ನವದೆಹಲಿ (ಮಾ.01): ಉಜ್ವಲಾ ಯೋಜನೆಯಡಿ ಮುಂದಿನ 2 ವರ್ಷದಲ್ಲಿ ಮತ್ತೆ 1 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸೌಲಭ್ಯ ಒದಗಿಸಲು ಚಿಂತಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 ಕಳೆದ 4 ವರ್ಷದಲ್ಲಿ ಯೋಜನೆಯಡಿ 8 ಕೋಟಿ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ವಾಸ ದೃಢೀಕರಣ ಪತ್ರ ಸಹ ಇಲ್ಲದೆ ಕನಿಷ್ಠ ಗುರುತಿನ ದಾಖಲೆ ಆಧಾರದಲ್ಲಿ ಅನಿಲ ಸಂಪರ್ಕ ನೀಡಲು ಯೋಚಿಸಲಾಗುತ್ತಿದೆ. 

ಜನ ಸಾಮಾನ್ಯರಿಗೆ ಶಾಕ್: ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ! ...

ಹಾಗೆಯೇ ಒಬ್ಬ ಡೀಲರ್‌ ಬದಲಾಗಿ ಮೂವರು 3 ಡೀಲರ್‌ಗಳಿಂದ ಸಿಲಿಂಡರ್‌ಗಳಿಗೆ ಅನಿಲವನ್ನು ತುಂಬಿಸುವ ಆಯ್ಕೆಯನ್ನು ಜನರು ಪಡೆಯಲಿದ್ದಾರೆ ಎಂದು ಅನಿಲ ಕಾರ‍್ಯದರ್ಶಿ ತರುಣ್‌ ಕಪೂರ್‌ ಭಾನುವಾರ ತಿಳಿಸಿದರು.