ: 1 ಲಕ್ಷಕ್ಕೂ ನಕಲಿ ಕೋವಿಡ್‌ ಟೆಸ್ಟ್‌, ಭಾರೀ ಅಕ್ರಮ ಬಯಲಿಗೆ!

* ಹರಿ​ದ್ವಾರ ಕುಂಭ​ಮೇ​ಳ: 1 ಲಕ್ಷಕ್ಕೂ ನಕಲಿ ಕೋವಿಡ್‌ ಟೆಸ್ಟ್‌

* ತನಿಖೆಯಲ್ಲಿ ಭಾರೀ ಅಕ್ರಮ ಬಯಲಿಗೆ

* ಟೆಸ್ಟಿಂಗ್‌ ಗುರಿ ತಲುಪಲು ಖಾಸಗಿ ಸಂಸ್ಥೆಯಿಂದ ಕೃತ್ಯ

* 50 ಮಂದಿಯ ನೋಂದ​ಣಿಗೆ ಒಂದೇ ಫೋನ್‌ ನಂಬರ್‌ ಬಳ​ಕೆ!

1 lakh Covid 19 tests during Kumbh festival fake Report pod
Author
Bangalore, First Published Jun 16, 2021, 8:15 AM IST
  • Facebook
  • Twitter
  • Whatsapp

ಹರಿ​ದ್ವಾ​ರ(ಜೂ.16): ಉತ್ತ​ರಾ​ಖಂಡದ ಹರಿ​ದ್ವಾ​ರ​ದಲ್ಲಿ ನಡೆದ ಕುಂಭ​ಮೇ​ಳದ ವೇಳೆ ಕೋವಿಡ್‌ ಪರೀ​ಕ್ಷೆಯ ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆ​ಯೊಂದು 1 ಲಕ್ಷಕ್ಕೂ ಹೆಚ್ಚು ನಕಲಿ ಕೋವಿಡ್‌ ವರ​ದಿ​ಗ​ಳನ್ನು ನೀಡಿತ್ತು ಎಂಬ ವಿಚಾರ ವಿಸ್ತೃತ ತನಿ​ಖೆ​ಯಿಂದ ಬೆಳ​ಕಿಗೆ ಬಂದಿದೆ. ಇದೇ ವರ್ಷದ ಏ.1ರಿಂದ ಏ.30ರವ​ರೆಗೆ ಕುಂಭ​ಮೇಳ ನಡೆ​ದಿತ್ತು.

ಲಕ್ಷಾಂತರ ಭಕ್ತರು ಸೇರಿದ್ದ ಕುಂಭ​ಮೇ​ಳ​ದಲ್ಲಿ ಸೋಂಕು ಹೆಚ್ಚು ವ್ಯಾಪ​ಕ​ವಾಗಿ ಹರ​ಡ​ದಂತೆ ಮುಂಜಾ​ಗ್ರತೆ ವಹಿ​ಸಲು ಕುಂಭಕ್ಕೆ ಬರುವ ಭಕ್ತ​ರ ಕೋವಿಡ್‌ ಪರೀ​ಕ್ಷೆ​ ಜವಾ​ಬ್ದಾ​ರಿ​ಯನ್ನು ಖಾಸಗಿ ಸಂಸ್ಥೆ​ಗೆ ವಹಿ​ಸ​ಲಾ​ಗಿತ್ತು. ನಿತ್ಯ 50 ಸಾವಿರ ಜನರ ಟೆಸ್ಟ್‌ ನಿಗದಿಪಡಿಸಲಾಗಿತ್ತು. ಆದರೆ ಈ ಗುರಿ ತಲುಪಲು ಆ ಸಂಸ್ಥೆಯು ನಕಲಿ ಕೋವಿಡ್‌ ವರ​ದಿ​ಗ​ಳನ್ನು ನೀಡಿದೆ ಎಂಬ ಆರೋ​ಪದ ಕೇಳಿಬಂದಿತ್ತು. ಈ ಕುರಿ​ತಾಗಿ ಹರಿ​ದ್ವಾರ ಜಿಲ್ಲಾ​ಡ​ಳಿತ ತನಿ​ಖೆಗೆ ಆದೇ​ಶಿ​ಸಿತ್ತು. ಅಭಿ​ವೃ​ದ್ಧಿಯ ಮುಖ್ಯಾ​ಧಿ​ಕಾರಿ ಸೌರಭ್‌ ಗಹ​ರ್ವಾರ್‌ ಅವರ ನೇತೃ​ತ್ವದ ಸಮಿ​ತಿ ನಡೆ​ಸಿದ ತನಿ​ಖೆಯ ಪ್ರಕಾರ ಹಲವು ಅಕ್ರ​ಮ​ಗ​ಳು ನಡೆ​ದಿ​ರು​ವುದು ಬಯ​ಲಾ​ಗಿದೆ.

ಏನೆಲ್ಲಾ ಅಕ್ರ​ಮ​ಗಳು?:

- ಒಂದೇ ಆ್ಯಂಟಿ​ಜೆನ್‌ ಕಿಟ್‌ ಮುಖಾಂತರ 700 ಮಾದ​ರಿ​ಗಳ ಪರೀ​ಕ್ಷೆ

- 50 ಮಂದಿಯ ಕೋವಿಡ್‌ ಪರೀ​ಕ್ಷೆ​ಯ ನೋಂದ​ಣಿ​ಗಾಗಿ ಒಂದೇ ಫೋನ್‌ ನಂಬರ್‌

- ಕೋವಿಡ್‌ ಟೆಸ್ಟಿಂಗ್‌ ಸಿಬ್ಬಂದಿ ಕುಂಭಮೇಳದಲ್ಲಿ ಇರಬೇಕಿತ್ತು. ಆದರೆ ಅಲ್ಲಿಗೆ ಬರಲೇ ಇಲ್ಲ

- ರಾಜಸ್ಥಾನದಲ್ಲಿ ಕುಳಿತೇ ಸಿಬ್ಬಂದಿಯಿಂದ ಹರಿದ್ವಾರದಲ್ಲಿ ಇರುವವರ ‘ನಕಲಿ ಮಾದರಿ’ ಸಂಗ್ರಹ

- ಇವರ ಕೃತ್ಯಕ್ಕೆ ಹಲವು ಲ್ಯಾಬ್‌ಗಳ ಸಾಥ್‌

Follow Us:
Download App:
  • android
  • ios