75 ಸ್ವಾತಂತ್ರ್ಯವೀರರ ಪೋಸ್ಟರ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಂದ ಅನಾವರಣ

ಚೆನ್ನೈ(ಆ.08): ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್ ಹಮ್ಮಿಕೊಂಡಿರುವ ‘ಇಂಡಿಯಾ @ 75’ ಯಾತ್ರೆಯ ದೆಹಲಿ ಚರಣಕ್ಕೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಭಾನುವಾರ ಚಾಲನೆ ನೀಡಿದರು. ತಮ್ಮನ್ನು ಭೇಟಿಯಾದ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ರಜನಿ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಎಲೆಮರೆಕಾಯಿಯಂತಿದ್ದ 75 ವೀರಯೋಧರ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದರು. ಇದೇ ವೇಳೆ, 75 ಸ್ವಾತಂತ್ರ್ಯವೀರರ ಪರಿಚಯವನ್ನು ಒಳಗೊಂಡ ಕಿರು ವಿಡಿಯೋವನ್ನು ಬಿಡುಗಡೆ ಮಾಡಲಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬುತ್ತಿರುವ ಐತಿಹಾಸಿಕ ಸಂದರ್ಭದಲ್ಲಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್ ಹಮ್ಮಿಕೊಂಡಿರುವ ‘ಇಂಡಿಯಾ-75’ ಹೆಸರಿನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಯಾತ್ರೆಯ ಮುಂದಿನ ಚರಣ ಭಾನುವಾರ ಆರಂಭಗೊಂಡಿದೆ.

ಕೇರಳದಿಂದ ಆರಂಭವಾಗಿ ಕರ್ನಾಟಕದಲ್ಲಿ ಸಂಚರಿಸಿರುವ ಯಾತ್ರೆಯನ್ನು ಉತ್ಸಾಹಿ ಸಾಫ್‌್ಟವೇರ್‌ ಎಂಜಿನಿಯರ್‌ ಅನಂತ್‌ ರಾಮಪ್ರಸಾದ್‌ ಹಾಗೂ ಮತ್ತೋರ್ವ ಟೆಕಿ ಅನಿಲ್‌ ಮುಂದುವರಿಸುತ್ತಿದ್ದಾರೆ. ಏಷ್ಯಾನೆಟ್‌ ಮಾಧ್ಯಮ ಸಮೂಹದ ಭಾಗವಾದ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕಚೇರಿಯ ಮುಂಭಾಗದಿಂದ ಆರಂಭಗೊಂಡ ಯಾತ್ರೆಯ ಮುಂದಿನ ಚರಣ 7 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಲಿದೆ. ಕರ್ನಾಟಕದಿಂದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರ್ಯಾಣ, ಚಂಡೀಗಢ, ಹಿಮಾಚಲ ಪ್ರದೇಶ ಮೂಲಕ ತೆರಳುವ ಯಾತ್ರೆ ಹಿಮಾಲಯದ ಲಡಾಖ್‌ನಲ್ಲಿ ಮುಕ್ತಾಯಗೊಳ್ಳಲಿದೆ.
ಇಂಡಿಯಾ ಃ 75 ಮುಂದಿನ ಚರಣ ಶುಭಾರಂಭ

India@75: ಸ್ವಾತಂತ್ರ್ಯಕ್ಕಾಗಿ ಹಳ್ಳಿಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದ ಬೆಳಗಾವಿ ಪ್ರಜಾಸಂಘ

ದೇಶದ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ: ಏಷ್ಯಾನೆಟ್‌ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಚಾಲನೆ ನೀಡಿದ್ದ ಯಾತ್ರೆ ಜು.21ರಂದು ಕರ್ನಾಟಕಕ್ಕೆ ಪ್ರವೇಶಿಸಿತ್ತು. ಇಲ್ಲಿನ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು, ಯಾತ್ರೆಯ ಧ್ವಜವನ್ನು ಸ್ವೀಕರಿಸಿ ಎನ್‌ಸಿಸಿ ಕೆಡೆಟ್‌ಗಳಿಗೆ ಹಸ್ತಾಂತರಿಸುವ ಮೂಲಕ ರಾಜ್ಯದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಯಾತ್ರೆಗೆ ಶುಭ ಕೋರಿದ್ದರು. ರಾಜಭವನ, ರಾಷ್ಟ್ರೀಯ ಸೈನಿಕ ಸ್ಮಾರಕ, ಭಾರತೀಯ ವಿಜ್ಞಾನ ಸಂಸ್ಥೆ, ಇಸ್ರೋ ಸೇರಿದಂತೆ ಇತರೆ ಸ್ಥಳಗಳಿಗೆ ಎನ್‌ಸಿಸಿ ಕೆಡೆಟ್‌ಗಳು ಯಾತ್ರೆ ನಡೆಸಿದ್ದರು. ಆ.2ರಂದು ಕರ್ನಾಟಕ ಚರಣ ಮುಕ್ತಾಯಗೊಂಡಿದ್ದು, ವಿಧಾನಸೌಧದೆದುರು ಅದರ ಸಮಾರೋಪ ಹಾಗೂ ಮುಂದಿನ ಚರಣಕ್ಕೆ ಹಸಿರು ನಿಶಾನೆ ತೋರುವ ಕಾರ್ಯಕ್ರಮ ನಡೆದಿತ್ತು. ಕಂದಾಯ ಸಚಿವ ಆರ್‌. ಅಶೋಕ್‌ ಅವರು ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರಮಾಣಪತ್ರ ವಿತರಿಸಿದ್ದರು. ಬಳಿಕ ಯಾತ್ರೆಯ ಮುಂದಿನ ಚರಣವನ್ನು ಉದ್ಘಾಟಿಸಿದ್ದರು.