Asianet Suvarna News Asianet Suvarna News

INDIA@75: ಭಾಲ್ಕಿಯಲ್ಲಿ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯಅಮೃತ ಮಹೋತ್ಸವ ನಡಿಗೆ

  • ಭಾಲ್ಕಿಯಲ್ಲಿ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯಅಮೃತ ಮಹೋತ್ಸವ ನಡಿಗೆ
  • - ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಬೃಹತ್‌ ಪಾದಯಾತ್ರೆ
  • - ನಡಿಗೆಯಲ್ಲಿ ಗಮನ ಸೆಳೆದ ತಮಟೆ, ಲಂಬಾಣಿ ನೃತ್ಯ

 

Independence Amrita Mahotsav walk by Congress in Bhalki rav
Author
Bengaluru, First Published Aug 14, 2022, 9:19 AM IST

- ಭಾಲ್ಕಿ ಆ.14 : ತಾಲೂಕು ಕಾಂಗ್ರೆಸ್‌ ಸಮಿತಿಯಿಂದ ಶನಿವಾರ ಭಾಲ್ಕಿ ಪಟ್ಟಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಪಟ್ಟಣದಾದ್ಯಂತ ರಾಷ್ಟ್ರಧ್ವಜದೊಂದಿಗೆ ನಡೆದ ಸುಮಾರು 10 ಕಿ.ಮೀ ಬೃಹತ್‌ ನಡಿಗೆ ಗಮನ ಸೆಳೆಯಿತು. ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ ಆವರಣದಿಂದ ಆರಂಭಗೊಂಡ ನಡಿಗೆ ಬೊಮ್ಮಗೊಂಡೇಶ್ವರ ವೃತ್ತ, ಚವಡಿ, ಹಿರೇಮಠ ಗಲ್ಲಿ, ಬಸ್‌ ನಿಲ್ದಾಣ, ಮಹಾತ್ಮ ಫುಲೆ ವೃತ್ತ, ಸಂಗಮೇಶ್ವರ ಚಿತ್ರ ಮಂದಿರ ರಸ್ತೆ, ಸರಾಫ್‌ ಬಜಾರ್‌, ಭೀಮನಗರ, ಸುಭಾಷಚಂದ್ರಬೋಸ್‌ ವೃತ್ತ, ಶಿವಾಜಿ ಮಹಾರಾಜರ ವೃತ್ತ, ಗಂಜ್‌ ಏರಿಯಾ, ಡಾ. ಅಂಬೇಡ್ಕರ್‌ ವೃತ್ತ, ಚನ್ನಬಸವಾಶ್ರಮ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಮಹಾತ್ಮ ಗಾಂಧಿ​ ವೃತ್ತದಲ್ಲಿ ಸಮಾರೋಪಗೊಂಡಿತು.

ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯಲ್ಲಿ ಹೈಅಲರ್ಟ್‌: 10000 ಪೊಲೀಸರ ಭದ್ರತೆ

ಶಾಸಕ ಖಂಡ್ರೆ(MLA Eshwar Khandre) ಮತ್ತು ಅವರ ಪುತ್ರ ಸಾಗರ ಖಂಡ್ರೆ ನಡಿಗೆಯ ಕೊನೆಯವರೆಗೂ ಭಾಗವಹಿಸಿ ರಾಷ್ಟ್ರ ಧ್ವಜ(National Flag) ಹಿಡಿದು ದೇಶಪ್ರೇಮ ಮೆರೆದರು. ನಡಿಗೆಯುದ್ದಕ್ಕೂ ಸಾವಿರಾರೂ ವಿದ್ಯಾರ್ಥಿಗಳು, ಯುವಕರು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ರಾಷ್ಟ್ರಧ್ವಜ ಹಿಡಿದು ಶಿಸ್ತಿನಿಂದ ಭಾಗವಹಿಸಿದರು. ಡಿಜೆ ಸೌಂಡ್‌ನಲ್ಲಿ ದೇಶಭಕ್ತಿ ಗೀತೆಗಳಿಗೆ ಯುವಕರು ಹೆಜ್ಜೆ ಹಾಕಿದರು. ತಮಟೆ, ಲಂಬಾಣಿ ನೃತ್ಯ ನಡಿಗೆಯಲ್ಲಿ ಗಮನ ಸೆಳೆದವು. ಅಭಿಮಾನಿಗಳು, ಕಾರ್ಯಕರ್ತರು ಶಾಸಕ ಖಂಡ್ರೆ ಅವರನ್ನು ಹೆಗಲ ಮೇಲೆ ಕುಡಿಸಿಕೊಂಡು ಕುಣಿದು ಸಂಭ್ರಮಿಸಿದರು.

ಶಾಸಕ ಖಂಡ್ರೆಗೆ ಜೆಸಿಬಿ ಮೂಲಕ ಪುಷ್ಪವೃಷ್ಟಿ: ನಡಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಈಶ್ವರ ಖಂಡ್ರೆ ಅವರ ಮೈಮೇಲೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಸುರಿದು ಅಭಿಮಾನ ಮೆರೆದರು. ಪಟ್ಟಣದ ಚನ್ನಬಸವಾಶ್ರಮ ಸಮೀಪ ಶಾಸಕರ ನಡಿಗೆ ಬರುತ್ತಿದ್ದಂತೆಯೇ ಜೆಸಿಬಿ ಮೇಲೆ ನಿಂತು ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್‌, ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ಕೋಸಂಬೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ, ರಾಹುಲ ಪೂಜಾರಿ ಸೇರಿ ಮುಂತಾದವರು ಶಾಸಕರ ಮೇಲೆ ಪುಷ್ಪವೃಷ್ಟಿಮಾಡಿದರು.

 

40 ಪರ್ಸೆಂಟ್‌ ಅಲ್ಲ, 100ಕ್ಕೆ ನೂರು ಭ್ರಷ್ಟ ಸರ್ಕಾರ: ಈಶ್ವರ ಖಂಡ್ರೆ

ಪಟ್ಟಣದಲ್ಲಿ ನಡೆದ ರಾಷ್ಟ್ರಧ್ವಜ ದೊಂದಿಗಿನ ನಡಿಗೆಯಲ್ಲಿ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ್‌, ಎಂಎಲ್ಸಿ ಭೀಮರಾವ ಪಾಟೀಲ್‌, ಬೀದರ್‌ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ, ಕಲಬುರಗಿಯ ಶರಣು ಮೋದಿ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾಶೆಟ್ಟೆ, ಮಲ್ಲಿಕಾರ್ಜುನ ಪಾಟೀಲ್‌ ಮುಗನೂರ್‌, ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್‌, ಅಶೋಕ ಸೋನಜೀ, ಮಡಿವಾಳಪ್ಪ ಮಂಗಲಗಿ, ಅಮೃತರಾವ ಚಿಮಕೋಡ್‌, ಶಿವರಾಜ ಹಾಸನಕರ್‌ ಇತರರಿದ್ದರು.

Follow Us:
Download App:
  • android
  • ios