Asianet Suvarna News Asianet Suvarna News

RSS ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮವಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

RSS ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮವಿದೆ. ಆರ್‌ಎಸ್‌ಎಸ್‌ ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ರಾಷ್ಟ್ರದ ಉಳಿವಿಗಾಗಿ. ರಾಷ್ಟ್ರಪ್ರೇಮ ಕಾಂಗ್ರೆಸ್‌ನಿಂದ ಕಲಿಯುವ ಅಗತ್ಯವಿಲ್ಲ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು

RSS has patriotism in  mind protect our nation  Union Minister Shobha Karandlaje rv
Author
Bangalore, First Published Aug 13, 2022, 4:18 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಆ.13) : ದೇಶದ ಸ್ವಾತಂತ್ರ್ಯಕ್ಕೆ ನಾವೇ ಕಾರಣ ಎಂದು ಕಾಂಗ್ರೆಸ್ಸಿಗರು ಪೋಸು ಕೊಡುತ್ತಾ, ಆರ್ ಎಸ್ ಎಸ್ ಗೆ ರಾಷ್ಟ್ರಧ್ವಜದ ಡಿಪಿ ಹಾಕಲು ಚಾಲೆಂಜ್ ಮಾಡುತ್ತಾರೆ. ಆದರೆ ಆರೆಸ್ಸೆಸ್‌ನ ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.\ ಉಡುಪಿ(Udupi)ಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯದ ಜನಾಂದೋಲನಕ್ಕಾಗಿ ಕಾಂಗ್ರೆಸ್(Congress) ರಚನೆಯಾಗಿತ್ತು, ಆಂದೋಲನಕ್ಕಾಗಿಯೇ ರೂಪಗೊಂಡ ಕಾಂಗ್ರೆಸನ್ನು ವಿಸರ್ಜಿಸಲು ಗಾಂಧೀಜಿ(Gandhiji) ಹೇಳಿದ್ದರು;  ಆದರೆ ಕಾಂಗ್ರೆಸ್ ಅಜ್ಜ ನೆಟ್ಟ ಆಲದ ಮರಕ್ಕೆ ನೇತು ಹಾಕಿಕೊಂಡಿದ್ದಾರೆ ಲೇವಡಿ ಮಾಡಿದರು.

52 ವರ್ಷ ಆರೆಸ್ಸೆಸ್‌ ರಾಷ್ಟ್ರಧ್ವಜ ಹಾರಿಸದಿರಲು ಏನು ಕಾರಣ?: ಸಿದ್ದರಾಮಯ್ಯ

ಇಂತಹ ಕಾಂಗ್ರೆಸ್ ಆರ್‌ಎಸ್‌ಎಸ್‌ ಮತ್ತು ಬಿಜೆಪಿ(BJP)ಗೆ ಬುದ್ಧಿ ಹೇಳುತ್ತದೆ,ಆರ್‌ಎಸ್‌ಎಸ್‌ ಮೇಲೆ ಕಾಂಗ್ರೆಸ್ ಕಾನೂನಾತ್ಮಕ ಕ್ರಮ ಕೈಗೊಂಡು ಕೂಡಾ ವಿಫಲವಾಗಿದ್ದಾರೆ.ಆರ್‌ಎಸ್‌ಎಸ್‌ ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ರಾಷ್ಟ್ರದ ಉಳಿವಿಗಾಗಿ ಎಂದರು ದೇಶಭಕ್ತಿ ಪ್ರೇರೇಪಿಸುವುದು ಆರ್‌ಎಸ್‌ಎಸ್‌ನ  ಉದ್ದೇಶ. ಆರ್‌ಎಸ್‌ಎಸ್‌ ಗೆ ಕಾಂಗ್ರೆಸ್ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ, ಚೀನಾ(China) ಪಾಕಿಸ್ತಾನ(Pakistana) ಜೊತೆ ಕೈಜೋಡಿಸಿದವರು ನಮಗೆ ಪಾಠ ಕಲಿಸುವ ಅಗತ್ಯವಿಲ್ಲ. ಇಟಲಿ ಯುರೋಪಿಗೆ ಹೋಗಿ ಭಾರತವನ್ನು ಅವಹೇಳನ ಮಾಡಿ ಭಾಷಣ ಮಾಡಿದವರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕಾಗಿಲ್ಲ ಎಂದು ಕಿಡಿ ಕಾರಿದರು

ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಕ್ಕಾಗಿ ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ. ಲಕ್ಷಾಂತರ ಜನ ಜೈಲು ಸೇರಿದ್ದಾರೆ, ನೇಣುಗಂಬಕ್ಕೇರಿದ್ದಾರೆ. ಕೆಂಪುಕೋಟೆಯ ಮೇಲೆ ಧ್ವಜ ಹಾರಲು ಹಲವರ ಪ್ರಾಣ ತ್ಯಾಗಗಳಾಗಿವೆ, ಪ್ರತಿ ಮನೆ ಪ್ರತಿ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು. ತ್ರಿವರ್ಣ ಧ್ವಜ ಒಂದು ಧರ್ಮದ ಸಂಕೇತವಲ್ಲ. ತ್ರಿವರ್ಣ ಧ್ವಜ ಹಾರಿಸಲು ಇದ್ದ ನಿಬಂಧನೆಗಳನ್ನು ಮೂರು ದಿನ ತೆಗೆದು ಹಾಕಲಾಗಿದೆ, ಜಾತಿ ಧರ್ಮ ಪಕ್ಷದ ಬಂಧನಗಳನ್ನು ಹೊರತುಪಡಿಸಿ ಅಮೃತ ಮಹೋತ್ಸವ ನಡೆಯುವ ವಿಶ್ವಾಸವಿದೆ ಎಂದರು

ರಾಷ್ಟ್ರ ಧ್ವಜದ ವಿಚಾರದಲ್ಲಿ ರಾಜಕೀಯ ಬೇಡ: ಮನೆ ಮನೆಯಲ್ಲಿ ತಿರಂಗ ಹಾರಾಡುತ್ತದೆ ಹಾರಾಡಬೇಕು. ಮಕ್ಕಳು ಮತ್ತು ಯುವ ಜನಾಂಗಕ್ಕೆ ದೇಶಭಕ್ತಿಯ ಮರುಪೂರಣವಾಗಬೇಕು, ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಟೀಕಿಸುವವರ ಮನಸ್ಸು ಕಲುಶಿತವಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರು ಮತ್ತು ದೇಶದ ಗಡಿ ಕಾಯುತ್ತಿರುವ ಯೋಧರಿಗಾಗಿ ತಿರಂಗ ಹಾರಿಸಿ,ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ ಎಂದರು\

ನಮ್ಮದು ವಿಎಚ್‌ಪಿ, ಬಜರಂಗದಳ, ಆರ್‌ಎಸ್‌ಎಸ್‌ ಸರ್ಕಾರವಲ್ಲ, ಬಿಜೆಪಿ ಗೋರ್ಮೆಂಟ್‌: ವಿಶ್ವನಾಥ್‌

ಪ್ರವೀಣ್ ನೆಟ್ಟಾರು ಕೊಲೆ ಫಂಡಿಂಗ್ ಮಾಡಿದ್ದು ಯಾರು?

ಪ್ರವೀಣ್ ನಿಟ್ಟಾರು(Praveen Nettaru) ಯಾವುದೇ ವಿವಾದಗಳಲ್ಲಿದ ವ್ಯಕ್ತಿಯಾಗಿದ್ದರು. ಹಿಂದೂ ಯುವಕರ ಹತ್ಯೆ ಮಾಡುವವರ ಮಾನಸಿಕತೆ ಏನೆಂದೇ ಅರ್ಥವಾಗುತ್ತಿಲ್ಲ.ಪ್ರವೀಣನನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು. ಪ್ರವೀಣ್ ಕೊಲೆಯ ಹಿಂದಿನ ಶಕ್ತಿ ಯಾವುದು? ಫೈನಾನ್ಸ್ ಮಾಡಿದವರು ಯಾರು? ಕುಮ್ಮಕ್ಕು ಕೊಟ್ಟವರು ಯಾರು, ಆಶ್ರಯ ಕೊಟ್ಟವರು ಯಾರು? ಈ ಎಲ್ಲಾ ವಿಚಾರವನ್ನು ಎನ್ ಐ ಎ ತನಿಖೆ ಮಾಡುತ್ತದೆ. ಕೇವಲ ಕೊಲೆ ಆರೋಪಿಗಳಲ್ಲ ಎಲ್ಲರ ಹಿಂದೆ ಎನ್ ಐ ಎ ತನಿಖೆ ನಡೆಸುತ್ತಿದ್ದು, ಮುಂದೆ ಇಂತಹ ಘಟನೆಯಾಗದಂತೆ ಭಯ ಹುಟ್ಟಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಕೇಳಿದ್ದು, ನನ್ನ ಬೇಡಿಕೆಗೆ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಮೇಸ್ತಾ(Paresh Mesta) ಕೊಲೆ ಆರೋಪಿಗೆ ಮಣೆ- ಶೋಭಾ ಕಿಡಿಕಿಡಿ:\ ಉತ್ತರ ಕನ್ನಡ (Uttara Kannada)ಜಿಲ್ಲೆಯ  ಪರೇಶ್ ಮೇಸ್ತಾ ಆರೋಪಿಗಳಿಗೆ ಬಿಜೆಪಿ ಮಣೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ನೋಡಿದ್ದೇನೆ. ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಜರುಗಿಸಬೇಕು. ಪರೇಶ್ ಮೇಸ್ತನ ಸಾವಿನ ಹಿನ್ನೆಲೆಯಲ್ಲಿ ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಪರೇಶ್ ಮೇಸ್ತಾ ಕುಟುಂಬ ಮತ್ತು ನಮ್ಮ ವಿಚಾರಧಾರೆಗೆ ಘಾಸಿಯಾಗುವ ಬೆಳವಣಿಗೆ ನಡೆಯಬಾರದು, ತಪ್ಪಾಗಿದ್ದರೆ ಅದು ಸರಿಪಡಿಸಬೇಕು ಮತ್ತು ತನಿಖೆಯಾಗಬೇಕು ಎಂದು ನುಡಿದರು.

Follow Us:
Download App:
  • android
  • ios