Asianet Suvarna News Asianet Suvarna News

ನಿಮ್ಮ ದೂರು ಯಾರೂ ಕೇಳಿಸದಿದ್ದರೆ ನೇರವಾಗಿ ಪ್ರಧಾನಿ ಮೋದಿಗೆ ನೀಡಿ, ಇಲ್ಲಿದೆ ಸುಲಭ ವಿಧಾನ!

ನಿಮ್ಮ ಸಮಸ್ಸೆಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ಕೆಲಸಗಳು ಆಗುತ್ತಿಲ್ಲ, ನಿಮಗೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ ಎಂದಾದರೆ ನೇರವಾಗಿ ಪ್ರಧಾನಿ ಮೋದಿಗೆ ದೂರು ನೀಡಲು ಸಾಧ್ಯ. ಅತೀ ಸುಲಭ ಹಾಗೂ ಸರಳವಾಗಿ ದೂರು ಸಲ್ಲಿಸಲು ಸಾಧ್ಯವಿದೆ, ನಿಮ್ಮ ಸಮಸ್ಯೆಯನ್ನು ಪ್ರಧಾನಿ ಮೋದಿಗೆ ನೇರವಾಗಿ ನೀಡಲು ಇಲ್ಲಿದೆ ಸುಲಭ ಟಿಪ್ಸ್

File your complaint directly to PM Modi here are easy steps to contact Prime Minister of India ckm
Author
First Published Mar 4, 2024, 8:09 PM IST

ನವದೆಹಲಿ(ಮಾ.04) ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು, ಪರಿಹಾರ ಒದಗಿಸಲು ಸ್ಥಳೀಯ ಶಾಸಕರು, ಜಿಲ್ಲಾಡಳಿತ, ತಾಲೂಕು ಕಚೇರಿ, ಪಂಚಾಯತ್ ಸೇರಿದಂತೆ ಹಲವು ವ್ಯವಸ್ಥೆಗಳಿವೆ. ಪ್ರತಿ ಸಮಸ್ಯೆಗೂ ಇಲಾಖೆಗಳಿವೆ. ಸಿದ್ಧ ಸೂತ್ರಗಳಿವೆ. ಆದರೆ ಅದೆಷ್ಟೋ ಬಾರಿ ದೂರುಗಳನ್ನು ಸ್ವೀಕರಿಸುತ್ತಿಲ್ಲ, ದೂರು ನೀಡಿ ವರ್ಷಗಳೇ ಉರುಳಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ, ಕೆಲಸಗಳು ಆಗುತ್ತಿಲ್ಲ ಎಂದು ಹಲವರು ಅಳಲು ತೋಡಿಕೊಳ್ಳುತ್ತಾರೆ. ಇನ್ನೇನು ಮಾಡಲು ಸಾಧ್ಯ ಎಂದು ಕೈಚೆಲ್ಲುವ ಅಗತ್ಯವಿಲ್ಲ. ಕಾರಣ ನೀವು ನೇರವಾಗಿ ಪ್ರಧಾನಿಗೆ ದೂರು ನೀಡಲು ಸಾಧ್ಯವಿದೆ. ಇದು ಅತೀ ಸುಲಭ ಹಾಗೂ ಸರಳ ವಿಧಾನದ ಮೂಲಕ ದೂರು ನೀಡಿ ಪರಿಪಾರ ಪಡೆಯಲು ಸಾಧ್ಯವಿದೆ.

ಪ್ರಧಾನಿ ಮೋದಿಗೆ ನಿಮ್ಮ ಸಮಸ್ಯೆಗಳನ್ನು, ಪರಿಹಾರಕ್ಕಾಗಿ ದೂರು ನೀಡಲು ಕೆಲ ಆಯ್ಕೆಗಳಿವೆ. ಸುಲಭವಾಗಿ ಆನ್‌ಲೈನ್ ಮೂಲಕ ನೀಡಬಹುದು. ಇದನ್ನು ಹೊರತುಪಡಿಸಿದರೆ ಭಾರತೀಯ ಡಾಕ್ ಮೂಲಕ ಅಥವಾ ಫ್ಯಾಕ್ಸ್ ಮೂಲಕವೂ ದೂರು ನೀಡಲು ಸಾಧ್ಯವಿದೆ. ದೂರನ್ನು ಬರೆದು ಭಾರತೀಯ ಡಾಕ್ ಹಾಗೂ ಫ್ಯಾಕ್ಸ್ ಮೂಲಕ ಪ್ರಧಾನಿಗೆ ತಲುಪಿಸಬಹುದು. ಇನ್ನು ಪತ್ರ ಬರೆದು ಪ್ರಧಾನಿ ಮಂತ್ರಿಗಳ ಕಚೇರಿಗೆ ರವಾನಿಸಬಹುದು. ಆದರೆ ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ಪ್ರಧಾನಿಗೆ ದೂರು ನೀಡಿ ಸಮಸ್ಯೆಗೆ ಉತ್ತರ ಕಂಡುಕೊಳ್ಳಬಹುದು. 

ಬಿಜೆಪಿ ಪಕ್ಷ ನಿಧಿಗೆ 2,000 ರೂ ಡೋನೇಶನ್ ನೀಡಿದ ಮೋದಿ, ದೇಶ ಕಟ್ಟಲು ದೇಣಿಗೆ ಸಂದೇಶ ಸಾರಿದ ಪ್ರಧಾನಿ!

ಪ್ರಧಾನಿಗೆ ಆನ್‌ಲೈನ್ ಮೂಲಕ ದೂರು ನೀಡಲು ಅನುಸರಿಸಬೇಕಾದ ವಿಧಾನ
ಪ್ರಧಾನಿಗೆ ದೂರು ನೀಡಲು ಅಥವಾ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ಪಿಎಂ ಇಂಡಿಯಾ ವೆಬ್‌ಸೈಟ್ (https://www.pmindia.gov.in)  ಕ್ಲಿಕ್ ಮಾಡಬೇಕು.

ಅಧಿಕೃತ ವೆಬ್‌ಸೈಟ್ ತೆರೆದುಕೊಂಡ ಬಳಿಕ ಮೆನು ಕ್ಲಿಕ್ ಮಾಡಬೇಕು, ಇಲ್ಲಿ ನಿಮಗೆ ಮನ್ ಕಿ ಬಾತ್, ಪಿಎಂ ಫಂಡ್, ಲೈಬ್ರರಿ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಾಗಲಿದೆ. ಈ ಪೈಕಿ ಇಂಟರಾಕ್ಟ್ ವಿಥ್ ಪಿಎಂ(Interact with PM) ಅನ್ನೋ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

Interact with PM ಕ್ಲಿಕ್ ಮಾಡಿದ ತಕ್ಷಣ ಪಿಎಂ ಗ್ರಿವೆನ್ಸ್ ಪೋರ್ಟಲ್ (PMO Grievance Portal) ತೆರೆದುಕೊಳ್ಳಲಿದೆ.

ಈ ಪೋರ್ಟಲ್‌ನಲ್ಲ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಉಲ್ಲೇಖಿಸಬೇಕು. ಈ ವೇಳೆ ಒಟಿಪಿ ಬರಲಿದೆ. ಈ ಒಟಿಪಿಯನ್ನು ನಮೂದಿಸಿದ ಬಳಿಕ ಅಲ್ಲೆ ನೀಡಿರುವ ಸೆಕ್ಯೂರಿಟಿ ಕೋಡ್ ಹಾಕಿದರೆ ಲಾಗಿನ್ ಆಗಲಿದೆ.

Modi guarantee: ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಈವರೆಗೂ 56.67 ಕೋಟಿ ಜನ ಸೇರ್ಪಡೆ

ನಿಮ್ಮ ದೂರನ್ನು ಟೈಪ್ ಮಾಡಿ, ಸಂಬಂಧ ಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ದೂರಿನ ವಿವರ ಸೇರಿದಂತೆ ಇತರ ಮಾಹಿತಿಗಳನ್ನು ನೀಡಿ ಸಬ್‌ಮಿಟ್ ಮಾಡಿದರೆ ನಿಮ್ಮ ದೂರು ಪ್ರಧಾನಿಗಳಿಗೆ ತಲುಪಲಿದೆ.

ಫ್ಯಾಕ್ಸ್, ಪತ್ರ, ಆನ್‌ಲೈನ್ ಮೂಲಕ  ಬಂದ ದೂರಗಳನ್ನು ಪರಿಶೀಲಿಸಿಲು ಪ್ರಧಾನಿ ಕಾರ್ಯಾಲಯದಲ್ಲಿ ಒಂದು ತಂಡವಿದೆ. ಈ ತಂಡ ಬಂದಿರುವ ದೂರಿನ ಕುರಿತು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಲಿದೆ. 
 

Follow Us:
Download App:
  • android
  • ios