Asianet Suvarna News Asianet Suvarna News

INDIA@75: ಅರಭಾವಿ ಕ್ಷೇತ್ರದಲ್ಲಿ ನಯನ ಮನೋಹರ ರೈತರ Tractor rally!

  •  75ನೇ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆ ವಿನೂತನ ಕಾರ್ಯಕ್ರಮ
  •  ಬೆಳಗಾವಿ ಜಿಲ್ಲೆ ಅರಭಾವಿ ಕ್ಷೇತ್ರದ ಪ್ರಮುಖ ಗ್ರಾಮಗಳಲ್ಲಿTractor rally
  • 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌‌ಗಳ ಮೇಲೆ ತ್ರಿವರ್ಣ ಧ್ವಜ ಕಟ್ಟಿ Rallyಯಲ್ಲಿ ಭಾಗಿಯಾದ ರೈತರು
India Independence day Farmers Tractor Rally in the Arrabhi at belagavi rav
Author
Bangalore, First Published Aug 15, 2022, 7:46 AM IST

ಬೆಳಗಾವಿ (ಆ.15): 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ(Independence Amrit Mahotsava) ಹಿನ್ನೆಲೆ ಬೆಳಗಾವಿ((Belagavi) ಜಿಲ್ಲೆ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ Tractor rally ಆಯೋಜಿಸಲಾಗಿತ್ತು. ಗೋಕಾಕ ನಗರದಲ್ಲಿರುವ ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ(Balachandra Jarakiholi) ನಿವಾಸ ಇರುವ ಎನ್‌ಎಸ್‌ಎಫ್ ಮೈದಾನ(NSS Ground)ಕ್ಕೆ ಅರಭಾವಿ ಕ್ಷೇತ್ರದ ವಿವಿಧ ಗ್ರಾಮಗಳಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಆಗಮಿಸಿದ್ದವು. 

ಬೆಳಗಾವಿ ಕೋಟೆಕೆರೆಯಲ್ಲಿ ಬೃಹತ್‌ ಧ್ವಜಾರೋಹಣ

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸಹೋದರ ಭೀಮಶಿ ಜಾರಕಿಹೊಳಿ ಪುತ್ರ ಸರ್ವೋತ್ತಮ ಜಾರಕಿಹೊಳಿ ಸಮ್ಮುಖದಲ್ಲಿ Tractor rally ನಡೆಯಿತು.  ಸರ್ವೋತ್ತಮ ಜಾರಕಿಹೊಳಿ ನೇತೃತ್ವದಲ್ಲಿ ನಡೆದ Tractor rally ನೆರವೇರಿತು. ಗೋಕಾಕ ನಗರದಿಂದ ಅರಭಾವಿ ಮಠಕ್ಕೆ ತೆರಳಿ ಅಲ್ಲಿಂದ ಬಡಿಗವಾಡ, ದುರದುಂಡಿ ಮಾರ್ಗವಾಗಿ ಮೂಡಲಗಿ ತಾಲೂಕಿನ ನಾಗನೂರು ಪಟ್ಟಣಕ್ಕೆ ತೆರಳಿತು. ನಾಗನೂರು ಪಟ್ಟಣದಲ್ಲಿ Tractor rally ಸಮಾರೋಪ ಸಮಾರಂಭ ನೆರವೇರಿಸಲಾಯಿತು.‌ 210 ಟ್ರ್ಯಾಕ್ಟರ್‌ಗಳ ಮೇಲೆ ತ್ರಿವರ್ಣ ಧ್ವಜ ಕಟ್ಟಿ ಸಾಲಾಗಿ ರ‌್ಯಾಲಿ ಮೂಲಕ ಹೊರಡುವ ಡ್ರೋನ್ ಕ್ಯಾಮರಾ ದೃಶ್ಯ ನಯನ ಮನೋಹರವಾಗಿತ್ತು.

ಹುಬ್ಬಳ್ಳಿ: ಮುರುಕು ಮನೆಗಳ ಮೇಲೆ ಸಂತ್ರಸ್ತರ ತಿರಂಗಾ..!

ಇದೇ ವೇಳೆ ಮಾತನಾಡಿದ ಸರ್ವೋತ್ತಮ ಜಾರಕಿಹೊಳಿ, 'ಕ್ಷೇತ್ರದಲ್ಲಿ ಎರಡು ದಿನಗಳ ಬೈಕ್ ರ‌್ಯಾಲಿ ಮಾಡುವ ಮೂಲಕ 2500 ಯುವಕರನ್ನು ಸೇರಿಸಿದ್ದೇವು. ರೈತರನ್ನು ಸ್ವಾತಂತ್ರ್ಯ ಅಮೃತಮಹೋತ್ಸವದಲ್ಲಿ ರೈತರನ್ನು ಭಾಗಿಯಾಗಿಸಬೇಕು ಎಂಬ ಉದ್ದೇಶದಿಂದ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ Tractor rally  ಮಾಡಿದ್ದೇವೆ.‌ ಪ್ರತಿ ಗ್ರಾಮಗಳಿಂದಲೂ ರೈತರು ಟ್ರ್ಯಾಕ್ಟರ್‌ಗಳನ್ನು ತಗೆದುಕೊಂಡು ಬಂದಿದ್ದಾರೆ. ತಮ್ಮ ದೊಡ್ಡಪ್ಪ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಬಾಲಚಂದ್ರ ಕ್ಷೇತ್ರದಲ್ಲಿ ಓಡಾಡುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸರ್ವೋತ್ತಮ ಜಾರಕಿಹೊಳಿ ಯುವಕರಿಗೆ ಒಳ್ಳೆಯದಾಗಲಿ ಹಾಗೂ ಸಂಘಟನೆ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Follow Us:
Download App:
  • android
  • ios