INDIA@75: ಚೆನ್ನಮ್ಮ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ಎಂದು ಘೋಷಣೆಯಾಗಲಿ
ಕಿತ್ತೂರಿನ ವೀರ ಮಾತೆ ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀಗಳು ಒತ್ತಾಯಿಸಿದರು
ನರಗುಂದ (ಆ.15) : ಕಿತ್ತೂರಿನ ವೀರ ಮಾತೆ ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀಗಳು ಒತ್ತಾಯಿಸಿದರು. ಅವರು ಭಾನುವಾರ ಐತಿಹಾಸಿಕ ರಾಣಿ ಚೆನ್ನಮ್ಮಾಜಿಯ ಕೋಟೆಯಿಂದ ನಂದಗಡದ ಶೂರ ಸಂಗೊಳ್ಳಿ ರಾಯಣ್ಣ ಸಮಾಧಿ ವರೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಂತರ ನಡಿಗೆ ತಿರಂಗಾ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ಇಲ್ಲದೆ 1857ರಲ್ಲಿ ಹೋರಾಟ ನಡೆಸಿದ ಝಾನ್ಸಿ ರಾಣಿಯನ್ನು ಮೊದಲ ಹೋರಾಟಗಾರ್ತಿ ಎಂದು ಘೋಷಿಸಿ ಮಲತಾಯಿ ಧೋರಣೆ ತೋರಿದೆ. ಆದರೆ ಇದಕ್ಕೂ ಮೊದಲ 1824ರಲ್ಲಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟ ನಡೆಸಿದ್ದಾರೆ. ಈ ಕುರಿತು ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು. ಅಲ್ಲದೆ ರಾಜ್ಯ ಸರ್ಕಾರವು ಇದಕ್ಕೆ ಶಿಫಾರಸು ಮಾಡುವ ಮೂಲಕ ಕೇಂದ್ರ ಸರ್ಕಾರ ಚೆನ್ನಮ್ಮ ದೇಶದ ಮೊದಲ ಮಹಿಳಾ ಹೋರಾಟಗಾರ್ತಿಯೆಂದು ಅಧಿಕೃತವಾಗಿ ಘೋಷಿಸಬೇಕೆಂದು ಒತ್ತಡ ಹಾಕಿದ ಅವರು, ನೆಲ, ನಾಡು, ನುಡಿಯ ವಿಷಯದ ಕುರಿತು ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆಂದು ಹೇಳಿದರು.
India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಭೈರನಹಟ್ಟಿಯ ಶ್ರೀಗಳು ಹಮ್ಮಿಕೊಂಡಿರುವ ಪಾದಯಾತ್ರೆಯು ದೇಶ, ನಾಡಿಗೆ ತ್ಯಾಗ ಬಲಿದಾನವನ್ನು ನೆನಪಿಸುವಂತೆ ಮಾಡುತ್ತಿದೆ. ಕನ್ನಡ ನಾಡು, ನುಡಿಗಾಗಿ ಶ್ರೀಗಳ ಕಾರ್ಯ ನಿರಂತವಾಗಿರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಚೆನ್ನಮ್ಮಾಜಿಯ ಕುರಿತು ಮುಚ್ಚಿಟ್ಟಿರುವ ಸಂಗತಿಗಳನ್ನು ಬಿಚ್ಚಿಡುವ ಅವಶ್ಯಕತೆ ಇದೆ ಎಂದು ಹೇಳಿದರು. ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಿತ್ತೂರು ಕರ್ನಾಟಕದ ಭಾಗದಿಂದ ಪಾದಯಾತ್ರೆನಿರತ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. ದೇವರ ಶಿಗೀಹಳ್ಳಿಯ ಶ್ರೀಗುರು ಮಡಿವಾಳೇಶ್ವರ ಮಠದ ವೀರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
ಕೋಟೆಯಿಂದ ಪಾದಯಾತ್ರೆ ಆರಂಭವಾಯಿತು. ಹೆದ್ದಾರಿ ಪಕ್ಕದ ಚೆನ್ನಮ್ಮಾಜಿ ಪುತ್ಥಳಿ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು. ಬೈಲೂರು ಹಾಗೂ ಬೀಡಿ ಗ್ರಾಮದ ಮುಖಾಂತರ ನಂದಗಡದ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಪಾದಯಾತ್ರೆ ತೆರಳಿತು.
Independence Day: ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿ 18ರ ಹರೆಯದಲ್ಲೇ ವೀರ ಮರಣವನ್ನಪ್ಪಿದ ಸಿಂಗೂರು ಕುಟ್ಟಪ್ಪ!
ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಠದ, ಬಿಇಒ ಆರ್.ಟಿ. ಬಳಿಗಾರ, ಕ್ಯೂರೇಟರ್ ರಾಘವೇಂದ್ರ, ಪ್ರಮುಖರಾದ ಚನ್ನಪ್ಪ ಕಂಠಿ, ಜಗದೀಶ ವಸ್ತ್ರದ, ಸಂದೀಪ ದೇಶಪಾಂಡೆ, ಚಂದ್ರಗೌಡ ಪಾಟೀಲ, ಸಕ್ಕರಗೌಡ ಪಾಟೀಲ, ದಿನೇಶ ವಳಸಂಗ, ಸುಭಾಷ ರಾವಳ, ವಕೀಲ ವಿಶ್ವನಾಥ ಬಿಕ್ಕಣ್ಣವರ, ಸಂಗೊಳ್ಳಿ ರಾಯಣ್ಣ ಸಂಘಟನೆಯ ಅಧ್ಯಕ್ಷ ಮಹಾಂತೇಶ ಕರಬಸನ್ನವರ, ಮಹಾಂತೇಶ ಹಿರೇಮಠ, ಈರಪ್ಪ ಐನಾಪುರ, ಲಿಂಗರಾಜ ಮೊರಬದ, ನಾಗರಾಜ ವೀರನಗೌಡ್ರ ಇದ್ದರು