Asianet Suvarna News Asianet Suvarna News

ದೇಶದ ಅತಿದೊಡ್ಡ ಧ್ವಜಸ್ತಂಭದ ಮೇಲೆ ಧ್ವಜಾರೋಹಣ: ಹೊಸ ದಾಖಲೆ ಬರೆದ ವಿಜಯನಗರ

ದೇಶದ ಅತಿ ಎತ್ತರದ 405 ಅಡಿ  ಧ್ವಜಸ್ತಂಭದ ಮೇಲೆ ಧ್ವಜಾರೋಹಣ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ‌ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪನೆ ಮಾಡಲಾಗಿದೆ. 

Azadi Ka Amrit Mahotsav Independence Day Celebration At Vijayanagara gvd
Author
Bangalore, First Published Aug 15, 2022, 9:19 PM IST

ವರದಿ: ನರಸಿಂಹ ‌ಮೂರ್ತಿ‌ ಕುಲಕರ್ಣಿ

ವಿಜಯನಗರ (ಆ.15): ದೇಶದ ಅತಿ ಎತ್ತರದ 405 ಅಡಿ  ಧ್ವಜಸ್ತಂಭದ ಮೇಲೆ ಧ್ವಜಾರೋಹಣ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ‌ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪನೆ ಮಾಡಲಾಗಿದೆ. ಭಾರತದ ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಹೊಸಪೇಟೆ ನಗರದ ಜಿಲ್ಲೆ ಕ್ರೀಡಾಂಗಣದಲ್ಲಿ 6 ಕೋಟಿ ವೆಚ್ಚದಲ್ಲಿ ಭಾರತದಲ್ಲಿಯೇ ಅತಿ ಎತ್ತರದ ಅಂದ್ರೇ 405 ಅಡಿ  ಎತ್ತರದ ಧ್ವಜ ಸ್ಥಂಭವನ್ನು ಸ್ಥಾಪಿಸಿ ಅದರ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗಿದೆ.  ಪ್ರವಾಸೋದ್ಯಮ ಇಲಾಖೆ  ಮತ್ತು ಆನಂದ ಸಿಂಗ್ ಅವರ ವಯಕ್ತಿಕ ಅನುದಾನದಲ್ಲಿ ಬೃಹತ್ ಸ್ಥಂಭ ನಿರ್ಮಾಣ ಮಾಡಲಾಗಿದೆ. 

ಧ್ವಜಾರೋಹಣ ‌ಮಾಡಲು‌ ಹರಸಾಹಸ: ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ಥಂಬವನ್ನೇನು‌ ನಿರ್ಮಾಣ ಮಾಡಲಾಯಿತು. ಆದರೆ ಆದರ ಮೇಲೆ ಧ್ವಜಾರೋಹಣ ಮಾಡೋದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಕಳೆದೊಂದು ತಿಂಗಳಿಂದ ಪುನಾ ಮೂಲದ ಬಜಾಜ್ ಎಲೆಕ್ಟ್ರಾನಿಕ್ ಕಂಪನಿಯ ತಂತ್ರಜ್ಞಾನ ಸಿಬ್ಬಂದಿ ಹರಸಾಹಸ ಪಟ್ಟು ಧ್ವಜವನ್ನು ನಿರ್ಮಾಣ ಮಾಡಿದರು. ವೇಗವಾಗಿ ಇರೋ ಗಾಳಿಯ ಜೊತೆಗೆ ಗುದ್ದಾಡಿ ಧ್ವಜ ಏರಿಸೋದೇ ದೊಡ್ಡ ಸವಲಾಗಿತ್ತು. ಆಗಸ್ಟ್ ಹದಿನಾಲ್ಕರ ಇಡೀ ರಾತ್ರಿ ತಾಂತ್ರಿಕ ಸಿಬ್ಬಂದಿ ಜೊತೆಗೆ ಸ್ವತಃ ಸಚಿವ ಆನಂದ ಸಿಂಗ್ ಹರಸಾಹಸ ಪಟ್ಟು ಧ್ವಜಾರೋಹಣ ಮಾಡಿದರು. 

ಹಂಪಿಯ ಸ್ಮಾರಕಗಳಲ್ಲಿ ಕಣ್ಮನ ಸೆಳೆಯುವ ತ್ರಿವರ್ಣ ಬೆಳಕಿನ ಚಿತ್ತಾರ

ಸ್ವಾತಂತ್ರ್ಯೋವದ ಸಂಭ್ರಮಾಚರಣೆ: ಒಂದು ಕಡೆ ಅತಿ ಎತ್ತರದ ಧ್ವಜಸ್ಥಂಬದಲ್ಲಿ ಧ್ವಜಾರೋಹಣ ಮಾಡಿತ್ತಿದ್ದಂತೆ ಮತ್ತೊಂದು ಕಡೆ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 76ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂಭ್ರಮಾಚರಣೆ ಕಳೆಗಟ್ಟಿತ್ತು. ವಿಜಯನಗರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ತಂಡಗಳ ಪಥಸಂಚಲನ ವೀಕ್ಷಿಸಿ ಗೌರವ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಸ್ವಾತಂತ್ರೋತ್ಸವದ ‘ಅಜಾದಿ ಕಾ ಅಮೃತ ಮಹೋತ್ಸವ ’ದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಹಾಗೂ ಅದು ನಮ್ಮ ಆದ್ಯ ಕರ್ತವ್ಯವೂ ಆಗಿದೆ ಎಂದರು. ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ಕಪಿಮುಷ್ಟಿಯಿಂದ ಹೋರಾಟದ ಮುಖಾಂತರ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ ಎಂದರು.

ಸ್ವಾತಂತ್ರ್ಯ ನಮಗೆ ಸುಮ್ಮನೆ ಸಿಕ್ಕಲ್ಲ: ಅಂದಿನ ಅನೇಕ ಸ್ವಾತಂತ್ರ್ಯ ಹೋರಾಟಗಾರ ಹೋರಾಟದ ಫಲವನ್ನು ಇಂದು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸರ್ದಾರ್ ವಲ್ಲಬಾಯಿ ಪಟೇಲ್, ನೆಹರು, ಸುಭಾಸ್‍ಚಂದ್ರ ಭೋಸ್, ದಾದಾಬಾಯಿ ನವರೋಜಿ, ವೀರ ಸಾವರ್ಕರ್ , ಮೌಲಾನ ಅಬ್ದುಲ್ ಕಲಾಂ ಆಜಾದ್, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ರಾಜ್‍ಗುರು, ಸುಖದೇವ್, ಮಂಗಲ್‍ಪಾಂಡೆ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಮೊದಲ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಹಾಗೂ ಅಪಾರ ತ್ಯಾಗ ಮಾಡಿದ ಜನರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ. ಹಲವರು  ನಮ್ಮನ್ನು ಅಗಲಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು ಸಲ್ಲಿಸೋಣ ಈ ವೇಳೆ ಆನಂದ ಸಿಂಗ್ ಹೇಳಿದರು.

ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ನಿರ್ಮಾಣ

ಯಾವುದೇ ಫಲಾಪೇಕ್ಷೆ ಇಲ್ಲದೇ ಹೋರಾಟ ಮಾಡಿದ್ರು: ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ದೇಶ ಪ್ರೇಮದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅವರು ಜಾತಿ-ಮತ- ಧರ್ಮಗಳ ಬೇಧವನ್ನು ಮರೆತು ಒಂದುಗೂಡಿ ಹೋರಾಡಿದರು. ಈ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಿಂದ ಇಂದಿನ ಪೀಳಿಗೆಯು ಮುಖ್ಯವಾಗಿ ಯುವಕರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಬಗ್ಗೆ ಪ್ರೇರಣೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ವಿಜಯನಗರ ರಾಜ್ಯವು ಯಾವುದೋ ಒಂದು ಸಣ್ಣ ರಾಜ್ಯವಲ್ಲ, ರಾಜರ ಆಳ್ವಿಕೆ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಜಗತ್ತಿನಲ್ಲೇ ರೋಮ್ ಸಾಮ್ರಾಜ್ಯದ ನಂತರದ ಅತಿದೊಡ್ಡ ಸಾಮ್ರಾಜ್ಯವಾಗಿದ್ದು, ಆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹೊಸಪೇಟೆಯ ಹಂಪಿಯಾಗಿದ್ದು, ಅದು ನಾವು ಹೆಮ್ಮೆಯ ವಿಷಯಾಗಿದೆ. ವಿಜಯನಗರ ಸಾಮ್ರಾಜ್ಯವನ್ನು 15ನೇ ಶತಮಾನದಿಂದ ಅನೇಕ ರಾಜರು ಆಳ್ವಿಕೆ ಮಾಡಿಕೊಂಡು ಬಂದಿದ್ದರೂ, ಶ್ರೀ ಕೃಷ್ಣದೇವರಾಯ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯವು ಸಮೃದ್ಧಿಯಾಗಿ ಬೆಳೆದಿತ್ತು‌ ಎಂದು ಇತಿಹಾಸದ ಪುಟಗಳನ್ನು ಸಚಿವ ಆನಂದ ಸಿಂಗ್ ‌ಮೆಲುಕು ಹಾಕಿದರು.

ಸಾಧಕರಿಗೆ ಸನ್ಮಾನ: ಇನ್ನೂ ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು  ಸನ್ಮಾನಿಸಲಾಯಿತು. ನಂತರ ನಡೆದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

Follow Us:
Download App:
  • android
  • ios